
ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಭಾರತೀಯ ಅಮೆರಿಕನ್ನರು ಮತ್ತು ತೈವಾನ್ ಅಮೆರಿಕನ್ನರು, ಟಿಬೆಟಿಯನ್ ಅಮೆರಿಕನ್ನರು ಚೀನಾ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಚೀನಾದ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಚೀನಾ ವಿರುದ್ಧ ಫಲಕಗಳನ್ನು ಹಿಡಿದು ಘೋಷಣೆ ಕೂಗಿದ ಪ್ರತಿಭಟನಾಕಾರರ ‘ಚೀನಾವನ್ನು ಬಹಿಷ್ಕರಿಸಿ’ ಎಂದು ಅಮೆರಿಕನ್ನರಿಗೆ ಕರೆ ನೀಡಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಗಡಿ ಘರ್ಷಣೆಯ ನಂತರ 20 ಭಾರತೀಯ ಸೈನಿಕರು ಸಾವನ್ನಪ್ಪಿದರು ಮತ್ತು 76 ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ ಭಾರತೀಯರು ಚೀನಾ ವಿರುದ್ಧ ಆರ್ಥಿಕ ಸಮರವನ್ನೇ ಸಾರಿದ್ದಾರೆ.
ನ್ಯೂಯಾರ್ಕ್ನಲ್ಲಿ ಕೊರೋನಾವೈರಸ್ ಪ್ರಭಾವ ಇದ್ದರೂ ಕೂಡ ಲೆಕ್ಕಿಸದೆ ಹಲವಾರು ಭಾರತೀಯ ಮೂಲದ ಅಮೆರಿಕನ್ನರು, ಟಿಬೆಟಿಯನ್ ಸಮುದಾಯದ ಸದಸ್ಯರು ಮತ್ತು ತೈವಾನೀಸ್ ಅಮೆರಿಕನ್ನರು ಚೀನಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
USA: Members of the Indian-American community, Tibetan community and Taiwanese-American community stage a demonstration at Times Square in New York, against China. The protestors also demanded for the boycott of Chinese products. pic.twitter.com/dQDLEs0ZkF
— ANI (@ANI) July 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


