
ನವದೆಹಲಿ: ಭಾರತೀಯ ರೈಲ್ವೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ನಾಲ್ಕು ಸೆಟ್ಗಳ ವಿದ್ಯುತ್ ಲೋಕೋಮೋಟಿವ್ನೊಂದಿಗೆ ನಾಲ್ಕು ಖಾಲಿ BOXN ರೇಕ್ಗಳನ್ನು ಒಟ್ಟುಗೂಡಿಸಿ 2.8 ಕಿಲೋಮೀಟರ್ ಉದ್ದದ ರೈಲನ್ನು ಭಾರತೀಯ ರೈಲ್ವೆ ಮುನ್ನಡೆಸುತ್ತಿದೆ. ಸೂಪರ್-ಲಾಂಗ್ ರೈಲಿಗೆ ‘ಶೇಷ್ನಾಗ್’ ಎಂದು ಹೆಸರಿಡಲಾಗಿದ್ದು, ಇದು ಭಾರತೀಯ ರೈಲ್ವೆಯಿಂದ ಚಲಿಸಲ್ಪಡುತ್ತಿರುವ ಅತಿ ಉದ್ದದ ರೈಲಾಗಿದೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಸಾಧನೆಯನ್ನು ಶ್ಲಾಘಿಸಿದ್ದು, “2.8 ಕಿ.ಮೀ ಉದ್ದದ ಸರಕು ಸಾಗಣೆ ರೈಲನ್ನು ರೈಲ್ವೆ ಯಶಸ್ವಿಯಾಗಿ ನಿರ್ವಹಿಸಿದೆ. ಶೇಷನಾಗ್ ಹೆಸರಿನ ಉದ್ದದ ರೈಲನ್ನು ಸಂಚರಿಸುವಂತೆ ಮಾಡಲು 4 ರೇಕ್ಗಳನ್ನು ಒಟ್ಟುಗೂಡಿಸಲಾಯಿತು, ಈ ಪ್ರಯೋಗ ಯಶಸ್ವಿಯಾಗಿದೆ. ಇದರಿಂದ ಹೆಚ್ಚಿನ ಸರಕುಗಳನ್ನು ಕಳುಹಿಸಲು ಅವಕಾಶ ಸಿಕ್ಕಿದೆ. ಒಂದು ಸಮಯದಲ್ಲಿ ಮತ್ತೊಂದು ಸ್ಥಳಕ್ಕೆ ಅತೀ ಹೆಚ್ಚಿನ ಸರಕನ್ನು ಸಾಗಿಸಬಲ್ಲದು” ಎಂದಿದ್ದಾರೆ.
ಭಾರತೀಯ ರೈಲ್ವೆಯ ಸೌತ್ ಈಸ್ಟ್ ಸೆಂಟ್ರಲ್ ವಲಯದಲ್ಲಿ ಈ ಸಾಧನೆ ಮಾಡಲಾಗಿದೆ. ರೈಲಿನಲ್ಲಿ ನಾಲ್ಕು ಖಾಲಿ BOXN ರೇಕ್ಗಳಿವೆ. ಪ್ರಸ್ತುತ, ರೈಲ್ವೆ ತನ್ನ ನೆಟ್ವರ್ಕ್ನಲ್ಲಿ ಸರಕು ರೈಲುಗಳ ಸಂಚಾರಕ್ಕೆ ಆದ್ಯತೆ ನೀಡುತ್ತಿದೆ. ಪ್ರಯಾಣಿಕರ ರೈಲು ಕಾರ್ಯಾಚರಣೆಯನ್ನು ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ.
ರಾಷ್ಟ್ರೀಯ ಸಾರಿಗೆಯಾದ ರೈಲ್ವೆ ಏಕಕಾಲದಲ್ಲಿ ದೊಡ್ಡ ಪ್ರಮಾಣದ ಸರಕುಗಳನ್ನು ಸಾಗಣೆ ಮಾಡಲು ಪ್ರಯತ್ನಿಸುತ್ತಿದೆ.ಇದರಿಂದ ಸಾರಿಗೆಯ ಸಮಯ ಉಳಿತಾಯವಾಗುತ್ತದೆ ಮತ್ತು ರೈಲು ಮಾರ್ಗ ಹಾಳಾಗುವುದೂ ತಪ್ಪುತ್ತದೆ.
Indian Railways breaks another record. Operates 'SheshNaag', a 2.8 Km long train amalgamating 4 empty BOXN rakes, powered by 4 sets of electric locomotives
'SheshNaag' is the longest train ever to run on Indian Railways. pic.twitter.com/t3fKKVJSkJ
— Ministry of Railways (@RailMinIndia) July 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


