ನವದೆಹಲಿ: ಈಗಾಗಲೇ ಆಪಲ್ ಮತ್ತು ಲಾವಾ ಕಂಪನಿಗಳು ಚೀನಾದಿಂದ ಭಾರತಕ್ಕೆ ತಮ್ಮ ವಹಿವಾಟುಗಳನ್ನು ಸ್ಥಳಾಂತರ ಮಾಡಲು ಸಜ್ಜಾದ ಬೆನ್ನಲ್ಲೇ, ವಾನ್ ವೆಲ್ಸ್ (Von Wellx) ಎಂಬ ಜರ್ಮನ್ ಮೂಲದ ಪಾದರಕ್ಷೆ ತಯಾರಕ ಕಂಪನಿಯೂ ಭಾರತದತ್ತ ಚಿತ್ತ ಹೊರಳಿಸಿದೆ. ಉತ್ತರ ಭಾರತದ ಆಗ್ರಾ ದಲ್ಲಿ ತನ್ನ ಸಂಸ್ಥೆ ಸ್ಥಾಪಿಸುವ ಸಲುವಾಗಿ ಲ್ಯಾಟ್ರಿಕ್ ಇಂಡಸ್ಟ್ರೀಸ್ನ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿರುವ ಬಗ್ಗೆಯೂ ಮಾಲೀಕ Casa everz Ghmb ಮಾಹಿತಿ ನೀಡಿದ್ದಾರೆ.
ಪ್ರಪಂಚದ ಸುಮಾರು 80 ರಾಷ್ಟ್ರಗಳಲ್ಲಿ ಈ ಬ್ರ್ಯಾಂಡ್ ಮಾರಾಟವಾಗುತ್ತಿದೆ. 2019 ರಲ್ಲಿ ಬಿಡುಗಡೆಗೊಂಡ ಈ ಬ್ರ್ಯಾಂಡ್ ಅನ್ನು ನೂರು ಕೋಟಿ ಜನರು ಬಳಕೆ ಮಾಡುತ್ತಿದ್ದಾರೆ. ಇದು ಕಾಲು ನೋವು, ಬೆನ್ನುನೋವು ಮೊದಲಾದ ರೋಗಗಳ ಶಮನವನ್ನೂ ಮಾಡುವುದಾಗಿ ಸಂಸ್ಥೆ ಮಾಹಿತಿ ನೀಡಿದೆ. ವಿಶ್ವದೆಲ್ಲೆಡೆ 500 ರಿಟೈಲ್ ಸ್ಟೋರ್ ಜೊತೆಗೆ ಆನ್ಲೈನ್ ಮಾರಾಟದ ವ್ಯವಸ್ಥೆಯನ್ನೂ ಮಾಡಿದ್ದು, ಆ ಮೂಲಕ ಗ್ರಾಹಕ ಸ್ನೇಹಿಯಾಗಿದೆ ಎಂದು ಎವರ್ಜ್ ಹೇಳಿದ್ದಾರೆ.
ಒಟ್ಟಿನಲ್ಲಿ ಕೊರೋನಾ ಮಹಾಮಾರಿಯನ್ನು ಪ್ರಪಂಚಕ್ಕೆ ಪರಿಚಯಿಸಿ, ಜಗತ್ತಿನ ಎಲ್ಲ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಸದ್ಯ ಒಂದರ ಮೇಲೊಂದು ಹೊಡೆತವನ್ನು ತಿನ್ನುತ್ತಲೇ ಇದೆ. ಆ ಮೂಲಕ ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ ಚೀನಾದ ಪ್ರಸ್ತುತ ಸ್ಥಿತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.