ನವದೆಹಲಿ: ಟೆಲಿಕಾಂ ಇಲಾಖೆ ಬುಧವಾರ ಬಿಎಸ್ಎನ್ಎಲ್ನ 4ಜಿ ಸೇವೆಗಳನ್ನು ನವೀಕರಿಸಲು ಟೆಂಡರ್ ರದ್ದುಗೊಳಿಸಿದೆ. ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾದ ಕಂಪನಿಗಳನ್ನು ಹೊರಗಿಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಬಿಎಸ್ಎನ್ಎಲ್ನ 4ಜಿ ಸೇವೆಗಳನ್ನು ಅಪ್ಗ್ರೇಡ್ ಮಾಡುವಾಗ ಚೀನಾದ ಉಪಕರಣಗಳನ್ನು ಬಳಸಬೇಡಿ ಎಂದು ಕೇಂದ್ರ ಸರ್ಕಾರ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ನವೀಕರಣಕ್ಕೆ 7,000 ರಿಂದ 8,000 ಕೋಟಿ ರೂಪಾಯಿ ವ್ಯಯವಾಗಲಿದೆ.
ಇದರ ಪರಿಣಾಮವಾಗಿ, ಚೀನಾದ ಟೆಲಿಕಾಂ ದೈತ್ಯ ಸಂಸ್ಥೆಗಳಾದ ZTE ಮತ್ತು ಹುವಾವೇಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡುವ ಸಾಧ್ಯತೆಯಿದೆ.
ಆತ್ಮನಿರ್ಭರ ಭಾರತ ಉಪಕ್ರಮವನ್ನು ಉತ್ತೇಜಿಸಲು ಭಾರತದಲ್ಲಿ ತಯಾರಿಸಿದ ಸಲಕರಣೆಗಳ ಬಳಕೆಯನ್ನು ಟೆಂಡರ್ ಪ್ರಕ್ರಿಯೆಯು ಉತ್ತೇಜಿಸಲಿದೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಚೀನಾ ರೈಲ್ವೆ ಸಿಗ್ನಲ್ ಮತ್ತು ಕಮ್ಯುನಿಕೇಷನ್ ಕೋ ಲಿಮಿಟೆಡ್ (ಸಿಆರ್ಎಸ್ಸಿ) ಗೆ ನೀಡಲಾದ ಸಿಗ್ನಲಿಂಗ್ ಒಪ್ಪಂದವನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ ಎಂದು ಇತ್ತೀಚೆಗೆ ವರದಿಯಾಗಿದೆ.
ಒಟ್ಟಿನಲ್ಲಿ ಭಾರತದಲ್ಲಿ ಬೀಡು ಬಿಟ್ಟಿರುವ ಚೀನಾದ ಕಂಪನಿಗಳನ್ನು ಹೊರಕಳುಹಿಸಲು ಬೇಕಾದ ಎಲ್ಲಾ ಕ್ರಮಗಳನ್ನೂ ಚೀನಾ ಕೈಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.