ನವದೆಹಲಿ: ಕೊರೋನಾ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ, ಇತರ ಕಾರ್ಮಿಕರನ್ನು ಸೋಂಕು ತಗುಲದಂತೆ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುವ ಕಡಿಮೆ ಬೆಲೆಯ ಪಿಪಿಇ ಕಿಟ್ ತಯಾರಿಕೆಗೆ ರಿಲಯನ್ಸ್ ಮುಂದಾಗಿದೆ.
ಪಿಪಿಇ ಗಳ ತಯಾರಿಕೆಯ ನಿಟ್ಟಿನಲ್ಲಿ ಸಂಸ್ಥೆ ಗುಜರಾತ್ನ ಸಿಲ್ವಾಸ್ಸಾದಲ್ಲಿನ ಅಲೋಕ್ ಇಂಡಸ್ಟ್ರೀ ಅನ್ನು ಬಳಸಿಕೊಳ್ಳುವುದಾಗಿ ತಿಳಿಸಿದೆ. ಅಲ್ಲದೆ ಈಗಾಗಲೇ ಕಾರ್ಯಾರಂಭವನ್ನೂ ಮಾಡಿದೆ. ಅದಕ್ಕಾಗಿ ಈಗಾಗಲೇ ಪೂರಕ ಕಚ್ಚಾವಸ್ತುಗಳನ್ನು, ಹತ್ತು ಸಾವಿರ ಮಂದಿ ದರ್ಜಿಗಳನ್ನೂ ನಿಯೋಜನೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಪಿಪಿಇ ಗಳನ್ನು ತಯಾರು ಮಾಡಲಾಗುವುದಾಗಿಯೂ ಸಂಸ್ಥೆ ತಿಳಿಸಿದೆ.
ದೇಶಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ದೇಶದೊಳಗೆ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಕರೆ ಕೊಟ್ಟಿರುವ ಕೇಂದ್ರದ ಆಶಯಕ್ಕೆ ಪೂರಕವಾಗಿ ಈ ಕಾರ್ಯವನ್ನು ಆರಂಭಿಸಲಾಗಿದೆ. ಎಪ್ರಿಲ್ ಮಧ್ಯದಲ್ಲಿಯೇ ಸಂಸ್ಥೆ ಕಾರ್ಯ ನಿರ್ವಹಿಸಲಾರಂಭಿಸಿದೆ. ಜನವರಿ ತಿಂಗಳಿನ ವರೆಗೆ ಪಿಪಿಇ ಗಳನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಕೊರೋನಾ ನಂತರದಲ್ಲಿ ದೇಶ ಅದ್ವಿತೀಯ ಪ್ರಮಾಣದಲ್ಲಿ ಪಿಪಿಇ ತಯಾರಿಕೆಯಲ್ಲಿ ತೊಡಗಿದ್ದು, ಆ ಮೂಲಕ ದೇಶದ ಜನರ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ನಡೆಸುತ್ತಿದೆ.
ಭಾರತದಲ್ಲಿ ಈ ಹಿಂದೆ ಪಿಪಿಇ ಮೌಲ್ಯ 2000 ರೂ. ಇದ್ದು, ರಿಲಯನ್ಸ್ ಸಂಸ್ಥೆ 650 ರೂ. ಗೆ ಪಿಪಿಇ ಕಿಟ್ ದರವನ್ನು ನಿಗದಿ ಮಾಡಿದೆ. ಅಲ್ಲದೆ ಗುಣಮಟ್ಟದ ವಿಚಾರದಲ್ಲಿಯೂ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ ಎಂಬುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಜೊತೆಗೆ ಸಂಸ್ಥೆ ಪಿಪಿಇ ಕವರಲ್ ಸಿಂಗಲ್ ಜಿಪ್ ಸ್ಯೂಟ್ ಗಳನ್ನೂ ತಯಾರಿಸುತ್ತಿದ್ದು, ಇದು ಆರೋಗ್ಯ ರಕ್ಷಕರಿಗೆ ಸಂಪೂರ್ಣ ಸಂರಕ್ಷಣೆ ನೀಡುವುದಾಗಿಯೂ ಸಂಸ್ಥೆ ಭರವಸೆ ನೀಡಿದ್ದಾರೆ. ಇದು ಮಾಸ್ಕ್, ಕೈಗವಸು, ಶೂ ಕವರ್, ಎನ್95, ಫೇಸ್ ಶೀಲ್ಡ್ ಮೊದಲಾದವುಗಳನ್ನು ಒಳಗೊಂಡಿದೆ ಎಂಬ ಮಾಹಿತಿಯನ್ನು ಸಂಸ್ಥೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.