ನವದೆಹಲಿ: 1993ರ ಸರಣಿ ಬಾಂಬ್ ಸ್ಫೋಟ ನಡೆಸಿ ನೂರಾರು ಜನರ ಜೀವ ತೆಗೆದ ಉಗ್ರ ಯಾಕೂಬ್ ಮೆಮೋನ್ಗೆ ಈಗ ಜೀವದ ಬೆಲೆ ಏನು ಎಂಬುದು ಅರ್ಥವಾಗಿದೆ. ಜುಲೈ 30ರಂದು ನೇಣಿಗೆ ಕೊರಳೊಡ್ಡಬೇಕಾಗಿರುವ ಆತ ಇದೀಗ ತನಗೆ ಜೀವದಾನ ಕೊಡಿ ಎಂದು ಮತ್ತೊಮ್ಮೆ ಸುಪ್ರೀಂ ಮೊರೆ ಹೋಗಿದ್ದಾನೆ.
ನನಗೆ ಮರಣದಂಡನೆ ನೀಡಿರುವುದು ಕಾನೂನಾತ್ಮಕವಾಗಿ ತಪ್ಪು, ನ್ಯಾಯಾಲಯ ಮೊದಲೇ ಶಿಕ್ಷೆಯನ್ನು ನಿರ್ಧಾರ ಮಾಡಿದಂತಿದೆ. ಕಾನೂನಿನ ತತ್ವಗಳನ್ನು ಪಾಲಿಸದೆ ನನಗೆ ಮರಣದಂಡನೆ ನೀಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಆತ ಹೇಳಿದ್ದಾನೆ.
ಮರಣದಂಡನೆಯನ್ನು ರದ್ದುಗೊಳಿಸುವಂತೆ ಈತ ಸಲ್ಲಿಸಿದ್ದ ಅರ್ಜಿಯನ್ನು ಎರಡು ದಿನಗಳ ಹಿಂದೆಯಷ್ಟೇ ಸುಪ್ರೀಂ ವಜಾ ಮಾಡಿತ್ತು. ಇದೀಗ ಮತ್ತೊಮ್ಮೆ ಆತ ಸುಪ್ರೀಂಗೆ ಮನವಿ ಮಾಡಿದ್ದಾನೆ.
ಈತ ನಡೆಸಿದ ಸ್ಫೋಟದಿಂದಾಗಿ 260 ಜನರು ಬಲಿಯಾಗಿದ್ದರು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆಗ ಈತನಿಗೆ ಜೀವದ ಬೆಲೆ ಏನು ಎಂದು ತಿಳಿದಿರಲಿಲ್ಲ. ಇದೀಗ ಕುತ್ತಿಗೆಗೆ ನೇಣು ಕುಣಿಕೆ ಬೀಳುವುದು ಖಚಿತವಾದಾಗ ಈತನಿಗೆ ಜೀವದ ಬೆಲೆ ಏನು ಎಂಬುದು ತಿಳಿಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.