ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ)ಗಳನ್ನು ಉದ್ಯಮ ಎಂದು ನೋಂದಾಯಿಸುವ ಹೊಸ ಸರಳೀಕೃತ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಲಿದೆ. ಇದು ಸಂಪೂರ್ಣವಾಗಿ ಆನ್ಲೈನ್, ಕಾಗದರಹಿತ ಮತ್ತು ಸ್ವಯಂ ಘೋಷಣೆಯ ಆಧಾರದ ಮೇಲೆ ಆಧಾರಿತವಾಗಿರುತ್ತದೆ. ಎಂಎಸ್ಎಂಇ ಅನ್ನು ಉದ್ಯಮವಾಗಿ ನೋಂದಾಯಿಸಲು ಯಾವುದೇ ದಾಖಲೆಗಳು ಅಥವಾ ಪುರಾವೆಗಳನ್ನು ಅಪ್ಲೋಡ್ ಮಾಡುವ ಅಗತ್ಯವಿಲ್ಲ. ನೋಂದಣಿಗೆ ಅಧಾರ್ ಸಂಖ್ಯೆ ಅಗತ್ಯವಿದೆ. ಉದ್ಯೋಗ ನೋಂದಣಿಗೆ ಹೊಸ ಪೋರ್ಟಲ್ www.udyamregistration.gov.in.ಅನ್ನು ಪ್ರಾರಂಭಿಸಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಹೇಳುವಂತೆ, ಈ ಪೋರ್ಟಲ್ ಉದ್ಯಮಿಗಳಿಗೆ ಅವರು ಏನು ತಿಳಿದುಕೊಳ್ಳಬೇಕು, ಏನು ಮಾಡಬೇಕು ಎಂದು ಹಂತ ಹಂತವಾಗಿ ಮಾರ್ಗದರ್ಶನ ನೀಡಲಿದೆ.
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಉದ್ಯಮ ನೋಂದಣಿ ಪ್ರಮಾಣಪತ್ರ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ನೋಂದಣಿ ನವೀಕರಣದ ಅಗತ್ಯವಿಲ್ಲ. ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದೆ ಎಂದು ವರದಿಗಳು ತಿಳಿಸಿವೆ. ಇದಕ್ಕಾಗಿ ಯಾವುದೇ ವೆಚ್ಚ ಅಥವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಈ ಪ್ರಕ್ರಿಯೆಯು ಅತ್ಯಂತ ಸರಳ, ತಡೆರಹಿತ ಮತ್ತು ಉದ್ಯಮಿ ಸ್ನೇಹಿಯಾಗಿರುತ್ತದೆ ಎಂದು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್ನಲ್ಲಿ ಒಂದು ಉದಾಹರಣೆಯನ್ನು ನೀಡಲಿದೆ. ಇದು ವಹಿವಾಟಿನ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉದ್ಯಮಿಗಳು ಮತ್ತು ಉದ್ಯಮಗಳು ತಮ್ಮ ನೈಜ ಕೆಲಸದ ಮೇಲೆ ಕೇಂದ್ರೀಕರಿಸಬಹುದು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಹೊರಹೊಮ್ಮಬಹುದು ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.