ಇಸ್ಲಾಮಾಬಾದ್: ನೆರೆಯ ಪಾಕಿಸ್ಥಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ನೀಡಲು ಚೀನಾ ಮುಂದಾಗಿದೆ, ಈ ಸಂಬಂಧದ ಒಪ್ಪಂದಕ್ಕೆ ಎರಡು ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ.
ಈ ಬಗ್ಗೆ ಪಾಕಿಸ್ಥಾನ ಹಣಕಾಸು ಸಚಿವ ಇಷಾಕ್ ದರ್ ಮತ್ತು ಚೀನಾದ ಹಡಗು ನಿರ್ಮಾಣ ಸಂಸ್ಥೆಯ ಅಧ್ಯಕ್ಷರ ನಡುವೆ ಮಾತುಕತೆ ನಡೆದಿದೆ, ಬೀಜಿಂಗ್ನಲ್ಲಿ ಉನ್ನತ ಮಟ್ಟದ ಸಭೆ ನಡೆದ ಬಳಿಕ ಒಪ್ಪಂದಕ್ಕೆ ಸಹಿ ಬೀಳಲಿದೆ.
ಜಲಾಂತರ್ಗಾಮಿ ನೌಕೆ ಖರೀದಿಸಲಿರುವ ಪಾಕ್ ಒಟ್ಟು 4 ಕಂತುಗಳಲ್ಲಿ ಚೀನಾಗೆ ಹಣ ಪಾವತಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಒಪ್ಪಂದದಿಂದಾಗಿ ಪಾಕಿಸ್ಥಾನದ ನೌಕಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.