ನವದೆಹಲಿ: ಪ್ರಸ್ತುತ ವಾಟ್ಸಾಪ್, ಫೇಸ್ಬುಕ್ ಮೊದಲಾದವುಗಳಲ್ಲಿ ಬಳಕೆಯಾಗುತ್ತಿರುವ ಮತ್ತು ಹೆಚ್ಚು ಜನರಿಗೆ ಇಷ್ಟವಾಗಿರುವ ಸ್ಟೇಟಸ್ ಆಯ್ಕೆ ಅನ್ನು ಟ್ವೀಟರ್ ಸಹ ಸದ್ಯ ಭಾರತದಲ್ಲಿ ಬಳಕೆಗೆ ತಂದಿದೆ.
ಈಗಾಗಲೇ ಬ್ರೆಜಿಲ್, ಇಟಲಿ ಮೊದಲಾದ ದೇಶಗಳಲ್ಲಿ ಟ್ವೀಟರ್ನಲ್ಲಿ ಸ್ಟೇಟಸ್ ಆಯ್ಕೆ ಈಗಾಗಲೇ ಬಳಕೆಯಲ್ಲಿದ್ದು, ಇದೀಗ ಭಾರತದಲ್ಲಿಯೂ ಇದನ್ನು ಪರಿಚಯಿಸಲಾಗಿದೆ ಎಂದು ಟ್ವೀಟರ್ ಟ್ವೀಟ್ ಮೂಲಕ ತಿಳಿಸಿದೆ. ಈ ಆಯ್ಕೆ ಅನ್ನು ಫ್ಲೀಟ್ಸ್ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಇದರಲ್ಲಿ ಬಳಕೆದಾರರು ಪ್ರಕಟಿಸಿದ ಬರಹಗಳು 24 ಗಂಟೆಗಳವರೆಗೆ ಕಾಣಿಸಿಕೊಳ್ಳುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಫ್ಲೀಟ್ಸ್ ಗಳ ಬಳಕೆಯನ್ನು ಟ್ವೀಟರ್ ಆಪ್ ಅನ್ನು ಅಪ್ಡೇಟ್ ಮಾಡಿಕೊಳ್ಳುವ ಮೂಲಕ ಆಂಡ್ರಾಯ್ಡ್, ಐಒಎಸ್ ಆಧಾರಿತ ಮೊಬೈಲ್ ಗಳಲ್ಲಿ ಬಳಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಇದಕ್ಕೆ ಲೈಕ್, ಕಮೆಂಟ್, ರಿಟ್ವೀಟ್ ಮಾಡುವ ಅವಕಾಶವನ್ನು ನೀಡಲಾಗಿಲ್ಲ. ತಾವು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ, ಲೈಕ್ ಗಳು ಬರುತ್ತವೆ. ರಿಟ್ವೀಟ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹಲವು ಜನರು ಟ್ವೀಟ್ ಮಾಡಲು ಹಿಂದೆ ಮುಂದೆ ನೋಡುತ್ತಾರೆ ಎಂಬುದಾಗಿಯೂ ಟ್ವೀಟರ್ ತಿಳಿಸಿದ್ದು, ಅದಕ್ಕಾಗಿ ಈ ಹೊಸ ಫೀಚರ್ ಅನ್ನು ಆರಂಭ ಮಾಡುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ.
ಇನ್ನು ಟ್ವೀಟರ್ ಖಾತೆಯ ಮೇಲಿನ ಭಾಗದಲ್ಲಿ ಈ ಫೀಚರ್ ಅಳವಡಿಸಲಾಗಿದೆ. ಈ ಫ್ಲೀಟ್ಸ್ ಅನ್ನು ಯಾರೆಲ್ಲಾ ನೋಡಿದ್ದಾರೆ ಎಂಬುದನ್ನು ಫ್ಲೀಟ್ಸ್ ತನ್ನ ಕೆಳ ಭಾಗದಲ್ಲಿ ತೋರಿಸಿಕೊಡಲಿದೆ. ಹಾಗೆಯೇ ಮತ್ತೊಬ್ಬರ ಫ್ಲೀಟ್ಸ್ ಅನ್ನು ಸಹ ಇದೆ ರೀತಿಯಲ್ಲಿ ನಾವು ನೋಡಬಹುದಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
Testing, testing…
We’re testing a way for you to think out loud without the Likes, Retweets, or replies, called Fleets! Best part? They disappear after 24 hours. pic.twitter.com/r14VWUoF6p— Twitter India (@TwitterIndia) June 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.