ನವದೆಹಲಿ: ಭಾರತೀಯ ರೈಲ್ವೆ ಗುರುವಾರ ಇತಿಹಾಸದಲ್ಲಿ ಮೊದಲ ಬಾರಿಗೆ 100 ಪ್ರತಿಶತದಷ್ಟು ರೈಲು ಸಮಯಪ್ರಜ್ಞೆ ಸಾಧಿಸಿದೆ, ಈ ದಿನ ಚಲಿಸಿದ ಎಲ್ಲಾ 201 ರೈಲುಗಳು ಸಮಯಕ್ಕೆ ಸರಿಯಾಗಿ ತಮ್ಮ ಗುರಿಯನ್ನು ತಲುಪಿವೆ.
ಇದಕ್ಕೂ ಮೊದಲು ಭಾರತೀಯ ರೈಲ್ವೆ ಜೂನ್ 23ರಂದು 99.54 ರಷ್ಟು ರೈಲುಗಳ ಸಮಯಪ್ರಜ್ಞೆಯನ್ನು ಸಾಧಿಸಿದೆ, ಕೇವಲ ಒಂದು ರೈಲು ವಿಳಂಬವಾಗಿದ್ದು, ಇದು ಇಂದಿನ ದಾಖಲೆಯ ನಂತರದ ಎರಡನೇ ಅತ್ಯುತ್ತಮ ದಾಖಲೆಯಾಗಿದೆ.
ಭಾರತೀಯ ರೈಲ್ವೆ ಸಚಿವಾಲಯವು, ” ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಂದು ಎಲ್ಲಾ ರೈಲುಗಳು ಸಮಯಕ್ಕೆ ಸರಿಯಾಗಿ 100% ಸಮಯಪ್ರಜ್ಞೆಯನ್ನು ಸಾಧಿಸಿವೆ. ಹಿಂದಿನ ರೈಲು 23.06.2020 ರಂದು 99.54% ಸಮಯಪ್ರಜ್ಞೆ ಸಾಧಿಸಿದ್ದ, ಕೇವಲ ಒಂದು ರೈಲು ವಿಳಂಬವಾಗಿತ್ತು.
ಭಾರತೀಯ ರೈಲ್ವೆ ಸಾಧಿಸಿದ ಮೈಲಿಗಲ್ಲು ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ” ವೇಗದ ಹಾದಿಯಲ್ಲಿ ರೈಲುಗಳು: ಅಭೂತಪೂರ್ವ ಮಟ್ಟಕ್ಕೆ ಸೇವೆಗಳನ್ನು ಹೆಚ್ಚಿಸುತ್ತಾ ಭಾರತೀಯ ರೈಲ್ವೆ 2020 ರ ಜುಲೈ 1 ರಂದು 100% ಸಮಯ ದರವನ್ನು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ ” ಎಂದು ಟ್ವೀಟ್ ಮಾಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ, ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದ್ದು, ಸಿಲುಕಿ ಹಾಕಿಕೊಂಡ ಪ್ರಯಾಣಿಕರನ್ನು ಅಥವಾ ಅನಿವಾರ್ಯತೆಯಿಂದ ಪ್ರಯಾಣಿಸುವವರನ್ನು ಸಾಗಿಸಲು ನಿರ್ಬಂಧಿತ ಸಾಮರ್ಥ್ಯದೊಂದಿಗೆ ಪ್ರಯಾಣಿಸುತ್ತಿದೆ.
First time in the history, Indian Railways has acheived 100% Punctuality of trains on 01.07.2020
Previous best was 99.54% on 23/6/20 with only one train getting delayed. pic.twitter.com/NeFyGWlve7
— Ministry of Railways (@RailMinIndia) July 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.