ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಭಾರತ ಬಲಪಡಿಸುತ್ತಿದೆ. ಪ್ರಸ್ತುತ ಭಾರತದ ದೈನಂದಿನ ಕೊರೋನಾ ಪರೀಕ್ಷಾ ಸಾಮರ್ಥ್ಯ ಒಂದು ಲಕ್ಷವನ್ನು ತಲುಪಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅವರು ಈ ಬೆಳವಣಿಗೆಯನ್ನು ಬಹಿರಂಗಗೊಳಿಸಿದ್ದು, ದೇಶದಲ್ಲಿ ಒಟ್ಟು ಇರುವ ಕೊರೋನಾ ಪರೀಕ್ಷಾ ಲ್ಯಾಬೋರೇಟರಿಗಳ ಅಂಕಿ-ಅಂಶಗಳನ್ನು ನೀಡಿದ್ದಾರೆ. ದೇಶದಲ್ಲಿ 347 ಸರ್ಕಾರಿ ಕೊರೋನಾ ಪರೀಕ್ಷಾ ಲ್ಯಾಬೋರೇಟರಿಗಳಿವೆ. 137 ಖಾಸಗಿ ಖಾಸಗಿ ಲ್ಯಾಬೋರೇಟರಿ ಗಳು ಇವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಇದುವರೆಗೆ ಸುಮಾರು 20 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ ಭಾರತದಲ್ಲಿ ಸಾಂಕ್ರಾಮಿಕ ರೋಗವು ದುಪ್ಪಟ್ಟುಗೊಳ್ಳುವಿಕೆ ದರ 10.9 ದಿನಗಳಾಗಿವೆ. ಕಳೆದ ಮೂರು ದಿನಗಳಲ್ಲಿ ಇದು ಇನ್ನಷ್ಟು ಸುಧಾರಣೆಯನ್ನು ಕಂಡಿದ್ದು ದುಪ್ಪಟ್ಟುಗೊಳ್ಳುವಿಕೆ ದರ 12.2 ದಿನಗಳಾಗಿವೆ. ಜಾಗತಿಕ ಮರಣ ಪ್ರಮಾಣವು 7-7.5% ಆಗಿದ್ದರೆ ಭಾರತದಲ್ಲಿ ಇದು 3.2% ಆಗಿದೆ. ಪ್ರಸ್ತುತ ಚೇತರಿಕೆ ಪ್ರಮಾಣವು 31.71% ಆಗಿದೆ.
ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ, ರಾಜ್ಯಗಳಿಗೆ ತೀವ್ರ ರೋಗ ಲಕ್ಷಣಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.