ನವದೆಹಲಿ: ಭಾರತದಲ್ಲಿ ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸುವ ಸಲುವಾಗಿ, ಜನ್ ಔಷಧಿ ಸುವಿಧ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ದೇಶದಾದ್ಯಂತದ 6300ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಕೇಂದ್ರಗಳಲ್ಲಿ ಲಭ್ಯಗೊಳಿಸಲಾಗುತ್ತಿದೆ. 1 ರೂಪಾಯಿಗೆ ಪ್ರತಿ ಪ್ಯಾಡ್ ಲಭ್ಯವಾಗಲಿದೆ. ಇದೇ ರೀತಿಯ ಪ್ಯಾಡ್ಗಳಿಗೆ ಮಾರುಕಟ್ಟೆ ಬೆಲೆ ರೂ. 3 ರಿಂದ ರೂ. 8 ಇದೆ ಎಂದು ವರದಿಗಳು ತಿಳಿಸಿವೆ.
ಈ ಉಪಕ್ರಮವನ್ನು ಪರಿಚಯಿಸಿದಾಗಿನಿಂದ ಅಂದರೆ 4 ಜೂನ್ 2018- 2020ರ ಜೂನ್ 10 ರ ವರೆಗೆ ಕೇಂದ್ರಗಳಲ್ಲಿ 4.61 ಕೋಟಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸಲಾಗಿದೆ. ಈ ನಡುವೆ, ಆಗಸ್ಟ್ 27, 2019 ರಂದು ಬೆಲೆಗಳ ಪರಿಷ್ಕರಣೆಯ ನಂತರ 2020ರ ಜೂನ್ 10 ರವರೆಗೆ 3.43 ಕೋಟಿ ಪ್ಯಾಡ್ಗಳನ್ನು ಕೇಂದ್ರದಲ್ಲಿ ಮಾರಾಟ ಮಾಡಲಾಗಿದೆ.
ದೇಶದ ಅನೇಕ ಭಾಗಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರಿಗೆ ಸ್ಯಾನಿಟರಿ ಉತ್ಪನ್ನಗಳ ಪ್ರವೇಶವಿಲ್ಲ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಹೆಚ್ಚಿನ ವಸ್ತುಗಳು ಸ್ವಲ್ಪ ವೆಚ್ಚದಾಯಕವಾಗಿರುವುದರಿಂದ ಅವರು ಅವುಗಳನ್ನು ಆರಿಸಿಕೊಳ್ಳುವುದಿಲ್ಲ. ‘ಎಲ್ಲರಿಗೂ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಹೆಜ್ಜೆಗಳನ್ನು ಅನುಸರಿಸಿ ಆರಂಭವಾದ ಸರ್ಕಾರದ ಈ ಕ್ರಮವು ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತಿದೆ. ಇದು ಭಾರತದ ಹಿಂದುಳಿದ ಮಹಿಳೆಯರಿಗೆ ‘ಸ್ವಚ್ಛತೆ, ಸ್ವಾಸ್ಥ್ಯ ಮತ್ತು ಸುವಿಧಾ’ ವನ್ನು ಖಚಿತಪಡಿಸುತ್ತದೆ.
ಈ ಸ್ಯಾನಿಟರಿ ಪ್ಯಾಡ್ಗಳು ಪರಿಸರ ಸ್ನೇಹಿಯಾಗಿರುತ್ತವೆ, ಏಕೆಂದರೆ ಈ ಪ್ಯಾಡ್ಗಳನ್ನು ಎಎಸ್ಟಿಎಂ ಡಿ -6954 (ಜೈವಿಕ ವಿಘಟನೀಯತೆ ಪರೀಕ್ಷೆ) ಮಾನದಂಡಗಳಿಗೆ ಅನುಸಾರವಾಗಿ ಆಕ್ಸೊ-ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಿಸಲಾಗುತ್ತದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಅಡಿಯಲ್ಲಿ ಈ ಪ್ಯಾಡ್ಗಳನ್ನು ಪ್ರತಿ ಪ್ಯಾಡ್ಗೆ 1 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.