ನವದೆಹಲಿ: ಒಲಿಂಪಿಕ್ಸ್ನಲ್ಲಿ ದೇಶ ಹೆಚ್ಚಿನ ಪದಕಗಳನ್ನು ಗೆಲ್ಲುವಂತೆ ಮಾಡುವ ಪ್ರಯತ್ನವಾಗಿ ಪ್ರತಿ ರಾಜ್ಯಗಳು ತಲಾ ಒಂದು ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಅದರ ಅಭಿವೃದ್ಧಿಯತ್ತ ಗಮನ ಹರಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ರಾಜ್ಯಕ್ಕೂ ಸೂಚನೆಯನ್ನು ನೀಡಿದೆ ಎಂದು ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ಬುಧವಾರ ಹೇಳಿದ್ದಾರೆ.
ಅಸ್ಸೋಚಾಮ್ ಆಯೋಜಿಸಿರುವ ‘ರೋಲ್ ಆಫ್ ಕಾರ್ಪೋರೇಟ್ ಇಂಡಿಯಾ ಫಾರ್ ಫಿಟ್ ಇಂಡಿಯಾ’ ಕುರಿತ ವೆಬ್ನಾರ್ನಲ್ಲಿ ಮಾತನಾಡಿ ರಿಜ್ಜು, ಕಾರ್ಪೊರೇಟ್ ವಲಯಕ್ಕೂ ಇದೇ ರೀತಿಯಾಗಿ ಒಂದು ಕ್ರೀಡೆಯನ್ನು ಅಳವಡಿಸಿಕೊಂಡು ಅದರ ಬೆಳವಣಿಗೆಗೆ ಶ್ರಮಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
“ನಾವು ಒಂದು ಕ್ರೀಡೆಯನ್ನು ಆಯ್ಕೆ ಮಾಡುವಂತೆ ರಾಜ್ಯಗಳಿಗೆ ತಿಳಿಸಿದ್ದೇವೆ. ಉದಾಹರಣೆಗೆ, ಮಣಿಪುರವು ಬಾಕ್ಸಿಂಗ್ ಮತ್ತು ಸೆಪಾಕ್ ತಕ್ರಾವನ್ನು ಆರಿಸಿಕೊಂಡರೂ ಅದು ಫುಟ್ಬಾಲ್ ಅಥವಾ ಬಿಲ್ಲುಗಾರಿಕೆಯನ್ನೂ ಒಟ್ಟಿಗೆ ತೆಗೆದುಕೊಂಡು ಮುನ್ನಡೆಯಬಹುದು. ಆದರೆ ಅದು ಆಯ್ಕೆ ಹೆಚ್ಚಿನ ಗಮನವನ್ನು ಆಯ್ಕೆ ಮಾಡಿಕೊಂಡ ಕ್ರೀಡೆಗಳಾದ ಬಾಕ್ಸಿಂಗ್ ಸೆಪಾಕ್ ತಕ್ರಾಗೆ ನೀಡಬೇಕು ಎಂಬುದು ನಮ್ಮ ಮನವಿಯಾಗಿದೆ” ಎಂದು ರಿಜ್ಜು ಹೇಳಿದ್ದಾರೆ.
“ನಾವು ಪ್ರತಿ ಕಾರ್ಪೋರೇಟ್ಗಳಿಗೆ ನಿರ್ದಿಷ್ಟವಾದ ಶಿಸ್ತು ಅಳವಡಿಸಿಕೊಳ್ಳಲು ಮತ್ತು ಅದರ ಮೇಲೆ ಕೇಂದ್ರೀಕರಿಸಲು ಸೂಚಿಸುವಂತಹ ಕೆಲವು ನೀತಿ ಬದಲಾವಣೆಗಳನ್ನು ಮಾಡಿದ್ದೇವೆ. ಆದರೆ ಇದು ಇತರ ಕ್ರೀಡೆಗಳನ್ನು ಬೆಂಬಲಿಸುವುದನ್ನು ಖಂಡಿತಾ ತಡೆಯುವುದಿಲ್ಲ ” ಎಂದು ಅವರು ಹೇಳಿದ್ದಾರೆ.
ಎಲ್ಲಾ ರಾಜ್ಯಗಳು ತಲಾ ಒಂದು ಕ್ರೀಡೆಯನ್ನು ಸ್ವೀಕರಿಸಬೇಕು, ಭಾರತದಷ್ಟು ದೊಡ್ಡ ದೇಶವು ಅನೇಕ ವಿಭಾಗಗಳತ್ತ ಗಮನ ಹರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ
“ನಾವು 36 ರಾಜ್ಯಗಳನ್ನು ಹೊಂದಿದ್ದೇವೆ ಮತ್ತು ನಾವು 36 ದೇಶಗಳಾಗಿ ಕೆಲಸ ಮಾಡಿದರೆ ಕೆಲವು ಕ್ರೀಡೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದರೆ ಅದು ಫಲಿತಾಂಶವನ್ನು ನೀಡುತ್ತದೆ” ಎಂದು ಅವರು ಹೇಳಿದರು.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ -10 ರಲ್ಲಿ ಸ್ಥಾನ ಗಳಿಸಬಹುದು ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ
“2028ರ ಹೊತ್ತಿಗೆ ಭಾರತವು ಅಗ್ರ 10ರಲ್ಲಿರಬೇಕು ಎಂಬ ಗುರಿಯನ್ನು ನಾನು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.