
ನವದೆಹಲಿ: ಕಠಿಣ ಭೂಪ್ರದೇಶದಲ್ಲಿ ನಿಂತು ದೇಶವನ್ನು ಕಾಪಾಡುತ್ತಿರುವ ಭಾರತೀಯ ಸೇನೆಯ ಬಗ್ಗೆ ಕೆಲವರು ವಿನಾ ಕಾರಣ ಸಂಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಚೀನಿ ಯೋಧರೊಂದಿಗೆ ಪರಾಕ್ರಮದೊಂದಿಗೆ ಹೋರಾಡಿದ ಯೋಧರನ್ನೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕ್ಕೆ ಒಳಪಡಿಸುತ್ತಿದ್ದಾರೆ.
ಪಟ್ಟಭದ್ರಹಿತಾಸಕ್ತಿಗಳ ಸಂಶಯವನ್ನು ನಿವಾರಣೆ ಮಾಡಲು ಭಾರತೀಯ ಸೇನೆ ಪದೇ ಪದೇ ಸ್ಪಷ್ಟನೆಯನ್ನು ನೀಡಬೇಕಾಗಿರುವುದು ಮಾತ್ರ ವಿಪರ್ಯಾಸವೇ ಆಗಿದೆ.
ಲಡಾಖ್ಗೆ ಭೇಟಿ ನೀಡಿದ್ದ ಮೋದಿ ಮಿಲಿಟರಿ ಆಸ್ಪತ್ರೆಗೆ ತೆರಳಿ ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಮಾತನಾಡಿಸಿ ಅವರಿಗೆ ಚೈತನ್ಯವನ್ನು ತುಂಬಿದ್ದಾರೆ. ಆದರೆ ಕೆಲವರು ಅದು ಆಸ್ಪತ್ರೆಯೇ ಅಲ್ಲ, ಅಲ್ಲಿರುವವರು ಯೋಧರೇ ಅಲ್ಲ, ಮೋದಿ ಮಾಡಿದ್ದು ನಾಟಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಬರೆದು ಹಾಕುತ್ತಿದ್ದಾರೆ.
ಇವರುಗಳ ಸಂಶಯಗಳನ್ನು ನಿವಾರಣೆ ಮಾಡಲು ಸ್ವತಃ ಸೇನೆಯೇ ಸ್ಪಷ್ಟನೆಯನ್ನು ಹೊರಡಿಸಿದೆ.
“ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 3, 2020 ರಂದು ಲೇಹ್ನ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿ ನೀಡಿದ ಸೌಲಭ್ಯದ ಸ್ಥಿತಿಗತಿ ಕುರಿತು ಕೆಲವು ಭಾಗಗಳಲ್ಲಿ ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳಿವೆ. ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳ ವೀರರ ಬಗೆಗಿನ ಸಂಶಯ ದುರಾದೃಷ್ಟಕರ. ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡುತ್ತದೆ” ಎಂದಿದ್ದಾರೆ.
ಈ ಸೌಲಭ್ಯವು 100 ಹಾಸಿಗೆಗಳ ಬಿಕ್ಕಟ್ಟು ವಿಸ್ತರಣೆಯ ಸಾಮರ್ಥ್ಯದ ಭಾಗವಾಗಿದೆ ಮತ್ತು ಇದು ಜನರಲ್ ಆಸ್ಪತ್ರೆ ಸಂಕೀರ್ಣದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ.
ಕೋವಿಡ್-19 ಪ್ರೋಟೋಕಾಲ್ ಪ್ರಕಾರ ಜನರಲ್ ಆಸ್ಪತ್ರೆಯ ಕೆಲವು ವಾರ್ಡ್ಗಳನ್ನು ಪ್ರತ್ಯೇಕ ಸೌಲಭ್ಯಗಳಾಗಿ ಪರಿವರ್ತಿಸಬೇಕಾಗಿತ್ತು. ಆದ್ದರಿಂದ, ಸಾಮಾನ್ಯವಾಗಿ ಟ್ರೈನಿಂಗ್ ಆಡಿಯೊ ವಿಡಿಯೋ ಹಾಲ್ ಅನ್ನು ವಾರ್ಡ್ ಆಗಿ ಪರಿವರ್ತಿಸಲಾಯಿತು, ಗಾಯಗೊಂಡ ಸೈನಿಕರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದೆ.
ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾಣೆ ಮತ್ತು ಸೇನಾ ಕಮಾಂಡರ್ ಕೂಡ ಗಾಯಗೊಂಡ ವೀರರನ್ನು ಅದೇ ಸ್ಥಳದಲ್ಲಿ ಭೇಟಿ ಮಾಡಿದ್ದಾರೆ.
#IndianArmy clarification on status of facility at General Hospital, Leh.https://t.co/LmEOrk0Hyf pic.twitter.com/s1biqIVpN4
— ADG PI – INDIAN ARMY (@adgpi) July 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


