ನಿನ್ನೆ ಬೆಳಗ್ಗೆಯಷ್ಟೇ ಅಂದರೆ 11.05.2020 ರ ಬೆಳಗ್ಗೆ 12 ರ ಆಸುಪಾಸಿನಲ್ಲಿ, ಆರ್ಎಸ್ಎಸ್ ನೀರು ಮಾರಿ ದುಡ್ಡು ಮಾಡುತ್ತಿದೆ ಎಂದು ಒಬ್ಬಾಕೆ ಎರಡು ಫೋಟೋ ಜೊತೆಗೆ ಟ್ವೀಟ್ ಮಾಡುತ್ತಾಳೆ. ಅರೇ ಇದೇನಿದು ಎಂದು ಕಣ್ಣಾಡಿಸಿದೆ, ಆ ಖಾತೆಯ ಹೆಸರು #WithRG ಎಂಬ ಹೆಸರಿನಲ್ಲಿ ಕೊನೆಯಾಗಿತ್ತು. ಗಾಂಧಿ ಎಂಬ ಹೆಸರಿನಲ್ಲೇ ಪೂರ್ವಾಗ್ರಹವಿರುವಾಗ ಈಕೆಯದೇನೂ ಮಹಾಪರಾಧವಲ್ಲ ಎಂದು ಅನಿಸಿತು. ಆದರೆ ಆ ಪೂರ್ವಾಗ್ರಹ ಜಗತ್ತಿನ ಅತೀ ಬಲಿಷ್ಠ, ಬಲಾಢ್ಯ ಮತ್ತು ದೊಡ್ಡ ಸಂಘಟನೆಯೊಂದಕ್ಕೆ ಸುಳ್ಳು ಸುದ್ದಿಯ ಮೂಲಕ ಮಸಿ ಬಳಿಯುವಷ್ಟು ಇರಬಾರದಿತ್ತು. ಆದರೇನು ಮಾಡುವುದು ಅವರ ಮನಸ್ಥಿತಿಯನ್ನು ಮಾರ್ಕೆಟಿಂಗ್ ಮಾಡಲು ಹೊರಟಿದ್ದಾರೆ.
Sanghi chaddis are selling drinking water at exorbitant rates at railway stations to make fast bucks. Shame on these sanghi leeches who posses zero humanity and ethics. #BanRSS #BanRSSHindutvaTerrorists pic.twitter.com/qsQdta1TIe
— Dr. Loneranger INC 🌐 #WithRG (@Loneranger9new) May 11, 2020
ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಜಗತ್ತು ಹೋರಾಡುತ್ತಿದೆ. ಭಾರತವಂತೂ ಸೆಟೆದು ನಿಂತಿದೆ. ಭಾರತಕ್ಕೆ ಬೆನ್ನಲುಬಾಗಿ ಅನೇಕಾನೇಕ ಸಾಮಾಜಿಕ, ಧಾರ್ಮಿಕ, ರಾಜಕೀಯ, ವೈಯಕ್ತಿಕ ಸಂಘಟನೆಗಳು ಸಹಕರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯ ಮನವಿಯಂತೆ ದೇಶದಲ್ಲಿ ಹಸಿವು ನೀಗಿಸುವ ಯಾಗವೇ ನಡೆಯುತ್ತಿದೆ. ಬಡವರ ಬಲ್ಲಿದರ ಉದರವನ್ನು, ಬದುಕನ್ನು ತಣಿಸುತ್ತಿರುವ ಆದ್ಯ ಸಂಘಟನೆಗಳಲ್ಲಿ ಸಂಘ ಮುಂಚೂಣಿಯಲ್ಲಿದೆ, ಅಂದರೆ ಆರ್ಎಸ್ಎಸ್ ಅಗ್ರಪಂಕ್ತಿಯಲ್ಲಿ ನಿಂತು ಸೇವೆ ಮಾಡುತ್ತಿದೆ, ಆದರೆ ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ ಎಂಬಂತೆ ಕೆಲವರು ಆಡುತ್ತಿದ್ದಾರೆ
ನೀವು ನೀರು ಕೊಡುವುದಿಲ್ಲ ಎಂದಾಗ ನೀರು ಹೊತ್ತು ತಂದದ್ದು ಸೇವಾ ಭಾರತಿ, ನೆನಪಿರಲಿ!
ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಸಂಘದ ಕಾರ್ಯಕರ್ತರು ನೀರು ಮಾರಿ ದುಡ್ಡು ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಿಯ ಬಿಡುವ ಮುನ್ನ ಸಾವಿರ ಬಾರಿ ಯೋಚಿಸಬೇಕಿತ್ತು. ಆದರೆ ನಿಮ್ಮದು ಪೂರ್ವಾಗ್ರಹ ಪೀಡಿತ ಮನಸ್ಥಿತಿಯಲ್ಲವೇ, ಎಲ್ಲವೂ ಕಿವುಡು,ಅಂಧ ಭಕ್ತಿ. ರಾಹುಲ್ ಗಾಂಧಿಯನ್ನು ಮೆಚ್ಚಿಸಲೋಸುಗ ಸಂಘದ ಸೇವೆಯನ್ನು ತುಚ್ಛವಾಗಿಸಿದಿರಲ್ಲ, ಏನು ಹೇಳಬೇಕು ನಿಮಗೆ. ಕೇರಳದ ಕಾಲನಿಯೊಂದರ ದಲಿತರು ಸಿಎಎ ಬೆಂಬಲಿಸಿದರು ಎಂಬ ಒಂದೇ ಕಾರಣಕ್ಕೆ ನೀರು ಸರಬರಾಜು ನಿಲ್ಲಿಸಿದಾಗ, ಅಲ್ಲಿನ ದಲಿತ ಕಾಲನಿಗಳಿಗೆ ನೀರು ಹೊತ್ತೊಯ್ದದ್ದು ಸಂಘದ ಅಂಗ ಸಂಸ್ಥೆ ಸೇವಾಭಾರತಿ. ಇದೊಂದು ಸಣ್ಣ ಉದಾಹರಣೆಯಷ್ಟೇ. ಇಂತಹ ಸಾವಿರಾರು ಉದಾಹರಣೆಗಳು ಸಂಘದ ಹೆಸರಿನಲ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅಂತಹ ಸಂಘ ಕೂಡಾ ನೀರು ಮಾರುತ್ತಿದೆ ಎನ್ನುವ ನಿಮ್ಮ ಮನಸ್ಥಿತಿ ಇದೆಯಲ್ವಾ ಅದನ್ನು ಯಾವುದಕ್ಕೂ ಹೋಲಿಸಿದರೂ ಕಡಿಮೆಯೇ.
ದೇಶವಿಂದು ಕಷ್ಟಕಾಲದಲ್ಲಿದೆ. ಸರ್ಕಾರದ ಜೊತೆಯಾಗಿ ನಾವು ನಿಲ್ಲಬೇಕಿದೆ. ಸರ್ಕಾರಗಳು ಮಾಡಬೇಕಾದ ಕೆಲಸ ಕಾರ್ಯಗಳನ್ನು ಸಂಘ ಮಾಡುತ್ತಿದೆ. ಸಾಧ್ಯವಾದರೆ ಸಂಘದ ಜೊತೆ ಕೈ ಜೋಡಿಸಿ, ಸಂಘದ ಸೇವೆಯನ್ನು ಪ್ರಚಾರ ಮಾಡದಿದ್ದರೂ ಪರವಾಗಿಲ್ಲ ಸುಳ್ಳು ಸುದ್ದಿ ಹಬ್ಬಿಸುವಂತಹ ಹೀನ ಕಾರ್ಯಕ್ಕೆ ಇಳಿಯುವುದು ತರವಲ್ಲ.
✍️ ಸುಜಿತ್ ರಾಜ್ ಮೀನಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.