ನವದೆಹಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವ ದೇಶದ ಕೂಗಿಗೆ ಭಾರತದ ಅತಿದೊಡ್ಡ ಸೈಕಲ್ ತಯಾರಕ ಕಂಪನಿ ಹೀರೋ ಸೈಕಲ್ಸ್ ಧ್ವನಿಗೂಡಿಸಿದೆ. ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಕಸಿದುಕೊಳ್ಳುವುದಾಗಿ ಅದು ಘೋಷಣೆ ಮಾಡಿದೆ. ಹೀರೋ ಸೈಕಲ್ಸ್ನ ಮುಖ್ಯಸ್ಥ ಪಂಕಜ್ ಮುಂಜಾಲ್ ಅವರು ಈ ಬಗ್ಗೆ ಘೋಷಣೆ ಮಾಡಿ, ಮುಂಬರುವ ಮೂರು ತಿಂಗಳಲ್ಲಿ ಹೀರೋ ಸೈಕಲ್ಸ್ ಚೀನಾದೊಂದಿಗೆ 900 ಕೋಟಿ ರೂ.ಗಳ ವಹಿವಾಟು ನಡೆಸಬೇಕಿತ್ತು, ಆದರೆ ಈಗ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ವರದಿಯ ಪ್ರಕಾರ, ಮುಂಜಾಲ್ ಅವರು ಈಗ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಲು ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಿದ್ದಾರೆ ಮತ್ತು ಪ್ರಸ್ತುತ ಜರ್ಮನಿ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜರ್ಮನಿಯಲ್ಲಿ ಘಟಕ ಸ್ಥಾಪಿಸುವುದರಿಂದ ಯುರೋಪಿನ್ ಮಾರುಕಟ್ಟೆಯಲ್ಲಿ ಹೀರೋಗೆ ಭದ್ರವಾಗಿ ನೆಲೆವೂರಲು ಸಾಧ್ಯವಾಗಲಿದೆ.
ಬೈಸಿಕಲ್ಗಳ ಬೇಡಿಕೆಯ ಬಗ್ಗೆ ಮಾತನಾಡಿದ ಮುಂಜಾಲ್ ಅವರು, ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗಿದೆ ಮತ್ತು ಹೀರೋ ಸೈಕಲ್ಸ್ ಅದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ, ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ಸಣ್ಣ ಕಂಪನಿಗಳು ನಷ್ಟವನ್ನು ಅನುಭವಿಸಿವೆ ಮತ್ತು ಅವರಿಗೆ ಸಹಾಯ ಮಾಡುವ ಸಲುವಾಗಿ, ಹೀರೋ ಸೈಕಲ್ಸ್ ಅವರಿಗೆ ತಾಂತ್ರಿಕ ಸಹಾಯವನ್ನು ಒದಗಿಸುತ್ತಿದೆ, ಇದರಿಂದಾಗಿ ಅವುಗಳು ಕೂಡ ಉನ್ನತ ಮಟ್ಟದ ಬೈಸಿಕಲ್ ಭಾಗಗಳನ್ನು ಉತ್ಪಾದಿಸಬಹುದು ಮತ್ತು ಅವುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗಿಲ್ಲ.
ಮುಂಜಾಲ್ ಅವರು ಲುಧಿಯಾನದ ಧನನ್ಸು ಗ್ರಾಮದಲ್ಲಿ ಮುಂಬರುವ ಸೈಕಲ್ ವ್ಯಾಲಿಯಲ್ಲಿ ನಂಬಿಕೆ ಇಟ್ಟಿದ್ದಾರೆ, ಅದು ಒಮ್ಮೆ ಸಿದ್ಧವಾದರೆ ಭಾರತಕ್ಕೆ ಚೀನಾದೊಂದಿಗೆ ಸ್ಪರ್ಧಿಸಲು ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.