ಶ್ರೀನಗರ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶದ ಜನರು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗುತ್ತಿದ್ದಾರೆ. ಸಮರ್ಪಕವಾದ ವೈದ್ಯಕೀಯ ಚಿಕಿತ್ಸೆ ಅವರಿಗೆ ಸಿಗುತ್ತಿಲ್ಲ ಮತ್ತು ಆಹಾರಕ್ಕೂ ಅವರಿಗೆ ತೊಂದರೆ ಉಂಟಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ಈ ಪ್ರದೇಶದಲ್ಲಿ ಸುಮಾರು 800 ಪ್ರಕರಣಗಳು ವರದಿಯಾಗಿದೆ, ಆದರೆ ಈ ಬಿಕ್ಕಟ್ಟನ್ನು ಎದುರಿಸಲು ಅಲ್ಲಿನ ಜನರಿಗೆ ವೈದ್ಯಕೀಯ ಮೂಲಸೌಕರ್ಯಗಳೇ ಇಲ್ಲ. ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶದಲ್ಲಿ ಕೇವಲ ಎರಡು ವೆಂಟಿಲೇಟರ್ಗಳು ಇವೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪಾಕಿಸ್ಥಾನ ಸರ್ಕಾರ ಅಲ್ಲಿಗೆ ಯಾವುದೇ ವೈದ್ಯಕೀಯ ನೆರವನ್ನು ಮತ್ತು ಪೂರೈಕೆಯನ್ನು ಮಾಡುವ ಗೋಜಿಗೆ ಹೋಗಿಲ್ಲ.
ಈ ಬಗ್ಗೆ ಪಿಓಕೆಯ ಮಾನವ ಹಕ್ಕುಗಳ ಹೋರಾಟಗಾರ ಡಾ.ಅಮ್ಜದ್ ಆಯುಬ್ ಮಿರ್ಜಾ ಅವರು ಟ್ವೀಟ್ ಮಾಡಿದ್ದು, “ಗಿಲ್ಗಿಟ್-ಬಲ್ತಿಸ್ಥಾನದಲ್ಲಿ ಕೇವಲ ಎರಡು ವೆಂಟಿಲೇಟರ್ಗಳು ಇವೆ ಮತ್ತು ಪಾಕಿಸ್ಥಾನ – ಚೀನಾ ಯುಎಸ್ಡಿ 14 ಬಿಲಿಯನ್ ಮೊತ್ತದ ದಿಯಮೆರ್-ಬಶ ಡ್ಯಾಮ್ ನಿರ್ಮಾಣವನ್ನು ಆರಂಭಿಸಿವೆ. ನಮ್ಮ ಜನರ ಬಗ್ಗೆ ಪಾಕಿಸ್ಥಾನದ ಮಿಲಿಟರಿಗಾಗಲಿ, ಸರ್ಕಾರಕ್ಕಾಗಲಿ ಯಾವುದೇ ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ” ಎಂದಿದ್ದಾರೆ.
ಪಿಓಕೆಯಲ್ಲಿ ಕೊರೋನಾವೈರಸ್ ಪರೀಕ್ಷೆ ನಡೆಸುವ ಯಾವುದೇ ಸಮರ್ಪಕ ಸೌಲಭ್ಯಗಳು ಇಲ್ಲ, ವೈದ್ಯರಿಗೆ ಕೊರೋನಾ ಟೆಸ್ಟ್ ಮತ್ತು ಟೆಸ್ಟಿಂಕ್ ಕಿಟ್ಗಳ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತಿಲ್ಲ.
“ಪಾಕ್ ಸರ್ಕಾರದವರು ಹಣ ಮತ್ತು ದೇಣಿಗೆ ಪಡೆಯುತ್ತಾರೆ, ಆದರೆ ಅವರು ಆ ಹಣವನ್ನು ತಮ್ಮ ಸ್ವಂತ ಉದ್ದೇಶಕ್ಕಾಗಿ ಬಳಸುತ್ತಾರೆಯೇ ಹೊರತು ಜನರ ಕಲ್ಯಾಣಕ್ಕಾಗಿ ಅಲ್ಲ. ಜನರೇ ತಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಮತ್ತು ಸ್ಥಾನ ನೀಡಿದ್ದಾರೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಈಗಾಗಲೇ ಹಕ್ಕುಗಳಿಂದ ವಂಚಿತವಾಗಿರುವ ಈ ಪ್ರದೇಶದ ಬಗ್ಗೆ ಗಮನ ಹರಿಸಬೇಕೆಂದು ನಾನು ಅಧಿಕಾರಿಗಳಿಗೆ ವಿನಂತಿಸುತ್ತೇನೆ. ಈಗ ಕರೋನವೈರಸ್ನೊಂದಿಗೆ, ನಿರುದ್ಯೋಗವು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ ”ಎಂದು ಆಸ್ಟೋರ್ ಮೂಲದ ವಕೀಲ ಮೊಹಮ್ಮದ್ ಬಕರ್ ಮೆಹೆಡಿ ಹೇಳಿದ್ದಾರೆ.
ಕಾಶ್ಮೀರಿ ರಾಜಕೀಯ ಕಾರ್ಯಕರ್ತರು ಪಾಕಿಸ್ಥಾನದ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾದ ಪಂಜಾಬ್ ಮತ್ತು ಆ ದೇಶದ ಉಳಿದ ಭಾಗಗಳಿಂದ ಪಿಓಕೆ ಮತ್ತು ಗಿಲ್ಗಿಟ್ ಬಲ್ತಿಸ್ಥಾನಕ್ಕೆ ಕೊರೋನವೈರಸ್ ಪೀಡಿತ ಜನರನ್ನು ತಂದು ಬಿಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.