ದಿಮಾಪುರ್: ನಾಯಿ ಮಾಂಸದ ವಾಣಿಜ್ಯ ಆಮದು, ವ್ಯಾಪಾರ ಮತ್ತು ಮಾರಾಟವನ್ನು ನಿಷೇಧಿಸಲು ನಾಗಾಲ್ಯಾಂಡ್ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಉನ್ನತ ಅಧಿಕಾರಿ ಶುಕ್ರವಾರ ಹೇಳಿದ್ದಾರೆ. ಇಂತಹ ಕ್ರಮಕೈಗೊಳ್ಳಲು ಅದು ಮುಂದಾಗಿರುವುದು ಎರಡನೇ ಬಾರಿ. ನಾಯಿ ಮಾಂಸವನ್ನು ಮಾರಾಟ ಮಾಡುವ ಮಾರುಕಟ್ಟೆಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರವು ಈ ಹಿಂದೆ ನಗರ ಸ್ಥಳೀಯ ಸಂಸ್ಥೆಗಳನ್ನು ಕೇಳಿಕೊಂಡಿತ್ತು, ಆದರೆ ನಿರ್ಧಾರವನ್ನು ಜಾರಿಗೆ ತರಲಾಗಿರಲಿಲ್ಲ.
“ನಾಯಿ ಮಾರುಕಟ್ಟೆಗಳ ವಾಣಿಜ್ಯ ಆಮದು ಮತ್ತು ವ್ಯಾಪಾರವನ್ನು ನಿಷೇಧಿಸಲು ಮತ್ತು ಬೇಯಿಸಿದ ಮತ್ತು ಬೇಯಿಸದ ನಾಯಿ ಮಾಂಸದ ಮಾರಾಟವನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ಸಂಪುಟ ತೆಗೆದುಕೊಂಡ ಬುದ್ಧಿವಂತ ನಿರ್ಧಾರ ಶ್ಲಾಘನಾರ್ಹವಾಗಿದೆ” ಎಂದು ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿ ಟೆಮ್ಜೆನ್ ಟಾಯ್ ಶುಕ್ರವಾರ ಟ್ವಿಟ್ ಮಾಡಿದ್ದಾರೆ.
ನಾಗಾಲ್ಯಾಂಡ್ನ ದಿಮಾಪುರದ ಮಾರುಕಟ್ಟೆಯೊಂದರಲ್ಲಿ ನಾಯಿಗಳನ್ನು ಬಾಯಿಗಳಿಗೆ ಹಗ್ಗಗಳನ್ನು ಕಟ್ಟಿ ಗೋಣಿ ಚೀಲಗಳಲ್ಲಿ ತುಂಬಿಸಲಾಗುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಇಂಟರ್ನೆಟ್ಗಳಲ್ಲಿ ಇದಕ್ಕೆ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಲಾಭರಹಿತ ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಸೇಷನ್ಸ್ (ಎಫ್ಐಎಪಿಒ) ಗುರುವಾರ ನಾಯಿ ಮಾಂಸ ವ್ಯಾಪಾರವನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಹೊಸ ಮನವಿ ಸಲ್ಲಿಸಿತ್ತು.
“ರಾಜ್ಯದಲ್ಲಿ ನಾಯಿ ಮಾಂಸ ಮಾರಾಟ, ಕಳ್ಳಸಾಗಣೆ ಮತ್ತು ಸೇವನೆಯ ಮೇಲಿನ ನಿಷೇಧವನ್ನು ಜಾರಿಗೆ ತರಲು ಮತ್ತು ಕಠಿಣ ಪ್ರಾಣಿ ಕಲ್ಯಾಣ ಕಾನೂನುಗಳ ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ನಾಗಾಲ್ಯಾಂಡ್ ಸರ್ಕಾರಕ್ಕೆ ಹೊಸ ಮನವಿಯನ್ನು ಸಲ್ಲಿಸಿದ್ದೇವೆ.” ಎಫ್ಐಎಪಿಒ ಹೇಳಿದೆ.
ನಾಯಿ ಮಾಂಸ ಮಾರಾಟ ನಿಷೇಧವನ್ನು ಕೋರಿ ಆನ್ಲೈನ್ ಅಭಿಯಾನ, ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಗಿದೆ. ಇದಕ್ಕೆ ತಲೆಬಾಗಿ ಸರ್ಕಾರ ನಿಷೇಧವನ್ನು ಜಾರಿಗೆ ತಂದಿದೆ.
ನಾಯಿ ಮಾಂಸವನ್ನು ನಾಗಾಲ್ಯಾಂಡ್ ರಾಜ್ಯದ ಕೆಲವು ಸಮುದಾಯಗಳಲ್ಲಿ ಆಹಾರವೆಂದು ಪರಿಗಣಿಸಲಾಗಿದೆ.
The State Government has decided to ban commercial import and trading of dogs and dog markets and also the sale of dog meat, both cooked and uncooked. Appreciate the wise decision taken by the State’s Cabinet @Manekagandhibjp @Neiphiu_Rio
— Temjen Toy (@temjentoy) July 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.