ಮುಂಬೈ: ದೇಶೀಯ ಸಂಸ್ಥೆ ಫ್ಲಿಪ್ಕಾರ್ಟ್ ಪ್ಲಾಸ್ಟಿಕ್ ಬಳಕೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಪಾರ್ಸೆಲ್ಗಳಿಗೆ ಪ್ಲಾಸ್ಟಿಕ್ ಬದಲು ಕುಶನ್ ವರ್ಕ್ಡ್ ಪೇಪರ್ಗಳನ್ನು ಬಳಕೆ ಮಾಡುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಝೋರೋ ವೇಸ್ಟ್ (ಶೂನ ತ್ಯಾಜ್ಯ) ಕಲ್ಪನೆಯನ್ನು ಇಟ್ಟುಕೊಂಡು ಈ ಯೋಜನೆ ಕಾರ್ಯರೂಪಕ್ಕೆ ತರಲು ಮುಂದಾಗಿರುವ ಈ ಆನ್ಲೈನ್ ಮಾರುಕಟ್ಟೆ ಸಂಸ್ಥೆ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪುನರ್ಬಳಕೆಗೆ ಯೋಗ್ಯವಾದ ಕಾಗದಗಳನ್ನು ಬಳಸಿ ಪ್ಯಾಕಿಂಗ್ ಸಿಸ್ಟಂ ಅನ್ನು ಸಂಸ್ಥೆ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಮೇ 1 ರಿಂದ ತೊಡಗಿದಂತೆ ಸಂಪೂರ್ಣವಾಗಿ ಪೇಪರ್ನಿಂದಲೇ ಪ್ಯಾಕ್ ಮಾಡಲು ಆರಂಭ ಮಾಡಿದೆ. ಜೊತೆಗೆ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ತೆಗೆದುಕೊಳ್ಳಬಹುದಾದ ಪರಿಸರ ಸ್ನೇಹಿ ಕ್ರಮಗಳ ಬಗೆಗೂ ಸಂಸ್ಥೆ ಕ್ರಮ ಕೈಗೊಂಡಿದೆ.
ಪ್ಲಾಸ್ಟಿಕ್ ಸೆಕ್ಯೂರಿಟಿ ಚೀಲಗಳಿಗೆ ಬದಲಾಗಿ ಮಹಾರಾಷ್ಟ್ರದಲ್ಲಿ ಕಾಗದದಿಂದಲೇ ತಯಾರಿಸಲಾದ ಸೆಕ್ಯೂರಿಟಿ ಎನ್ವಲಪ್ಗಳನ್ನು ಬಳಕೆ ಮಾಡಲಾಗುತ್ತಿದೆ. ಜೊತೆಗೆ ಪರಿಸರಕ್ಕೆ ಅಡ್ಡ ಪರಿಣಾಮ ಬೀರದ ಪೇಪರ್ ಶ್ರೆಡ್ಸ್, ಪೇಪರ್ ಬ್ಯಾಗ್ಗಳ ಬಳಕೆಯತ್ತಲೂ ಸಂಸ್ಥೆ ತನ್ನ ಆಸಕ್ತಿಯನ್ನು ಹೊರಳಿಸಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಇನ್ನಿತರ ಪರಿಸರ ಸ್ನೇಹಿ ಸಂಸ್ಥೆಗಳ ಜೊತೆಗೂ ನಿರಂತರ ಸಂಪರ್ಕ ಸಾಧಿಸಿ, ಪೂರಕ ಕ್ರಮಗಳನ್ನು ಕೈಗೊಳ್ಳುವತ್ತಲೂ ಕೆಲಸ ಮಾಡುತ್ತಿದೆ. ಜೊತೆಗೆ ಈ ಮಾದರಿಗಳನ್ನು ಅನುಸರಿಸುವಂತೆ ಇತರರಿಗೂ ಮಾರ್ಗದರ್ಶನವನ್ನು ತಾನನುಸರಿಸುವ ಕ್ರಮಗಳ ಮೂಲಕವೇ ಮಾಡುತ್ತಿದೆ.
ಇನ್ನು ಪ್ಲಾಸ್ಟಿಕ್ ಉತ್ಪನ್ನಗಳಿಂದ ಕಡಿಮೆ ಖರ್ಚಿನಲ್ಲಿ, ಅತ್ಯುತ್ತಮ ಪೇಪರ್ ಪ್ಯಾಕಿಂಗ್ ಸಿಸ್ಟಂ ಸಾಧ್ಯವಾಗುತ್ತಿದ್ದು, ಈ ವಿಚಾರವನ್ನು ಸಮಾಜಕ್ಕೆ ತಿಳಿಸಿಕೊಡುವ ಎಲ್ಲಾ ಕೆಲಸವನ್ನು ಫ್ಲಿಪ್ಕಾರ್ಟ್ ಮಾಡುತ್ತಿದೆ. ಈ ಕ್ರಮ ಭವಿಷ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಪರಿಸರ ಸ್ನೇಹಿಯಾಗಿಯೂ ಕಾರ್ಯ ನಿರ್ವಹಿಸಲಿದೆ ಎಂಬ ಸಂಸ್ಥೆ ಭರವಸೆಯನ್ನೂ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.