ನವದೆಹಲಿ: ಕೊರೋನಾವೈರಸ್ ಪೀಡಿತ ಒಟ್ಟು 3,79,892 ಜನರು ಈವರೆಗೆ ದೇಶದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಕಳೆದ 24 ಗಂಟೆಗಳಲ್ಲಿ, ಕೋವಿಡ್-19ನಿಂದ ದಾಖಲೆಯ 20,032 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಇದರೊಂದಿಗೆ ಚೇತರಿಕೆ ಪ್ರಮಾಣವು ದೇಶದಲ್ಲಿ ಶೇಕಡಾ 60.72ಕ್ಕೆ ಏರಿದೆ ಎಂದು ವರದಿಗಳು ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 20,903 ಹೊಸ ಪ್ರಕರಣಗಳು ವರದಿಯಾಗಿದೆ ಎಂದು ಹೇಳಿದೆ. ಇದು ಒಟ್ಟು ಪ್ರಕರಣಗಳನ್ನು 6,25,544 ಕ್ಕೆ ತೆಗೆದುಕೊಂಡು ಹೋಗಿದೆ. ಒಂದೇ ದಿನದಲ್ಲಿ, ದೇಶಾದ್ಯಂತ 379 ಸಾವುಗಳು ಸಂಭವಿಸಿದೆ. ಈ ಮೂಲಕ ಒಟ್ಟು ಸಾವು ಪ್ರಕರಣ 18,213ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಪ್ರಸ್ತುತ, ದೇಶದಲ್ಲಿ ಒಟ್ಟು ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 2,27,439 ಆಗಿದೆ.
ಈ ನಡುವೆ, ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಪ್ರಯೋಗಾಲಯಗಳು ಒಟ್ಟು 2, 41, 576 ಕೊರೋನಾ ವೈರಸ್ ಪರೀಕ್ಷೆಗಳನ್ನು ನಡೆಸಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ತಿಳಿಸಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ಪ್ರಯೋಗಾಲಯಗಳು ನಡೆಸಿದ ಪರೀಕ್ಷೆಗಳಲ್ಲಿ ಇದು ಅತಿ ಹೆಚ್ಚು. ಈವರೆಗೆ 92, 97, 749 ಪರೀಕ್ಷೆಗಳನ್ನು ನಡೆಸಲಾಗಿದೆ.
ಐಸಿಎಂಆರ್ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಿಗೆ ಅನುಮೋದನೆ ನೀಡುವ ಮೂಲಕ ಕೋವಿಡ್ -19 ಗಾಗಿ ತನ್ನ ಪರೀಕ್ಷಾ ಸೌಲಭ್ಯಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಈಗಿನಂತೆ, ಭಾರತದಾದ್ಯಂತ ಒಟ್ಟು 1,074 ಪ್ರಯೋಗಾಲಯಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿ 775 ಸರ್ಕಾರಿ ಪ್ರಯೋಗಾಲಯಗಳು ಮತ್ತು 299 ಖಾಸಗಿ ಪ್ರಯೋಗಾಲಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.