ನವದೆಹಲಿ: ಟಿಕ್ಟಾಕ್ ನಿಷೇಧದ ಬಳಿಕ ಅದಕ್ಕೆ ಪರ್ಯಾಯವಾಗಿ ಹಲವಾರು ಅಪ್ಲಿಕೇಶನ್ಗಳು ಹೊರಬರುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಇನ್ಸ್ಟಾಗ್ರಾಮ್ ರೀಲ್. ರೀಲ್ಸ್ ಪ್ರಯೋಗವನ್ನು ಭಾರತದಲ್ಲಿ ವಿಸ್ತರಿಸುವುದಾಗಿ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ ಪ್ರಕಟಿಸಿದೆ. ಇದು ಬಳಕೆದಾರರಿಗೆ ಕಿರು ವಿಡಿಯೋಗಳನ್ನು ರೆಕಾರ್ಡ್, ಎಡಿಟ್ ಮತ್ತು ಹಂಚಿಕೊಳ್ಳಲು ನೆರವಾಗಲಿದೆ.
ರೀಲ್ಸ್ನಲ್ಲಿ, ಇನ್ಸ್ಟಾಗ್ರಾಮ್ ಬಳಕೆದಾರರು ಕೂಡ ತಮ್ಮ ಫಾಲೋವರ್ಗಳೊಂದಿಗೆ ಫೀಡ್ನಲ್ಲಿ ಕಿರು ವೀಡಿಯೊಗಳನ್ನು ಹಂಚಿಕೊಳ್ಳಬಹುದು. 15 ಸೆಕೆಂಡುಗಳ ವಿಡಿಯೋ ಮಾಡಲು ಇದರಲ್ಲಿ ಅವಕಾಶವಿದೆ.
“ವೀಡಿಯೊ ಬಳಕೆಯಲ್ಲಿ ಹೆಚ್ಚಳ ಮತ್ತು ಭಾರತದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಮೂರನೇ ಒಂದು ಭಾಗದಷ್ಟು ವಿಡಿಯೋ ಪೋಸ್ಟ್ಗಳು ಇರುವುದರಿಂದ, ದೇಶದ ಅಭಿವ್ಯಕ್ತಿಯಲ್ಲಿ ಇನ್ಸ್ಟಾಗ್ರಾಮ್ಗೆ ದೊಡ್ಡ ಪಾತ್ರವಿದೆ” ಎಂದು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಹೇಳಿದ್ದಾರೆ.
“ರೀಲ್ಸ್ನೊಂದಿಗೆ, ನಾವು ಸೃಜನಶೀಲತೆಯನ್ನು ಬೆಳಗಿಸುವ ರೀತಿಯಲ್ಲಿ ಫ್ಲಾಟ್ಫಾರ್ಮ್ನ ಮನರಂಜನೆಯ ಭವಿಷ್ಯವನ್ನು ಅನಾವರಣಗೊಳಿಸುತ್ತಿದ್ದೇವೆ. ಬಹು ಸೃಜನಶೀಲ ಸ್ವರೂಪಗಳೊಂದಿಗೆ, ನೀವು ಯಾವುದೇ ರೀತಿಯಲ್ಲಿ ಅಭಿವ್ಯಕ್ತಪಡಿಸಲು ಬಯಸುತ್ತೀರೋ ಅದು ಈಗ ಇದರಲ್ಲಿದೆ” ಎಂದಿದ್ದಾರೆ.
ಒಟ್ಟಾರೆಯಾಗಿ ಟಿಕ್ ಟಾಕ್ ಬ್ಯಾನ್ ಆದ ಬಳಿಕ ದೇಶದಲ್ಲಿ ಅದಕ್ಕೆ ಪರ್ಯಾಯವಾದ ಹಲವಾರು ಅಪ್ಲಿಕೇಶನ್ಗಳು ಹೊರಬರುತ್ತಿವೆ. ಹೀಗಾಗಿ ಟಿಕ್ಟಾಕ್ ಬಳಕೆದಾರರು ನಿಶ್ಚಿಂತೆಯಾಗಿ ತಮ್ಮ ಮನೋರಂಜನಾ ಕಾರ್ಯವನ್ನು ಮುಂದುವರೆಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.