ನವದೆಹಲಿ: ಭಾರತೀಯ ರೈಲ್ವೆಯು ಗುರುವಾರ ಮೊದಲ ಡಬಲ್ ಸ್ಟ್ಯಾಕ್ ಕಂಟೇನರ್ ರೈಲನ್ನು ಎತ್ತರದ ಓವರ್ ಹೆಡ್ ಎಕ್ವಿಪ್ಮೆಂಟ್ (ಒಹೆಚ್ಇ) ವಿದ್ಯುದ್ದೀಕೃತ ವಿಭಾಗಗಳಲ್ಲಿ ಯಶಸ್ವಿಯಾಗಿ ಓಡಿಸುವ ಮೂಲಕ ಹೊಸ ವಿಶ್ವ ಮಾನದಂಡವನ್ನು ಸೃಷ್ಟಿಸಿದೆ.
ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ. “ರೈಲ್ವೆ ಮೊದಲ ಡಬಲ್ ಸ್ಟ್ಯಾಕ್ ಕಂಟೇನರ್ ರೈಲನ್ನು ಎತ್ತರದ ಓವರ್ ಹೆಡ್ ಎಕ್ವಿಪ್ಮೆಂಟ್ (ಒಹೆಚ್ಇ) ವಿದ್ಯುದ್ದೀಕೃತ ವಿಭಾಗಗಳಲ್ಲಿ ಯಶಸ್ವಿಯಾಗಿ ಓಡಿಸುವ ಮೂಲಕ ಹೊಸ ವಿಶ್ವ ಮಾನದಂಡವನ್ನು ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಸರಕು ಸಾಗಣೆ ಕಾರ್ಯಾಚರಣೆಗಳಲ್ಲಿ ನಾವೀನ್ಯತೆ, ವೇಗ ಮತ್ತು ಗ್ರಾಹಕೀಕರಣವನ್ನು ಉತ್ತೇಜಿಸುತ್ತಿದೆ” ಎಂದಿದ್ದಾರೆ.
ಈ ರೀತಿಯ ಸಾಧನೆಯು ಇಡೀ ಜಗತ್ತಿನಲ್ಲೇ ಮೊದಲನೇಯದಾಗಿದೆ ಮತ್ತು ಭಾರತೀಯ ರೈಲ್ವೆಯ ಇತ್ತೀಚಿನ ಹಸಿರು ಉಪಕ್ರಮಗಳು ಗ್ರೀನ್ ಇಂಡಿಯಾದ ಮಹತ್ವಾಕಾಂಕ್ಷೆಯ ಧ್ಯೇಯವನ್ನು ಹೆಚ್ಚಿಸುತ್ತಿವೆ.
ಈ ಬೆಳವಣಿಗೆಯೊಂದಿಗೆ, ಭಾರತೀಯ ರೈಲ್ವೆಯು ಡಬಲ್ ಸ್ಟ್ಯಾಕ್ ಕಂಟೇನರ್ ರೈಲನ್ನು ಎತ್ತರದ ಓಎಚ್ಇ ಭೂಪ್ರದೇಶದಲ್ಲಿ ಹೆಚ್ಚಿನ ತಲುಪುವ ಪ್ಯಾಂಟೋಗ್ರಾಫ್ನೊಂದಿಗೆ ಓಡಿಸಿದ ಮೊದಲ ರೈಲ್ವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲು ತನ್ನ ಕಾರ್ಯಾಚರಣೆಯನ್ನು ಗುಜರಾತ್ನ ಪಾಲನ್ಪುರ ಮತ್ತು ಬೊಟಾಡ್ ನಿಲ್ದಾಣಗಳಿಂದ 2020 ರ ಜೂನ್ 10 ರಂದು ಯಶಸ್ವಿಯಾಗಿ ಪ್ರಾರಂಭಿಸಿತ್ತು. ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ನಾವೀನ್ಯತೆ, ವೇಗ ಮತ್ತು ಗ್ರಾಹಕೀಕರಣವನ್ನು ತರುವ ಹಸಿವು ಇಂತಹ ಸಾಧನೆಗೆ ಪ್ರೇರಣೆಯಾಗಿದೆ.
2020 ರ ಏಪ್ರಿಲ್ 1 ರಿಂದ 2020 ರ ಜೂನ್ 10 ರವರೆಗೆ ಭಾರತೀಯ ರೈಲ್ವೆ ತನ್ನ ನಿರಂತರ 24 ಎಕ್ಸ್ 7 ಸರಕು ರೈಲು ಕಾರ್ಯಾಚರಣೆಗಳ ಮೂಲಕ 178.68 ಮಿಲಿಯನ್ ಟನ್ ಸರಕುಗಳನ್ನು ದೇಶಾದ್ಯಂತ ಸಾಗಿಸಿದೆ ಎಂದು ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Railways creates a new world benchmark by successfully running 1st Double Stack Container Train in high rise Over Head Equipment (OHE) electrified sections 🚊
Govt under PM @NarendraModi ji propels innovation, speed & customisation in freight operationshttps://t.co/FlmzNwwNAi pic.twitter.com/B7PljFnQhH
— Piyush Goyal (@PiyushGoyal) June 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.