ನವದೆಹಲಿ: ಪರಾರಿಯಾಗಿರುವ ಹಣಕಾಸು ವಂಚಕರಾದ ನೀರವ್ ಮೋದಿ ಮತ್ತು ಮೆಹೂಲ್ ಚೋಕ್ಸಿ ಒಡೆತನದ ಸಂಸ್ಥೆಗೆ ಸೇರಿದ ಸುಮಾರು ರೂ.1,350 ಕೋಟಿ ಮೌಲ್ಯದ 2,340 ಕೆಜಿ ಪಾಲಿಶ್ ಮಾಡಿದ ವಜ್ರಗಳು, ಮುತ್ತುಗಳು ಮತ್ತು ಬೆಳ್ಳಿ ಆಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಹಾಂಗ್ಕಾಂಗ್ನಿಂದ ವಾಪಾಸ್ ತಂದಿದೆ.
ಹಣಕಾಸು ವಂಚಕರ ಈ ಸಂಸ್ಥೆಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಹಾಂಗ್ಕಾಂಗ್ನಲ್ಲಿವೆ ಎಂದು ವರದಿಗಳು ತಿಳಿಸಿವೆ.
108 ಬ್ಯಾಚ್ಗಳಲ್ಲಿ ಹಾಂಗ್ಕಾಂಗ್ನಿಂದ ಮುಂಬೈಗೆ ಈ ಅಮೂಲ್ಯ ವಸ್ತುಗಳನ್ನು ಮರಳಿ ತರಲಾಯಿತು, ಇದರಲ್ಲಿ 32 ನೀರವ್ ನಿಯಂತ್ರಣದ ಸಂಸ್ಥೆಗಳಿಗೆ ಸೇರಿದ್ದಾಗಿದೆ ಮತ್ತು ಉಳಿದವು ಚೋಕ್ಸಿ ನಿಯಂತ್ರಣದ ಸಂಸ್ಥೆಗಳಿಗೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ.
“ಮೌಲ್ಯಮಾಪನ ಮತ್ತು ವಶಪಡಿಸಿಕೊಳ್ಳುವ ಔಪಚಾರಿಕತೆಗಳು ಪ್ರಗತಿಯಲ್ಲಿವೆ” ಎಂದು ಇಡಿ ಹೇಳಿದೆ.
ಈ ಸರಕುಗಳನ್ನು 2018 ರ ಆರಂಭದಲ್ಲಿ ದುಬೈನಿಂದ ಹಾಂಗ್ಕಾಂಗ್ಗೆ ಕಳುಹಿಸಲಾಗಿತ್ತು, ಆದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜುಲೈ 2018ರಲ್ಲಿ ಈ ಅಮೂಲ್ಯ ವಸ್ತುಗಳ ಬಗ್ಗೆ ಗುಪ್ತಚರ ಮಾಹಿತಿ ಪಡೆದಿದ್ದರು.
ಈ ಅಮೂಲ್ಯ ವಸ್ತುಗಳನ್ನು ಮರಳಿ ಭಾರತಕ್ಕೆ ತರಲು ತನ್ನ ಅಧಿಕಾರಿಗಳು ಹಾಂಕಾಂಗ್ನ ವಿವಿಧ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಇಡಿ ಹೇಳಿತ್ತು.
“ವಿವಿಧ ವಿಧಾನಗಳನ್ನು ಅಂತಿಮಗೊಳಿಸಿದ ಮತ್ತು ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಈ ಸರಕುಗಳನ್ನು ಈಗ ಮತ್ತೆ ಭಾರತಕ್ಕೆ ತರಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ಇಡಿ ದುಬೈ ಮತ್ತು ಹಾಂಗ್ ಕಾಂಗ್ ನಿಂದ 33 ಬೆಲೆಬಾಳುವ ವಸ್ತುಗಳನ್ನು ಯಶಸ್ವಿಯಾಗಿ ವಾಪಸ್ ತಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.