ನವದೆಹಲಿ: ಪೂರ್ವ ಲಡಾಖ್ನ ನೈಜ ನಿಯಂತ್ರಣ ರೇಖೆಯಿಂದ (ಎಲ್ಎಸಿ) ಯುದ್ಧೋನ್ಮಾದ ಚೀನಾವನ್ನು ಹಿಂದಕ್ಕೆ ತಳ್ಳಲು ಮತ್ತು ಯುದ್ಧದ ಸನ್ನದ್ಧತೆಯನ್ನು ಹೆಚ್ಚಿಸಲು ಭಾರತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚೀನಾವನ್ನು ಎದುರಿಸುವ ಸಲುವಾಗಿ ಗಲ್ವಾನ್ ಕಣಿವೆಯ ಮುಂಭಾಗದಲ್ಲಿ ಆರು ಟಿ -90 ಟ್ಯಾಂಕ್ಗಳನ್ನು ಭಾರತ ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಟಿ -90 ಭೀಷ್ಮ ಟ್ಯಾಂಕ್ಗಳ ನಿಯೋಜನೆಯ ಜೊತೆಗೆ, ಭಾರತವು ಗಾಲ್ವಾನ್ ಕಣಿವೆಯಲ್ಲಿ ಉನ್ನತ-ಶ್ರೇಣಿಯ ಶೋಲ್ಡರ್ ಫೈಯರ್ಡ್ ಆ್ಯಂಟಿ ಟ್ಯಾಂಕ್ ಮಿಸೈಲ್ ಸಿಸ್ಟಮ್ ಅನ್ನು ಕೂಡ ನಿಯೋಜಿಸಿದೆ.
ಪೂರ್ವ ಲಡಾಖ್ ಪ್ರದೇಶದಲ್ಲಿ 1,597 ಕಿಲೋಮೀಟರ್ ಉದ್ದದ ಎಲ್ಎಸಿ ಉದ್ದಕ್ಕೂ ಭಾರತ ಈಗಾಗಲೇ ಇನ್ಫಾಂಟ್ರಿ ಯುದ್ಧ ವಾಹನಗಳು ಮತ್ತು 155 ಎಂಎಂ ಹೊವಿಟ್ಜರ್ಗಳನ್ನು ನಿಯೋಜಿಸಿದೆ. ಚುಶುಲ್ ವಲಯದಲ್ಲಿ ಎರಡು ಟ್ಯಾಂಕ್ ರೆಜಿಮೆಂಟ್ಗಳನ್ನು ಕೂಡ ನಿಯೋಜಿಸಲಾಗಿದೆ.
ಚೀನಾದ ಯಾವುದೇ ದುಷ್ಕೃತ್ಯಗಳಿಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಲು ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಕೂಡ ಉನ್ನತ ಮಟ್ಟದ ಸಿದ್ಧತೆಗಳನ್ನು ನಡೆಸುತ್ತಿದೆ.
ಈ ನಡುವೆ, ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಯ ಹಿರಿಯ ಕಾರ್ಪ್ಸ್ ಕಮಾಂಡರ್ಗಳು ಇಂದು ಮತ್ತೆ ಚುಶುಲ್ನಲ್ಲಿ ಸಭೆ ಸೇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.