ರಾಮೇಶ್ವರ: ಭಾರತೀಯ ರೈಲ್ವೆ ಇಲಾಖೆ ವತಿಯಿಂದ ತಮಿಳುನಾಡಿನ ರಾಮೇಶ್ವರಂನ ಪಂಬನ್ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಯ ಮೊದಲ ಆಧಾರ ಸ್ಥಂಭಕ್ಕೆ ಅಡಿಗಲ್ಲು ಹಾಕುವ ಮೂಲಕ ಬುಧವಾರ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಆರಂಭ ನೀಡಲಾಯಿತು.
ಪಂಬನ್ನ 104 ವರ್ಷ ಹಳೆಯ ಸೇತುವೆಯ ಬಳಿಯೇ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಹೊಸ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಡಗುಗಳು, ದೋಣಿಗಳ ಓಡಾಟಕ್ಕೂ ಅಭಿವೃದ್ಧಿ ಹೊಂದಿದ ಹೊಸ ತಂತ್ರಜ್ಞಾನದ ಆಧಾರದಲ್ಲಿಯೇ ದಾರಿ ಮಾಡಿಕೊಡುವ ಮೂಲಕ ಸುಗಮ ಪ್ರಯಾಣಕ್ಕೆ ಅವಕಾಶವನ್ನು ಈ ಸೇತುವೆಯಲ್ಲಿ ಕಲ್ಪಿಸಿಕೊಡಲಾಗುತ್ತಿದೆ. ಈ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ಗಳನ್ನೂ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಹಳೆಯ ಪಂಬನ್ ಸೇತುವೆಯ ರೈಲು ಮಾರ್ಗಗಳಲ್ಲಿ ಸರಕುಗಳನ್ನು ಸಾಗಾಟ ಮಾಡಲು ಅಸಾಧ್ಯ ಎಂಬ ಸ್ಥಿತಿ ಇದೆ. ಈ ಎಲ್ಲಾ ಸಮಸ್ಯೆಗಳಿಗೂ ಹೊಸ ತಂತ್ರಜ್ಞಾನ ಗಳನ್ನು ಒಳಗೊಂಡ ಸೇತುವೆ ಸಹಾಯ ಮಾಡಲಿದೆ. ಈಗಾಗಲೇ ಈ ಸೇತುವೆ ನಿರ್ಮಾಣದ ದೃಷ್ಟಿಯಿಂದ ಬೃಹತ್ ಗಾತ್ರದ ಯಂತ್ರಗಳನ್ನು ನೀರಿಗಿಳಿಸಲಾಗಿದೆ.
250 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ನಿರೀಕ್ಷೆಯಂತೆಯೇ ಕೆಲಸಗಳು ನಡೆದರೆ ನಾಲ್ಕೇ ವರ್ಷಗಳಲ್ಲಿ ಸೇತುವೆ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Tamil Nadu: Indian Railways starts constructing the first pillar in the sea of a vertical bridge that is under construction at Pamban, Rameswaram in Ramanathapuram district. pic.twitter.com/5dxShUZwB5
— ANI (@ANI) July 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.