ನವದೆಹಲಿ: ಪೂರ್ವ ಲಡಾಖ್ನ ನೈಜ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತನ್ನ ಪ್ಯಾರಾ ಸ್ಪೆಶಲ್ ಫೋರ್ಸ್ ಪಡೆಗಳನ್ನು ಕಾರ್ಯಾಚರಣಾ ಪಾತ್ರಗಳಿಗಾಗಿ ಲಡಾಖ್ನಲ್ಲಿ ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ವಿಶೇಷ ಪಡೆಗಳ ಘಟಕಗಳನ್ನು ದೇಶದ ವಿವಿಧ ಭಾಗಗಳಿಂದ ಲಡಾಖ್ಗೆ ಸ್ಥಳಾಂತರಿಸಲಾಗಿದೆ ಮತ್ತು ಈಗಾಗಲೇ ಈ ಪ್ರದೇಶದಲ್ಲಿ ಸಮರಾಭ್ಯಾಸಗಳನ್ನು ಯೋಧರು ನಡೆಸುತ್ತಿದ್ದಾರೆ. ಅಗತ್ಯಬಿದ್ದರೆ ಚೀನಿ ಪಡೆಗಳನ್ನು ದಿಟ್ಟವಾಗಿ ಎದುರಿಸುವ ನಿಟ್ಟಿನಲ್ಲಿ ಇವರು ಸನ್ನದ್ಧರಾಗುತ್ತಿದ್ದಾರೆ. ಈಗಾಗಲೇ ಗಡಿ ಮುಂಭಾಗದ ಪ್ರದೇಶಗಳಲ್ಲಿ ನಿಯೋಜಿಸಲ್ಪಟ್ಟಿರುವ ಚೀನಿಯರ ವಿರುದ್ಧ ಪರಿಣಾಮಕಾರಿಯಾಗಿ ಈ ಯೋಧರು ಹೋರಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.
ಅಗತ್ಯಬಿದ್ದಾಗ ಯಾವ ಕ್ರಮಗಳನ್ನುಕೈಗೊಳ್ಳಬೇಕು, ಗಡಿಗಳಲ್ಲಿ ಅವರ ಪಾತ್ರಗಳ ಬಗ್ಗೆಯೂ ಯೋಧರಿಗೆ ವಿವರಣೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯು ವಿಶೇಷ ಪಡೆಗಳ 12 ರೆಜಿಮೆಂಟ್ಗಳನ್ನು ಹೊಂದಿದ್ದು, ಪರ್ವತಗಳು, ಮರುಭೂಮಿಗಳು ಮತ್ತು ಕಾಡುಗಳಂತಹ ವಿವಿಧ ಭೂಪ್ರದೇಶಗಳ ಮೇಲೆ ವಿಶೇಷ ಕಮಾಂಡ್ ಅನ್ನು ಹೊಂದಿದೆ. ಭಾರತೀಯ ಲೇಹ್ನ ಎತ್ತರದ ಪ್ರದೇಶಗಳಲ್ಲಿ ನಿಯಮಿತವಾಗಿ ಯುದ್ಧ ಅಭ್ಯಾಸಗಳನ್ನು ಮಾಡುತ್ತಿದ್ದಾರೆ.
ಪ್ರಸಿದ್ಧ ವಿಶೇಷ ಪಡೆಗಳ ಘಟಕಗಳು 2017 ರಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಗಡಿಯಾಚೆಗಿನ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.