ನವದೆಹಲಿ: ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದ 59 ಚೀನಾ ಆ್ಯಪ್ಗಳನ್ನು ಭಾರತ ಸರ್ಕಾರ ನಿಷೇಧ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಹುತೇಕರು ಸರ್ಕಾರ ಈ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅದರಲ್ಲೂ ಪ್ರಚಲಿತ ಸನ್ನಿವೇಶಗಳ ಬಗ್ಗೆ ಸದಾ ಸೃಜನಶೀಲ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಭಾರತದ ನಂ.1 ಡೈರಿ ಉದ್ಯಮ ಅಮೂಲ್ ಇಂಡಿಯಾ ಮತ್ತೊಮ್ಮೆ ತನ್ನ ಸೃಜನಶೀಲತೆಯನ್ನು ಸಾಬೀತುಪಡಿಸಿ ಚೀನಾಗೆ ಪರೋಕ್ಷ ಟಾಂಗ್ ನೀಡಿದೆ.
ಟಿಕ್ಟಾಕ್ ಮತ್ತು ವಿಚಾಟ್ಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಅಮೂಲ್, “STik with this STok” ಮತ್ತು “WeChat over tea” ಎಂದಿದೆ. ತನ್ನ ಉತ್ಪನ್ನಗಳನ್ನು ಉಲ್ಲೇಖಿಸಿ ಅದು ಈ ರೀತಿ ಹೇಳಿದ್ದರೂ ಪರೋಕ್ಷವಾಗಿ ಟಿಕ್ಟಾಕ್ ಅನ್ನು ಅದು ಗುರಿ ಮಾಡಿಕೊಂಡಿದೆ. STik with this STok ಅಂದರೆ ಈ ಉತ್ಪನ್ನಕ್ಕೆ ಅಂಟಿಕೊಳ್ಳಿ ಎಂದು ಅದು ಹೇಳಿದ್ದಾದರೂ ಹಾಸ್ಯಾತ್ಮಕವಾಗಿ ಅದರ ಗುರಿ ಟಿಕ್ಟಾಕ್ ಆಗಿದೆ.
“WeChat over tea” ಅಂದರೆ ಚಹಾ ಸೇವಿಸುತ್ತಾ ಮಾತನಾಡೋಣ ಎಂದು ಅದು ಹೇಳಿದ್ದರೂ, ಅದರ ಪರೋಕ್ಷ ಟಾಂಗ್ ಚೀನಾದ ನಿಷೇಧಿತ ಆ್ಯಪ್ ವಿಚಾಟ್ ಆಗಿದೆ.
ಅಮೂಲ್ನ ಈ ಸೊಗಸಾದ ಪೋಸ್ಟರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ʼಫಾದರ್ ಆಫ್ ಮೆಮೆʼ ಎಂದು ನಾವು ಅಮೂಲ್ ಅನ್ನು ಘೋಷಿಸುತ್ತೇವೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ನಿಜಕ್ಕೂ ಚೀನಾ ವಿರೋಧಿ ಪೋಸ್ಟರ್ ಎಂದು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ಅಮೂಲ್ ಮತ್ತೊಮ್ಮೆ ಜನರ ಹೃದಯ ಗೆದ್ದಿದೆ.
ಈ ಹಿಂದೆ ಅದು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬರ್ಥ ಬರುವ ಪೋಸ್ಟರ್ಗಳನ್ನು ಬಿಟ್ಟಿತ್ತು, ಅದಕ್ಕೂ ದೊಡ್ಡ ಮಟ್ಟದ ಪ್ರಶಂಸೆಗಳು ವ್ಯಕ್ತವಾಗಿತ್ತು.
#Amul Topical: New Delhi bans 59 Chinese apps! pic.twitter.com/f01D1gNBLt
— Amul.coop (@Amul_Coop) June 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.