ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯ್ಬಾ (ಎಲ್ಇಟಿ)ದ ಭಯೋತ್ಪಾದಕನನ್ನು ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬಂಧಿತ ಭಯೋತ್ಪಾದಕನನ್ನು ರಫೀಕ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಈತನ ಬಳಿ ಇದ್ದ ಅಪಾರ ಪ್ರಮಾಣದ ಜೀವಂತ ಗ್ರೆನೇಡ್ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕಾ ಪ್ರಕಟನೆಯನ್ನು ಹೊರಡಿಸಿರುವ ಜಮ್ಮು-ಕಾಶ್ಮೀರ ಪೊಲೀಸರು, “ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಹಾಜಿನ್ ಪಟ್ಟಣದ ಕಡೆಗೆ ಭಯೋತ್ಪಾದಕ ಸಂಚರಿಸುತ್ತಿದ್ದಾನೆ ಎಂಬ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಬಂಡೀಪೋರಾ ಪೊಲೀಸರು, 13 ಆರ್ಆರ್ ಮತ್ತು 45 ಬಿಎನ್ ಸಿಆರ್ಪಿಎಫ್ ತಂಡಗಳು ಹಾಜಿನ್ ಪಟ್ಟಣದ ಹಕ್ಬರಾ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು. ಈ ವೇಳೆ ಭಯೋತ್ಪಾದಕ ರಫೀಕ್ ಅಹ್ಮದ್ ತಂಡದ ಮೇಲೆ ಗ್ರೆನೇಡ್ ದಾಳಿಯನ್ನು ನಡೆಸಿ ಪರಾರಿಯಾಗಲು ಪ್ರಯತ್ನಿಸಿದ ಆದರೆ ಈತನನ್ನು ಬಂಧನಕ್ಕೆ ಒಳಪಡಿಸಲಾಯಿತು” ಎಂದು ಹೇಳಿದ್ದಾರೆ.
ಆತನ ಬಳಿಯಿಂದ ಜೀವಂತ ಗ್ರೆನೇಡ್ಗಳು ಮತ್ತು ಮದ್ದುಗುಂಡುಗಳನ್ನು (2 ಲೈವ್ ಗ್ರೆನೇಡ್ಗಳು ಮತ್ತು ಎಕೆ 47 ರ 19 ಲೈವ್ ಸುತ್ತುಗಳು) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ವ್ಯಕ್ತಿ ಇತ್ತೀಚೆಗೆ ಎಲ್ಇಟಿಗೆ ಸೇರ್ಪಡೆಗೊಂಡಿದ್ದ, ಪೋಲಿಸ್ ಮತ್ತು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸುವ ಸಲುವಾಗಿ ಹಾಜಿನ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈತನನ್ನು ನಿಯೋಜಿಸಲಾಗಿತ್ತು.
ಪೊಲೀಸ್ ಠಾಣೆ ಹಾಜಿನ್ನಲ್ಲಿ ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಈತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.