ನವದೆಹಲಿ: ರಷ್ಯಾದಿಂದ 12 ಸುಖೋಯ್ ಎಂಕೆ 1 ಯುದ್ಧ ವಿಮಾನದ ಜೊತೆಗೆ 21 ಮಿಗ್ -29 ಯುದ್ಧವಿಮಾನಗಳನ್ನು ತ್ವರಿತವಾಗಿ ಖರೀದಿಸಲು ಭಾರತ ವಾಯುಪಡೆಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ. ಗಡಿಯಲ್ಲಿ ಚೀನಾದೊಂದಿಗಿನ ಸುಮಾರು ಎರಡು ತಿಂಗಳ ಸುದೀರ್ಘ ಮಿಲಿಟರಿ ಸಂಘರ್ಷದ ನಡುವೆ ಬಂದಿರುವ ಪ್ರಮುಖ ಬೆಳವಣಿಗೆ ಇದಾಗಿದೆ ಎಂದು ವರದಿಗಳು ತಿಳಿಸಿವೆ.
ಅಸ್ತಿತ್ವದಲ್ಲಿರುವ 59 ಮಿಗ್-29 ವಿಮಾನಗಳನ್ನು ನವೀಕರಣಗೊಳಿಸಲು ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿಯು ಅನುಮತಿ ನೀಡಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಗುರುವಾರ ಮಾತನಾಡಿದ್ದ ಸಂದರ್ಭದಲ್ಲೇ ಈ ಅನುಮೋದನೆ ಸಿಕ್ಕಿದೆ. ಎಲ್ಲಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಮೋದಿ ಮತ್ತು ಪುಟಿನ್ ಪುನರುಚ್ಚರಿಸಿದ್ದಾರೆ.
“ರಷ್ಯಾದಿಂದ ಎಂಐಜಿ 29 ಖರೀದಿ ಮತ್ತು ನವೀಕರಣಕ್ಕೆ 4 7,418 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದರೆ, ಸು -30 ಎಂಕೆಐ ಅನ್ನು (ಎಚ್ಎಎಲ್) ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನಿಂದ, 7 10,730 ಕೋಟಿ ವೆಚ್ಚದಲ್ಲಿ ಖರೀದಿಸಲಾಗುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.