ಮಿತ್ರಮೇಳ, ಅಭಿನವ ಭಾರತ ಈ ಹೆಸರು ಇವತ್ತಿನ ಬಹುತೇಕ ಕಾಲೇಜು ವಿದ್ಯಾರ್ಥಿಗಳು ಕೇಳಿರಲಿಕ್ಕಿಲ್ಲ. ಆದರೆ ಸಾವರ್ಕರ್ನ ಜೀವನದಲ್ಲಿ ನಾವು ನೋಡುವ ಬಹುಮುಖ್ಯ ಅಂಶ ಎಂದರೆ ಅವರ ಸಂಘ ಪ್ರೀಯತೆ, ಹೋದಲೆಲ್ಲಾ ಸಂಘ ಕಟ್ಟುವುದು ಅವರ ಸ್ವಭಾವವೇ ಆಗಿತ್ತು ಅದರಲ್ಲಿ ಪ್ರಮುಖವಾಗಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಮಿತ್ರಮೇಳ, ಅಭಿನವ ಭಾರತ. ಅದು 1900 ರ ಜನವರಿ 1 ನವಕ್ರಾಂತಿಯ ದ್ಯೋತಕವಾದ ಮಿತ್ರಮೇಳ ಸ್ಥಾಪನೆಯನ್ನು ನಾಸಿಕದಲ್ಲಿ ಮಾಡುತ್ತಾರೆ ಆಗ ಅವರಿಗೆ 18 ವರ್ಷ. ಇದರ ಉದ್ದೇಶ ಕಾಲೇಜು ವಿದ್ಯಾರ್ಥಿಗಳು, ಕಿಶೋರರು, ಯುವಕರನ್ನು ಸೇರಿಸಿ ಸಾರ್ವಜನಿಕ ರಂಗದಲ್ಲಿ ರಾಷ್ಟ್ರೀಯ ವಿಚಾರವನ್ನು ಸಾರುವುದು ಅದಕ್ಕಾಗಿ ಪ್ರಾಮಾಣಿಕರು, ವಿಶ್ವಾಸಪಾತ್ರ ವಿದ್ಯಾರ್ಥಿಗಳನ್ನು ಚೆನ್ನಾಗಿ ಪರೀಕ್ಷಿಸಿ ಕ್ರಮೇಣ ಅವರನ್ನು ಮಿತ್ರಮೇಳಕ್ಕೆ ಸೇರಿಸುತ್ತಿದ್ದರು, ನಾಸಿಕದ ಒಂದು ಮಹಡಿಯ ಕೋಣೆಯಲ್ಲಿ ಅದರ ಸಭೆ ನಡೆಯುತ್ತಿದ್ದು ವ್ಯಾಪಾರ, ವ್ಯಾಯಾಮ, ಶಿಕ್ಷಣ, ವೇದಾಂತ ಸ್ವದೇಶಿ ಸಾಹಿತ್ಯ ಇತ್ಯಾದಿ ವಿಷಯಗಳ ಬಗ್ಗೆ ಸದಸ್ಯರು ಲೇಖನ ಬರೆದು ತರಬೇಕಿತ್ತು ಮತ್ತು ಭಾಷಣವನ್ನು ಮಾಡಬೇಕಿತ್ತು ಆಯ್ದ 25-30 ಪುಸ್ತಕಗಳನ್ನು ಬೇರೆ ಬೇರೆ ಸದಸ್ಯರಿಗೆ ಕೊಡುತ್ತಿದ್ದರು ಅದು ಓದಲೇ ಬೇಕು ಅದರಲ್ಲಿ ಪರೀಕ್ಷೆಯನ್ನು ಮಾಡುತ್ತಿದ್ದರು ಮತ್ತು ಒಂದು ರಾಷ್ಟ್ರೀಯ ವಿಷಯದ ಬಗ್ಗೆ ಚರ್ಚೆಯನ್ನು ಮಾಡಿಸುತ್ತಿದ್ದರು ಒಬ್ಬ ವಿಚಾರವನ್ನು ಮಂಡಿಸಿ ಉಳಿದವರು ಅಭಿಪ್ರಾಯ ಕೊಡುತ್ತಿದ್ದರು ಮಿತ್ರಮೇಳದ ಸಭೆಯು ವಾರದಲ್ಲಿ ಒಂದು ದಿನ ನಡೆಯುತ್ತಿದ್ದು ಇದನ್ನು ಸಾಪ್ತಾಹಿಕ ಬೈಠಕ್ ಎಂದು ಕರೆಯುತ್ತಿದ್ದರು ಇದರಲ್ಲಿ ಯಾವುದೇ ವಿಷಯ ಬಂದರು ಕೊನೆಗೆ ನಿಷ್ಕರ್ಷೆ ರಾಜಕೀಯ ಸ್ವಾತಂತ್ರವಿಲ್ಲದೆ ಯಾವುದೆ ರಾಷ್ಟ್ರೀಯ ರಂಗಗಳಿಗೆ ಅಸ್ತಿತ್ವವೇ ಇರುವುದಿಲ್ಲವೆಂದು ಮನವರಿಕೆ ಮಾಡುತ್ತಿದ್ದರು. ಮುಂದೆ ಮಿತ್ರಮೇಳವು ಶಿವಾಜಿ ಜಯಂತಿ, ಗಣೆಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಪ್ರಾರಂಭಿಸಿದರು. ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿ ಸರಾಜ್ಯವಲ್ಲ ಸ್ವರಾಜ್ಯ ನಮ್ಮ ಧ್ಯೇಯ ಎಂದು ಘೋಷಣೆಯನ್ನು ಮಾಡಿದರು.
ಸಾವರ್ಕರ್ ತನ್ನ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡರು ಮುಂದೆ ಮಿತ್ರಮೇಳವನ್ನು ಪ್ರಾಂತದಾದ್ಯಂತ ವಿಸ್ತರಿಸುವ ದೃಷ್ಠಿಯಿಂದ ಪುಣೆಯ ಫರ್ಗುಸನ್ ಕಾಲೇಜಿಗ ಸೇರುವ ನಿರ್ಧಾರ ಮಾಡುತ್ತಾರೆ. ಏಕೆಂದರೆ ಅಲ್ಲಿ ಲೋಕಮಾನ್ಯ ತಿಲಕರು ಸೇವೆ ಸಲ್ಲಿಸುತ್ತಿದ್ದರು ಅದ್ದರಿಂದ ಅದು ದೇಶಭಕ್ತರ ಕೇಂದ್ರವಾಗಿತ್ತು ಮತ್ತು ಮಹರಾಷ್ಟ್ರ, ಮಧ್ಯಪ್ರಾಂತ ಹಾಗೂ ಕರ್ನಾಟಕದಿಂದಲು ವಿದ್ಯಾರ್ಥಿಗಳು ಅಲ್ಲಿಗೆ ಬರುತ್ತಿದ್ದರು ಸಾವರ್ಕರ್ ಮಿತ್ರಮೇಳವನ್ನು ಪ್ರಾಂತದಾದ್ಯಂತ ಪಸರಿಸುವ ಯೋಜನೆ ಮಾಡುತ್ತಾರೆ.
ಸಾವರ್ಕರ್ ಪ್ರಾರಂಭದಲ್ಲಿ ತನ್ನ ಕಾರ್ಯವನ್ನು ಕಾಲೇಜಿನ ವಸತಿಗೃಹದಿಂದ (ಹಾಸ್ಟೆಲ್) ಪ್ರಾರಂಭಿಸುತ್ತಾರೆ. ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ, ವಸತಿಗೃಹದಲ್ಲಿ ಇದ್ದ ಶಿವಾಜಿ ಭಾವಚಿತ್ರಕ್ಕೆ ಪ್ರತಿ ಶುಕ್ರವಾರ ಸಾಮೂಹಿಕ ಪೂಜೆಯ ವ್ಯವಸ್ಥೆ ಜಾರಿಗೆ ತಂದರು. ಇದು ದೇಶಭಕ್ತಿಯ ಕಿಡಿ ಹೊತ್ತಿಸಿದ ರೀತಿಯಲ್ಲೇ ಇತ್ತು. ಮುಂದೆ ವಸತಿಗೃಹದ ವಿದ್ಯಾರ್ಥಿಗಳು ಒಬೊಬ್ಬರು ಮಿತ್ರಮೇಳದ ಸದಸ್ಯರಾಗುತ್ತಾರೆ. ವಸತಿಗೃಹದ ಪಕ್ಕದಲ್ಲಿ ಒಂದು ಗುಡ್ಡ ಅದರ ಮೇಲೆ ಹತ್ತಿದ ನಂತರ ಅಲ್ಲೊಂದು ಬಾರಿ ಹಳ್ಳದೊಳಗೆ ಮಿತ್ರಮೇಳದ ಸಾಪ್ತಾಹಿಕ ಸಭೆ ನಡೆಯುತ್ತಿತ್ತು, ಮೆಳೆಗಾಲದಲ್ಲಿ ಯಾರಾದರೊಬ್ಬ ವಿದ್ಯಾರ್ಥಿಯ ಕೊಠಡಿಯಲ್ಲೇ ಸಾಪ್ತಾಹಿಕ ಸಭೆ ನಡೆಯುತ್ತಿತ್ತು, ಇದು ಮಾತ್ರವಲ್ಲದೆ ದಿನನಿತ್ಯ ರಾತ್ರಿ ಊಟದ ಬಳಿಕ ಒಂದೆಡೆ ಸೇರಿ ಮಾತುಕತೆ, ಹಾಸ್ಯ ಸಾಮಾನ್ಯವಾಗಿ ನಡೆಯುತ್ತಿದ್ದವು. ವಸತಿಗೃಹದ ಈ ತಂಡ ಮುಂದೆ ಪುಣೆಯ ಬೇರೆ ಬೇರೆ ಕಾಲೇಜು, ಹಾಸ್ಟಲ್ಗಳಿಗೂ ಮಿತ್ರಮೇಳವನ್ನು ಪಸರಿಸುತ್ತಾರೆ. ನೂರಾರು ವಿದ್ಯಾರ್ಥಿಗಳನ್ನು ಸೆಳೆಯುತ್ತಾರೆ. ಮಿತ್ರಮೇಳಕ್ಕೆ ಸೇರುವ ಸದಸ್ಯರಿಗೆ ಒಂದು ಪ್ರತಿಜ್ಞೆ ಮಾಡುವ ಕ್ರಮವನ್ನು ಪ್ರಾರಂಭಿಸಿದರು, ಶಿವಾಜಿ, ಶ್ರೀ ಕೃಷ್ಣನ ಭಾವಚಿತ್ರದ ಮುಂದೆ ಕೈ ಬೆರಳಿನಿಂದ ರಕ್ತ ಕೆಳಕ್ಕೆ ಬೀಳಿಸುತ್ತಾ ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ಆಹುತಿ ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಿಸುತ್ತಿದ್ದರು.
ಮಿತ್ರಮೇಳ ಪ್ರಾಂತದಾದ್ಯಂತ ಬೆಳೆಯುವ ಯೋಜನೆಯಲ್ಲಿ ಸಾವರ್ಕರ್ ಪುಣೆಯ ಥುಳೆಯಲ್ಲಿದ್ದ ಒಂದು ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಮಿತ್ರ ಮೇಳದ ಶಾಖೆಯನ್ನು ಪ್ರಾರಂಭಿಸುತ್ತಾರೆ. ಪ್ರಾಂತದಾದ್ಯಂತ ಅಲ್ಲಿಗೆ ಶಿಕ್ಷಕ ತರಬೇತಿಗೆ ಬರುತ್ತಿದ್ದರು ಈ ಮೂಲಕ ಶಿಕ್ಷಕರ ಮೂಲಕ ಮಿತ್ರಮೇಳವನ್ನು ಪ್ರಾಂತದಾದ್ಯಂತ ಹಬ್ಬಿಸುತ್ತಾರೆ. 1904 ವಾರ್ಷಿಕ ಸಮ್ಮೇಳನ ನಾಸಿಕದ ಭಾವೂನ ಮನೆಯಲ್ಲಿ ಜರಗಿತು. ಆರೇಳು ಜಿಲ್ಲೆಗಳಿಂದ 200 ರ ವರೆಗೆ ಪ್ರತಿನಿಧಿಗಳು ಅಲ್ಲಿಗೆ ಬಂದಿದ್ದರು. ಸಾರ್ವಕರ್ ಈ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡುತ್ತಾ ಇಟಲಿಯ ಯಶಸ್ವಿ ಕ್ರಾಂತಿ ಸಂಸ್ಥೆ ಯಂಗ್ ಇಟಲಿ ಮಾದರಿಯಲ್ಲೆ ಮಿತ್ರಮೇಳ ಇಂದಿನಿಂದ ’ಅಭಿನವ ಭಾರತ’ ಆಗಿದೆ ಎಂದು ಘೋಷಣೆ ಮಾಡುತ್ತಾರೆ. ಇದನ್ನು ದೇಶದಾದ್ಯಂತ ವಿಸ್ತರಿಸುವ ಕರೆ ನೀಡುತ್ತಾರೆ. 1905 ರಲ್ಲಿ ’ಅಭಿನವ ಭಾತರದ’ ಮೊದಲ ಸಮ್ಮೇಳನ ಕೋರೂರಿನಲ್ಲಿ ನಡೆಯಿತು ಪೂನೆಯಳ್ಲಿ ತಿಲಕರ ಬಹಿಷ್ಕಾರ-ಸ್ವದೇಶಿ-ರಾಷ್ಟ್ರೀಯ ಶಿಕ್ಷಣ-ಸ್ವರಾಜ್ಯ ಚತುಸ್ಸೂತ್ರಗಳ ಆಧಾರದಲ್ಲಿ ಸಂಘಟನೆ ಮಾಡುತ್ತಾರೆ. ವಿದೇಶಿ ವಸ್ತುಗಳ ದಹನ ಮಾಡುವ ಮೂಲಕ ಹೋಳಿ ಆಚರಣೆ ಮಾಡುತ್ತಾರೆ ಇದೇ ಕಾರಣಕ್ಕೆ ಸಾವರ್ಕರ್ ತನ್ನ ವಸತಿ ಗೃಹದಿಂದ ಉಚ್ಚಾಟನೆಯಾಗುತ್ತಾರೆ. ಆದರೆ ಸಾವರ್ಕರ್ ಇದನ್ನು ಸವಾಲಾಗಿ ಸ್ವೀಕರಿಸಿ ’ಅಭಿನವ ಭಾರತದ’ ಹುಡುಗರಿಗೆ’ ಯಾರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಬಾರದು ಎಂದು ಕರೆ ನೀಡಿದರು. ಅವರು ಸಹ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಇದನ್ನು ’ಅಭಿನವ ಭಾರತದ’ ಹುಡುಗರು ನಗರದಾದ್ಯಂತ ಮೆರವಣಿಗೆ ಮಾಡಿ ಸಂಭ್ರಮ ಪಟ್ಟರು.
ಇವತ್ತು ಸ್ವಾತಂತ್ರ್ಯ ಬಂದಿದೆ. ಚಳುವಳಿಯ ಅವಶ್ಯಕತೆ ಇಲ್ಲ, ಆದರೆ ದೇಶ ಭಕ್ತರನ್ನು ತಯಾರು ಮಾಡುವ ಅವಶ್ಯಕತೆ ಇದೆ. ಇಂದು ನಮ್ಮ ವಿಶ್ವವಿದ್ಯಾನಿಲಯಗಳು ದೇಶವಿರೋಧಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಖಾನೆ ಆಗುತ್ತಿದೆಯೇ ಎನ್ನುವ ಭಯ, ಆತಂಕ ನಮ್ಮೆಲ್ಲರಲ್ಲಿ ಕಾಡುತ್ತಿದೆ. ದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಹಿಡಿದು, ಮೊನ್ನೆ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ದೇಶವಿರೋಧಿ ಘೋಷಣೆ ಮಾಡಿದವರೆಗೆ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯದ ಪ್ರಭಾವದಲ್ಲಿ ದೇಶವಿರೋಧಿ ಚಟುವಟಿಕೆಗಳು ಬೆಳಕಿಗೆ ಬರುವುದನ್ನು ನೋಡುವಾಗ ಮಿತ್ರಮೇಳ, ಅಭಿನವ ಭಾರತದ ಅವಶ್ಯಕತೆ ಇಂದಿನ ವಿಶ್ವವಿದ್ಯಾನಿಲಯ, ಕಾಲೇಜು ವಿದ್ಯಾರ್ಥಿ ವಸತಿಗೃಹಗಳಲ್ಲಿ ಇದೆ ಎಂದು ಹೇಳಬಹುದು. ಅದಕ್ಕೆ ನಮ್ಮ ವಿದ್ಯಾರ್ಥಿ ಸಮೂಹದಲ್ಲಿರುವ ಕೆಲವರಾದರು ಸಾವರ್ಕರ್ನ ಪಾತ್ರವನ್ನು ತಮ್ಮ ಕಾಲೇಜನಲ್ಲಿ ನಿರ್ವಹಿಸಬೇಕಾಗುತ್ತದೆ. ಮಿತ್ರಮೇಳದ ಸಾಪ್ತಾಹಿಕ ಸಭೆಯ ಮಾದರಿಯಲ್ಲೇ ತಮ್ಮ ಕಾಲೇಜಿನಲ್ಲಿ, ವಿಶ್ಯವಿದ್ಯಾಲಯದಲ್ಲಿ, ಹಾಸ್ಟೆಲ್ನಲ್ಲಿ ಸಭೆಗಳನ್ನು ಮಾಡಬೇಕಾಗಿದೆ. ಆಗ ನಮ್ಮ ವಿಶ್ವವಿದ್ಯಾನಿಲಯ, ಹಾಸ್ಟೆಲ್ಗಳು ದೇಶಭಕ್ತರನ್ನು ತಯಾರಿಸುವ ಕೇಂದ್ರವಾಗಬಹುದು. ಇದೇ ಸಾವರ್ಕರ್ಗೆ ನಾವು ನೀಡುವ ನಿಜವಾದ ಗೌರವ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.