ನವದೆಹಲಿ: ಹೂಡಿಕೆ ನಿರ್ವಹಣಾ ರಚನೆ ಮತ್ತು ತನ್ನ ಪ್ರಸ್ತಾಪಿತ InvIT (ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್) ಅನ್ನು ಔಪಚಾರಿಕಗೊಳಿಸಲು ಎನ್ಎಚ್ಎಐ (ರಾ಼ಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತ) ಉನ್ನತ-ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ವರದಿಗಳು ತಿಳಿಸಿವೆ.
InvIT ಸ್ಥಾಪಿಸಲು ಎನ್ಎಚ್ಎಐಗೆ ಅಧಿಕಾರ ನೀಡುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಸ್ತಾವನೆಯನ್ನು 2019 ರ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿತ್ತು. ಈ ಟ್ರಸ್ಟ್ ಎನ್ಎಚ್ಎಐಗೆ ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿಗಳಿಗೆ ಕನಿಷ್ಠ ಒಂದು ವರ್ಷದ ಟೋಲ್ ಸಂಗ್ರಹ ದಾಖಲೆಯೊಂದಿಗೆ ಹಣಗಳಿಸಲು ಅನುವು ಮಾಡಿಕೊಡುತ್ತದೆ.
ಈ ವರ್ಷದ ಜನವರಿಯಲ್ಲಿ ಮಾಹಿತಿ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರ್ ಅವರು, ತನ್ನ ಮೊದಲ ಮೂಲಸೌಕರ್ಯ ಇನ್ವೆಸ್ಟ್ಮೆಂಟ್ ಟ್ರಸ್ಟ್ (InvIT) ಕೊಡುಗೆಯ ಮೂಲಕ ಎನ್ಎಚ್ಎಐ ರೂ.15,000-20,000 ಕೋಟಿಗಳನ್ನು ಒಟ್ಟುಗೂಡಿಸಲು ಮತ್ತು ಅಂತಿಮವಾಗಿ ಹೂಡಿಕೆದಾರರಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಧನಸಹಾಯ ಮಾದರಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
NHAIನ InvIT ದೇಶದ ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ಘಟಕದ ಮೊದಲ ಈ ರೀತಿಯ ಹೂಡಿಕೆ ಸ್ಥಾಪನೆಯಾಗಿದೆ ಮತ್ತು ಆದ್ದರಿಂದ ಹೂಡಿಕೆ ವ್ಯವಸ್ಥಾಪಕರಿಗೆ ವೃತ್ತಿಪರ ನಿರ್ವಹಣಾ ರಚನೆಯ ಅಗತ್ಯವಿರುತ್ತದೆ.
ಇಬ್ಬರು ಸ್ವತಂತ್ರ ನಿರ್ದೇಶಕರನ್ನು ಮತ್ತು ಹೂಡಿಕೆ ವ್ಯವಸ್ಥಾಪಕ ಮಂಡಳಿಗೆ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಲು ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡುವ ಸಲುವಾಗಿ, ಎನ್ಎಚ್ಎಐನಿಂದ earch-cum-selection committee ಅನ್ನು ರಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.