ನವದೆಹಲಿ: ಕೇಂದ್ರ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಜಂಟಿಯಾಗಿ ಡ್ರಗ್ ಡಿಸ್ಕವರಿ ಹ್ಯಾಕಥಾನ್ 2020 ಅನ್ನು ಪ್ರಾರಂಭಿಸಿದ್ದಾರೆ. ಇದು ಆನ್ಲೈನ್ ಸ್ಪರ್ಧೆಯಾಗಿದ್ದು, ದೇಶ ಅಥವಾ ವಿಶ್ವದ ಎಲ್ಲಿಂದಲಾದರೂ ಜನರು ಇದರಲ್ಲಿ ಭಾಗವಹಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಪೋಖ್ರಿಯಾಲ್, ಡ್ರಗ್ ಡಿಸ್ಕವರಿ ಹ್ಯಾಕಥಾನ್ ಔಷಧ ಅನ್ವೇಷಣೆ ಪ್ರಕ್ರಿಯೆಯನ್ನು ಬೆಂಬಲಿಸುವ ರಾಷ್ಟ್ರೀಯ ಉಪಕ್ರಮವಾಗಿದೆ. ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಆಕರ್ಷಿಸಲು ಈ ಹ್ಯಾಕಥಾನ್ ವೃತ್ತಿಪರರು, ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತದಿಂದ ಭಾಗವಹಿಸಲು ಮುಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಡಾ.ಹರ್ಷವರ್ಧನ್ ಮಾತನಾಡಿ, ದೇಶದಲ್ಲಿ ಕಂಪ್ಯೂಟೇಶನಲ್ ಡ್ರಗ್ ಆವಿಷ್ಕಾರದ ಸಂಸ್ಕೃತಿಯನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಈ ಉಪಕ್ರಮದಲ್ಲಿ, ಎಚ್ಆರ್ಡಿ ಇನ್ನೋವೇಶನ್ ಸೆಲ್ ಮತ್ತು ಎಐಸಿಟಿಇಯು ಸಂಭಾವ್ಯ ಔಷಧ ಅಣುಗಳನ್ನು ಹ್ಯಾಕಥಾನ್ ಮೂಲಕ ಗುರುತಿಸುವತ್ತ ಗಮನ ಹರಿಸುತ್ತವೆ ಮತ್ತು ಸಿಎಸ್ಐಆರ್ ಈ ಗುರುತಿಸಲಾದ ಅಣುಗಳನ್ನು ಸಂಶ್ಲೇಷಣೆ ಮತ್ತು ಪ್ರಯೋಗಾಲಯ ಪರೀಕ್ಷೆಗೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದಿದ್ದಾರೆ.
SARS-CoV-2 ವಿರುದ್ಧ ಔಷಧಿ ಅಭ್ಯರ್ಥಿಗಳನ್ನು ಗುರುತಿಸುವುದು ಮತ್ತು ರಾಸಾಯನಿಕ ಸಂಶ್ಲೇಷಣೆ ಮತ್ತು ಜೈವಿಕ ಪರೀಕ್ಷೆಯನ್ನು ಅನುಸರಿಸುವುದು ಈ ಹ್ಯಾಕಥಾನ್ನ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.