ನವದೆಹಲಿ: ಕೇಂದ್ರ ಸಚಿವ ಆರ್.ಕೆ.ಸಿಂಗ್ ನೇತೃತ್ವದ ವಿದ್ಯುತ್ ಸಚಿವಾಲಯವು ಚೀನಾದಿಂದ ಆಮದನ್ನು ನಿರ್ಬಂಧಿಸಲು ಮುಂದಾಗಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಗಳು ಮತ್ತು ನೆಟ್ವರ್ಕ್ಗಳಿಗೆ ಬಳಸುವ ಸಲಕರಣೆಗಳನ್ನು ಚೀನಾದಿಂದ ಆಮದು ಮಾಡುವುದನ್ನು ನಿಲ್ಲಿಸಲು ಅದು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಮಾತ್ರವಲ್ಲದೇ, ಚೀನಾವನ್ನು ಪಾಕಿಸ್ಥಾನದ ಜೊತೆಗೆ ʼಪೂರ್ವ ಉಲ್ಲೇಖ ಪಟ್ಟಿʼಯಲ್ಲಿ ಇರಸಲಾಗಿದೆ. ಇದರ ಪರಿಣಾಮವಾಗಿ, ಚೀನಾದಿಂದ ವಿದ್ಯುತ್ ಸರಬರಾಜು ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಈಗ ಸಚಿವಾಲಯದ ಪೂರ್ವ ಮತ್ತು ಸ್ಪಷ್ಟ ಅನುಮತಿ ಅಗತ್ಯವಿರುತ್ತದೆ. ಇದಲ್ಲದೆ, ಯಾವುದೇ ಮಾಲ್ವೇರ್, ಟ್ರೋಜನ್ ವೈರಸ್ಗಳು ಅಥವಾ ಇತರ ಸೈಬರ್ ಅಟ್ಯಾಕ್ಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಆಮದು ಮಾಡಿದ ಉಪಕರಣಗಳು, ಘಟಕಗಳು ಮತ್ತು ಭಾಗಗಳ ಕಡ್ಡಾಯ ಪರೀಕ್ಷೆಗಳು ಮತ್ತು ತಪಾಸಣೆಗಳನ್ನು ನಡೆಸಲಾಗಿತ್ತು.
“2018-19ರಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಒಟ್ಟು 71,000 ಕೋಟಿ ರೂಪಾಯಿ ಆಮದನ್ನು ಮಾಡಲಾಗಿದೆ, ಅದರಲ್ಲಿ 21,000 ಕೋಟಿ ರೂಪಾಯಿ ಆಮದು ಚೀನಾದಿಂದ ಬಂದಿದೆ. ಇದನ್ನು ನಾವು ಸಹಿಸಲಾರೆವು. ನಮ್ಮ ಪ್ರದೇಶವನ್ನು ಅತಿಕ್ರಮಿಸಲು ಪ್ರಯತ್ನಿಸುವ ದೇಶ, ನಮ್ಮ ಸೈನಿಕರನ್ನು ಕೊಲ್ಲುವ ದೇಶಕ್ಕೆ ನಾವು ಉದ್ಯೋಗಗಳನ್ನು ಸೃಷ್ಟಿಕೊಡಲು ಸಾಧ್ಯವೇ? ” ಇಂದು ಸಚಿವ ಸಿಂಗ್ ಹೇಳಿದ್ದಾರೆ.
“ನಾವು ಉಪಕರಣಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ ವೇಳೆ ನಾವು ಆ ದೇಶಕ್ಕೆ ಹೋಗಿ ಉದ್ಯೋಗಗಳನ್ನು ಸೃಷ್ಟಿಸುವ. ಪೂರ್ವ-ಉಲ್ಲೇಖಿತ ಪಟ್ಟಿಯಲ್ಲಿನ ದೇಶಗಳಿಂದ ಖರೀದಿಸದಿರಲು ನಾವು ನಿರ್ಧರಿಸಿದ್ದೇವೆ. ಚೀನಾ ಮತ್ತು ಪಾಕಿಸ್ಥಾನದಿಂದ ಆಮದು ಮಾಡಿಕೊಳ್ಳುವ ಯಾವುದೇ ಸಾಧನಗಳಿಗೆ ಅನುಮತಿ ಅಗತ್ಯವಿರುತ್ತದೆ ಮತ್ತು ನಾವು ಇದಕ್ಕೆ ಅನುಮತಿ ನೀಡುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.