ನವದೆಹಲಿ: 9 ಖಲಿಸ್ಥಾನಿ ಸಂಬಂಧಿತ ಭಯೋತ್ಪಾದಕರನ್ನು ಗೊತ್ತುಪಡಿಸಲಾದ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆಗೊಳಿಸಿದ ನಂತರ, ಕೇಂದ್ರವು ಭಾನುವಾರ ಯುಎಪಿಎ ಅಡಿಯಲ್ಲಿ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ)ನ 40 ವೆಬ್ಸೈಟ್ಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಿದೆ.
ಯುಎಸ್ ಮೂಲದ ಕಾನೂನುಬಾಹಿರ ಸಂಘಟನೆಯಾದ ಎಸ್ಎಫ್ಜೆಗೆ ಸೇರಿದ ಕನಿಷ್ಠ 40 ವೆಬ್ಸೈಟ್ಗಳನ್ನು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಿರ್ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ಭಾನುವಾರ ತಿಳಿಸಿದೆ.
“ಯುಎಪಿಎ, 1967 ರ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಪ್ರತ್ಯೇಕತಾವಾದಿ ಕಾರಣಕ್ಕಾಗಿ ಬೆಂಬಲಿಗರನ್ನು ನೋಂದಾಯಿಸುವ ಅಭಿಯಾನವನ್ನು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಎಸ್ಎಫ್ಜೆಗೆ ಸಂಬಂಧಿಸಿದ 40 ವೆಬ್ಸೈಟ್ಗಳನ್ನು ನಿಷೇಧಿಸಲು ಸೂಚನೆ ನೀಡಿದೆ ”ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭಾರತದಲ್ಲಿನ ಸೈಬರ್ ಜಾಗವನ್ನು ಮೇಲ್ವಿಚಾರಣೆ ಮಾಡುವ ನೋಡಲ್ ಪ್ರಾಧಿಕಾರ MEITYದ ಮೂಲಕ ಐ.ಟಿ ಸೆಕ್ಷನ್ 69 ಎ ಅಡಿಯಲ್ಲಿ 40 ವೆಬ್ಸೈಟ್ಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಲಾಗಿದೆ.
ಕಳೆದ ವರ್ಷ, ಗೃಹ ಸಚಿವಾಲಯವು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಎಸ್ಎಫ್ಜೆ ನಿಷೇಧಿಸಿತ್ತು. ಎಸ್ಎಫ್ಜೆ ತನ್ನ ಪ್ರತ್ಯೇಕತಾವಾದಿ ಕಾರ್ಯಸೂಚಿಯ ಭಾಗವಾಗಿ ಸಿಖ್ ಜನಾಭಿಪ್ರಾಯ 2020ಕ್ಕೆ ಒತ್ತಾಯಿಸುತ್ತಿದೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) (ಯುಎಪಿಎ) ಕಾಯ್ದೆಯಡಿ ಭಾರತವು ಒಂಬತ್ತು ಖಲಿಸ್ಥಾನಿ ಭಯೋತ್ಪಾದಕರನ್ನು ಗೊತ್ತುಪಡಿಸಿದ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬುಧವಾರ ಘೋಷಿಸಿತ್ತು. “ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಬದ್ಧತೆ ಮತ್ತು ಭಯೋತ್ಪಾದನೆಯನ್ನು ಸಹಿಸಿಕೊಳ್ಳದ ಮೋದಿ ಸರ್ಕಾರದ ನೀತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಯುಎಪಿಎ ಕಾಯ್ದೆಯ ನಿಬಂಧನೆಗಳ ಪ್ರಕಾರ ಒಂಬತ್ತು ಜನರನ್ನು ಗೊತ್ತುಪಡಿಸಿದ ಭಯೋತ್ಪಾದಕರು ಎಂದು ಘೋಷಿಸಿದೆ” ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.