ನವದೆಹಲಿ: ಭಾರತದಲ್ಲಿ 59 ಚೀನೀ ಆ್ಯಪ್ಗಳನ್ನು ಕೇಂದ್ರ ನಿರ್ಬಂಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ದೃಢನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚೀನಾದ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಸಿನಾ ವೀಬೊದಿಂದ ಹೊರಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರಧಾನಿ ಮೋದಿಯವರ ಈ ಖಾತೆ ಈಗ ಸಂಪೂರ್ಣ ಖಾಲಿಯಾಗಿದೆ. ಅವರ ಪ್ರೊಫೈಲ್ ಫೋಟೋ, ಪೋಸ್ಟ್ಗಳು ಮತ್ತು ಕಾಮೆಂಟ್ಗಳನ್ನು ಹ್ಯಾಂಡಲ್ನಿಂದ ಬುಧವಾರ ತೆಗೆದುಹಾಕಲಾಗಿದೆ. ಅವರು ಈ ಹ್ಯಾಂಡಲ್ನಲ್ಲಿ 2,44,000 ಅನುಯಾಯಿಗಳನ್ನು ಮತ್ತು 115 ಪೋಸ್ಟ್ಗಳನ್ನು ಹೊಂದಿದ್ದರು.
ವೀಬೊ ಅತಿದೊಡ್ಡ ಚೀನೀ ಮೈಕ್ರೋಬ್ಲಾಗಿಂಗ್ ತಾಣವಾಗಿದ್ದು, ವಿಐಪಿ ಖಾತೆಗಳಿಗೆ ಇದನ್ನು ತ್ಯಜಿಸಲು ಹೆಚ್ಚು ಸಂಕೀರ್ಣವಾದ ಕಾರ್ಯವಿಧಾನವನ್ನು ಅನುಸರಿಸಬೇಕಾಗುತ್ತದೆ.
ಈ ಅನುಮತಿಯನ್ನು ನೀಡುವಲ್ಲಿ ಬಹಳ ದೀರ್ಘ ವಿಳಂಬವಾಯಿತು ಎಂದು ವರದಿಗಳು ತಿಳಿಸಿವೆ.
ವೀಬೊದಲ್ಲಿ ಚೀನಾದ ಅಧ್ಯಕ್ಷರ ಫೋಟೋ ಇರುವ ಪೋಸ್ಟ್ಗಳನ್ನು ಅಳಿಸುವುದು ತುಂಬಾ ಕಷ್ಟ, ಹೀಗಾಗಿ ಮೋದಿಯವರಿಗೆ ಎರಡು ಪೋಸ್ಟ್ಗಳನ್ನು ಅಳಿಸಲಾಗಲಿಲ್ಲ. ಉಳಿದ 113 ಪೋಸ್ಟ್ಗಳನ್ನು ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಲ್ವಾನ್ ಕಣಿವೆಯಲ್ಲಿ ಭಾರತದ ವಿರುದ್ಧ ಆಕ್ರಮಣಕಾರಿ ಧೋರಣೆಯನ್ನು ಚೀನಾ ತೋರಿಸಿದ ಬಳಿಕ ಭಾರತದಲ್ಲಿ ಚೀನಾ ವಿರೋಧಿ ಅಲೆ ಭುಗೆಲೆದ್ದಿದೆ. ಈಗಾಗಲೇ ಅಲ್ಲಿನ ಅಪ್ಲಿಕೇಶನ್ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಅಲ್ಲಿನ ಕಂಪನಿಗಳಿಗೆ ಭಾರತ ಸರ್ಕಾರ ಯಾವುದೇ ಟೆಂಡರ್ ನೀಡದಿರಲೂ ನಿರ್ಧಾರ ಕೈಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.