ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಫೇಸ್ಬುಕ್ನ ಸಹಭಾಗಿತ್ವದೊಂದಿಗೆ ಡಿಜಿಟಲ್ ಸುರಕ್ಷತೆ ಮತ್ತು ಆನ್ಲೈನ್ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಅಲ್ಲದೇ ವರ್ಧಿತ/ ವರ್ಚುವಲ್ ರಿಯಾಲಿಟಿ ಕುರಿತು ಶಿಕ್ಷಕರಿಗೆ ತರಬೇತಿಯನ್ನೂ ನೀಡಲಿದೆ.
ಕೊರೋನಾವೈರಸ್ ಕಾರಣದಿಂದಾಗಿ ಪರಿಚಯಿಸಲಾಗಿರುವ ಆನ್ಲೈನ್ ತರಗತಿಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್ ಬಳಕೆ, ಇ-ಲರ್ನಿಂಗ್ಗಳು ಆನ್ಲೈನ್ ನಿಂದನೆ, ಬೆದರಿಸುವಿಕೆ, ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಇಂಟರ್ನೆಟ್ ವ್ಯಸನದ ಬೆದರಿಕೆಯನ್ನು ಒಡ್ಡುತ್ತಿವೆ. ಹೀಗಾಗಿ, ಸಿಬಿಎಸ್ಇ ತನ್ನ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಮತ್ತು ಸಮಗ್ರ ತರಬೇತಿ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ 2020ರ ಆಗಸ್ಟ್ನಿಂದ ನವೆಂಬರ್ ವರೆಗೆ ವರ್ಚುವಲ್ ಮೋಡ್ನಲ್ಲಿ ಪ್ರಾರಂಭಿಸಲು ಫೇಸ್ಬುಕ್ ಇಂಡಿಯಾದೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.
ಭಾಗವಹಿಸುವವರು ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸಿಬಿಎಸ್ಇ ಮತ್ತು ಫೇಸ್ಬುಕ್ನಿಂದ ಜಂಟಿ ಇ-ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದಾರೆ.
ತರಬೇತಿ ಕಾರ್ಯಕ್ರಮವು ಮೂರು ವಾರಗಳಾದ್ದಾಗಿದ್ದು, 10,000 ಶಿಕ್ಷಕರಿಗೆ ವರ್ಚುವಲ್ ರಿಯಾಲಿಟಿ ಬಗ್ಗೆ ತರಬೇತಿ ನೀಡಲಾಗುವುದು ಮತ್ತು 10,000 ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆಯ ಬಗ್ಗೆ ತರಬೇತಿ ನೀಡಲಾಗುವುದು. ಡಿಜಿಟಲ್ ಸುರಕ್ಷತಾ ವಿಭಾಗದಡಿಯಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು ಇನ್ಸ್ಟಾಗ್ರಾಮ್ ಟೂಲ್ಕಿಟ್ ಬಗ್ಗೆ ತರಬೇತಿ ನೀಡಲಾಗುವುದು. ನೋಂದಣಿ ಪ್ರಕ್ರಿಯೆ ಜುಲೈ 6 ರಿಂದ 20 ರವರೆಗೆ ನಡೆಯಲಿದೆ. ಶಿಕ್ಷಕರ ಕಾರ್ಯಕ್ರಮವನ್ನು ಆಗಸ್ಟ್ 10 ರಂದು ಪ್ರಾರಂಭಿಸಲಾಗುವುದು ಮತ್ತು ವಿದ್ಯಾರ್ಥಿಗಳ ತರಬೇತಿ ಆಗಸ್ಟ್ 6 ರಿಂದ ಪ್ರಾರಂಭವಾಗುತ್ತದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.