ನವದೆಹಲಿ: ದೇಶದ ಅರೆಸೈನಿಕ ಪಡೆಗಳಲ್ಲಿ ತೃತೀಯ ಲಿಂಗಿ ಸದಸ್ಯರನ್ನು ಸೇರ್ಪಡೆಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೃತೀಯ ಲಿಂಗಗಳ ವಿರುದ್ಧದ ತಾರತಮ್ಯವನ್ನು ಕೊನೆಗಾಣಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಆ ದಿಕ್ಕಿನಲ್ಲಿ ಕಾರ್ಯೋನ್ಮುಖಗೊಂಡಿರುವ ಗೃಹ ವ್ಯವಹಾರಗಳ ಸಚಿವಾಲಯವು, ಈ ವಿಷಯದ ಬಗ್ಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ (ಸಿಎಪಿಎಫ್) ಸಲಹೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಕೋರಿದೆ. ಅರೆಸೇನಾ ಪಡೆಗಳಲ್ಲಿ ಅಧಿಕಾರಿಗಳಾಗಿ “ತೃತೀಯ ಲಿಂಗಿ”ಗಳನ್ನು ನಿಯೋಜಿಸುವ ಪ್ರಸ್ತಾಪದ ಮೇಲೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ.
ತೃತೀಯ ಲಿಂಗೆ ಅಧಿಕಾರಿಗಳನ್ನು ಸಹಾಯಕ ಕಮಾಂಡೆಂಟ್ಗಳಾಗಿ ನಿಯೋಜಿಸುವ ವಿಧಾನಗಳ ಕುರಿತು ಎಲ್ಲಾ ಸಿಎಪಿಎಫ್ಗಳ ಅಭಿಪ್ರಾಯವನ್ನು ಅದು ಕೋರಿದೆ.
“ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಹಾಯಕ ಕಮಾಂಡೆಂಟ್ಸ್) ಪರೀಕ್ಷೆ 2020-ಕರಡು ನಿಯಮಗಳ ಕುರಿತಾದ ವಿಷಯಗಳು” ಎಂಬ ವಿಷಯದ ಅಡಿಯಲ್ಲಿ ಜುಲೈ 1 ರಂದು ಸಿಎಪಿಎಫ್ಗೆ ಸಚಿವಾಲಯವು ಬರೆದಿರುವ ಪತ್ರದಲ್ಲಿ ಈ ವಿಷಯದ ಬಗ್ಗೆ ಪಡೆಗಳಿಂದ ಸಲಹೆಗಳನ್ನು ಕೋರಿದೆ.
ಈ ವಿಷಯವನ್ನುಪರಿಶೀಲಿಸಲು ಪಡೆಗಳನ್ನು ಕೋರಲಾಗಿದೆ ಮತ್ತು ಜುಲೈ 2 ರಂದು ಈ ವಿಷಯದ ಬಗ್ಗೆ ಅಂತಿಮ ಅಭಿಪ್ರಾಯವನ್ನು ತೆಗೆದುಕೊಳ್ಳಲು ಸಕಾರಾತ್ಮಕವಾಗಿ ಪ್ರತಿಕ್ರಿಯೆಗಳನ್ನು ನೀಡಬೇಕೆಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.