ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲ್ ಫಾರೆಸ್ಟ್ ಚೆಕ್ ಪೋಸ್ಟ್ನಲ್ಲಿ ಏಪ್ರಿಲ್ 16 ರ ರಾತ್ರಿ ಜೂನಾ ಅಖಾಡಾಕ್ಕೆ ಸೇರಿದ ಇಬ್ಬರು ಸಾಧುಗಳ ಹಾಗೂ ಅವರ ಚಾಲಕನ ಘೋರ ಹತ್ಯೆ ನಡೆದು ಹದಿನೈದು ದಿನಗಳು ಕಳೆದರೂ ಕೂಡ ಈ ಪ್ರಕರಣದ ಹಿಂದಿನ ರಹಸ್ಯೆಯನ್ನು ಭೇದಿಸುವಲ್ಲಿ ಯಾವುದೇ ಪ್ರಗತಿ ಕಾಣಿಸುತ್ತಿಲ್ಲ. ಇಡೀ ದೇಶ ಕೊರೋನಾ ಸಾಂಕ್ರಾಮಿಕದ ಸೆಳತಕ್ಕೆ ಸಿಲುಕಿರುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬರುವುದಕ್ಕೆ ಮೂರು ದಿನಗಳು ಬೇಕಾದವು.
ಪೊಲೀಸ್ ಎಫ್ಐಆರ್ ಪ್ರಕಾರ ಇಬ್ಬರು ಸಾಧುಗಳಾದ – ಚಿಕಾನೆ ಮಹಾರಾಜ್ ಕಲ್ಪವೃಕ್ಷಗಿರಿ (70) ಮತ್ತು ಸುಶೀಲ್ ಗಿರಿ ಮಹಾರಾಜ್ (35), ಮತ್ತು ಅವರ ಚಾಲಕ ನಿಲೇಶ್ ತೆಲ್ಗಡೆ (30) ಅವರನ್ನು ಗ್ರಾಮದ ಕೆಲ ನಾಯಕರ ಚಿತಾವಣೆಯಿಂದಾಗಿ ಸೇರಿದ 400 ರಿಂದ 500 ಜನರ ಅನಿಯಂತ್ರಿತ ಗುಂಪೊಂದು ಅತ್ಯಂತ ಹಿಂಸಾತ್ಮಕವಾಗಿ ನಿರ್ದಾಕ್ಷಿಣ್ಯವಾಗಿ ಮತ್ತು ಕ್ರೂರವಾಗಿ ಕೊಲ್ಲಲ್ಪಟ್ಟಿದ್ದಾರೆ.
ಹತ್ಯೆಗೊಳಗಾದವರನ್ನು “ಮಕ್ಕಳ ಕಳ್ಳರು”, “ದರೋಡೆಕೋರರು” ಎಂದು ಗ್ರಾಮಸ್ಥರು ತಿಳಿದಿದ್ದರು. ಇದೊಂದು ತಪ್ಪು ತಿಳುವಳಿಕೆಯಿಂದಾದ ಘಟನೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ ಠಾಕ್ರೆ ಹಾಗೂ ಗೃಹ ಸಚಿವ ಅನಿಲ್ ದೇಶಮುಖ್ ಪ್ರಾರಂಭದಿಂದ ಹೇಳುತ್ತ ಬಂದರು. ಈ ಘಟನೆಗೆ ಮತೀಯ ಬಣ್ಣ ನೀಡಬಾರದು ಎಂದು ಮುಖ್ಯಮಂತ್ರಿ ಠಾಕ್ರೆ ಮನವಿ ಮಾಡಿದರೆ ಎನ್.ಸಿ.ಪಿ. ಪಕ್ಷಕ್ಕೆ ಸೇರಿದ ಗೃಹ ಮಂತ್ರಿಯವರು ಬಂಧಿತ ಆರೋಪಿಗಳ ಪಟ್ಟಿ ಬಿಡುಗಡೆಗೊಳಿಸುತ್ತ, ಇದರಲ್ಲಿ ಯಾರೂ ಮುಸಲ್ಮಾನರಿಲ್ಲ ಎಂದು ಹೇಳುವ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಂಡರು.
ಆದರೆ ದಾಖಾಲಾಗಿರುವ ಎಫ್.ಐ. ಆರ್.ನಲ್ಲಿ , ಈ ಘಟನೆಗೆ ಷಡ್ಯಂತ್ರದ ಹಿನ್ನೆಲೆಯ ಬಗ್ಗೆ ಪ್ರಸ್ತಾಪ ಆಗಿದೆ. ಇದು ಮುಖ್ಯಮಂತ್ರಿಗಳ ಹಾಗೂ ಗೃಹ ಮಂತ್ರಿಗಳ ಹೇಳಿಕೆಗಳನ್ನು ಬಟಾಬಯಲುಗೊಳಿಸಿದೆ.
ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ಆನಂದರಾವ್ ಕಾಳೆ ದಾಖಲಿಸಿರುವ ಎಫ್.ಐ.ಆರ್. ಪ್ರಕಾರ (0077 dated 18/04/2020) ಐವರು ಮುಖ್ಯ ಆರೋಪಿಗಳಾದ ಜೈರಾಮ್ ಭಾವರ್ (25), ಮಹೇಶ ರಾವಟೇ (19) ಗಣೇಶ ದೇವಾಜೀರಾವ್ (31) ರಾಮದಾಸ ರೂಪಾಜೀ ಆಸರೇ (27) ಸುನಿಲ್ ಸೋಮಾಜೀ ರಾವಟೇ ಹಾಗೂ ಯುವಕರು ಹಾಗೂ ವಯಸ್ಕರು ಇದ್ದ 400-500 ಜನ ಇತರರ ಗುಂಪು ಸಾಧುಗಳ ಮೇಲೆ ದಾಳಿ ಮಾಡಿ ಅವರನ್ನು ಸ್ಥಳದಲ್ಲಿಯೇ ಹತ್ಯೆ ಮಾಡಿತು ಎಂದು ತಿಳಿಸಿದೆ.
ಆದರೆ ಏಪ್ರಿಲ್ 17 ರಂದು ರಾತ್ರೆ ದಾಖಲಿಸಲಾಗಿರುವ ದೂರಿನ ಪ್ರಕಾರ ಪೊಲೀಸರು ಈ ಐವರು ಪ್ರಮುಖ ಆರೋಪಿಗಳ ಜೊತೆಗೆ ಸುಮಾರು 101 ಜನರನ್ನು ಬಂಧಿಸಲಾಯಿತು. ಪೊಲೀಸ ಅಧಿಕಾರಿ ಆನಂದರಾವ್ ಕಾಳೆ ದಾಖಲಿಸಿರುವ ಎಫ್.ಐ.ಆರ್.ನ ಮಾಹಿತಿ ನೀಡಿ ಕಾನೂನುಬಾಹೀರವಾಗಿ ಸಶಸ್ತ್ರ ಸಮೂಹವೊಂದು ಷಡ್ಯಂತ್ರದ ಭಾಗವಾಗಿ ಸೇರಿತ್ತು ಎಂಬುದನ್ನು ತಿಳಿಸಿದೆ. ಆರೋಪಿತರು ಮತ್ತು ಸೇರಿದ ಸಶಸ್ತ್ರ ಜನಸಮೂಹ ಬಡಿಗೆ, ಕಲ್ಲು, ಕೊಡ್ಲಿ ಮುಂತಾದವುಗಳಿಂದ ಸಾಧುಗಳ ಮೇಲೆ ದಾಳಿ ಮಾಡಿತು ಎಂದು ಹೇಳಿದೆ.
ಈ ಆಕ್ರೋಶಿತ ಜನಸಮೂಹವು ಸಾಧುಗಳು ಪ್ರಯಾಣಿಸುತ್ತಿದ್ದ ಮಾರುತಿ ಇಕೋ ವಾಹನವನ್ನು ತಲೆಕೆಳಗಾಗಿಸಿ ಅದರಲ್ಲಿನ ಪ್ರಯಾಣಿಕರನ್ನು ಹೊರಗೆಳೆದು, ಅವರನ್ನು ಕಳ್ಳರು ಎಂದು ಗುಮಾನಿಯ ಮೇರೆಗೆ ಹೊಡೆಯಲು ಪ್ರಾರಂಭಿಸಿತು. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ 40 ಕಿಮಿ ದೂರದಲ್ಲಿರುವ ಕಾಸಾ ಪೊಲೀಸ್ ಠಾಣೆಯ ಅಧಿಕಾರಿ ಕಾಳೆ ಹಾಗೂ ಇತರ ಸಿಬ್ಬಂದಿ ತಮ್ಮ ಸರಕಾರಿ ವಾಹನದಲ್ಲಿ ಘಟನಾ ಸ್ಥಳಕ್ಕೆ ರಾತ್ರಿ ಸುಮಾರು 11.10 ಕ್ಕೆ ತಲುಪಿದರು.
ಪೊಲೀಸರು ತಕ್ಷಣವೇ ಮೂವರಲ್ಲಿ ಇಬ್ಬರನ್ನು ಜನರ ದಾಳಿಯಿಂದ ರಕ್ಷಿಸಲು ಸರಕಾರಿ ವಾಹನದಲ್ಲಿರಿಸುವಷ್ಟರಲ್ಲಿ ಆಕ್ರೋಶಿತ ಜನಸಮೂಹ ಮೂರನೇ ವ್ಯಕ್ತಿಯ ಮೇಲೆ ದಾಳಿ ಮಾಡಿತು ಹಾಗೂ ವಾಹನದಲ್ಲಿದ್ದ ಇಬ್ಬರನ್ನು ಎಳೆದು ತಂದು ಅವರ ತಲೆ ಮತ್ತು ಶರೀರದ ಇತರ ಭಾಗಗಲ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತ ಅವರನ್ನು ಕೊಂದು ಹಾಕಿತು. ಪೊಲೀಸ ಅಧಿಕಾರಿಯಾದ ಆನಂದರಾಮ್ ಕಾಳೆ ಅರೋಪಿ ಜೈರಾಮ್ ಭಾವರ್ ಹಾಗೂ ಇತರ ನಾಲ್ವರು ಆರೋಪಿಗಳನ್ನು ಗುರುತಿಸಿದ್ದರಿಂದ ಅವರ ಹೆಸರುಗಳನ್ನು ಎಫ್.ಐ.ಆರ್.ನಲ್ಲಿ ದಾಖಲಿಸಿ ಜನರನ್ನು ಪ್ರಚೋಧಿಸುವ ಮೂಲಕ ಸಾಧುಗಳ ಹತ್ಯೆಯ ಷಡ್ಯಂತ್ರ ಮಾಡಿದರು ಎಂದು ದಾಖಲಿಸಿದ್ದಾರೆ. ಇದಲ್ಲದೆ ಸುಮಾರು 101 ಜನರನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಿದ್ದಾರೆ.
ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂಬ ಮನವಿಯನ್ನು ಪುರಸ್ಕರಿಸಿದ ಧಹಾನು ಜೆ.ಎಂ.ಎಫ್.ಸಿ. ನ್ಯಾಯಾಲಯ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಎಲ್ಲರ ಪಾತ್ರದ ಬಗ್ಗೆ ಕುಲಂಕುಷವಾಗಿ ತನಿಖೆಯಾಗಬೇಕು ಹಾಗೂ ಆರೋಪಿಗಳ ಸಂಖ್ಯೆ ಹೆಚ್ಚಿರುವುದರಿಂದ ತನಿಖೆಯ ವ್ಯಾಪ್ತಿಯು ಅಗಾಧವಾಗಿದೆ. ಹೀಗಾಗಿ ತನಿಖಾಧಿಕಾರಿಗಳಿಗೆ ತನಿಖೆಗಾಗಿ ಸೂಕ್ತ ಕಾಲಾವಕಾಶ ಸಿಗಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಸಂದರ್ಭದಲ್ಲಿ ಸತ್ಯ ಹೊರಬರುವಂತಾಗಲು ಕೆಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಘಟನೆ ನಡೆದು ಎರಡು ದಿನಗಳ ವಿಳಂಬದ ನಂತರ ಎಫ್.ಐ.ಆರ್. ದಾಖಲಾಗಿದೆ. ಇದರ ಹಿಂದಿನ ಉದ್ದೇಶವೇನು? ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಯಿತೇ?
ಎಫ್.ಐ.ಆರ್. ಈ ಘಟನೆಯ ಹಿನ್ನೆಲೆಯಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ಹೇಳುತ್ತದೆ. ಪರಸ್ಪರ ಸಹಭಾಗಿತ್ವ ಹಾಗೂ ಕ್ರಿಮಿನಲ್ ಪಿತೂರಿ ಮೂಲಕ ಈ ಪ್ರಕರಣ ನಡೆದಿದೆ ಎಂದು ಕೂಡ ಎಫ್.ಐ.ಆರ್. ಹೇಳುತ್ತದೆ. ಇದರ ಪ್ರಕಾರ ಮೊದಲು ನಂಬಿಸಲು ಯತ್ನಿಸಿದಂತೆ ಈ ಘಟನೆ ತಪ್ಪು ಕಲ್ಪನೆಯಿಂದ ನಡೆದದ್ದಲ್ಲ ಎಂದು ಗೊತ್ತಾಗುತ್ತದೆ. ಹಾಗಾದರೆ ಷಡ್ಯಂತ್ರ ರಚಿಸಿದವರಾರು? ಎಫ್.ಐ.ಆರ್ ಹೇಳುವಂತೆ ಪೊಲೀಸರು ಸ್ಥಳಕ್ಕೆ ಆಗಮಿಸದಂತೆ ಮಾರ್ಗದಲ್ಲಿ ಗಿಡಗಳನ್ನು ಕಡಿದು ಹಾಕಲಾಗಿತ್ತು. ಇದು ಮಾವೋವಾದಿಗಳು, ನಕ್ಸಲೈಟರು ಬಳಸುವ ವಿಧಾನ. ಈ ಪ್ರಕರಣದಲ್ಲಿ ಇವರ ಪಾತ್ರ, ಉಪಸ್ಥಿತಿ ಏನಾದರೂ ಇದೆಯಾ?
ಪ್ರಕರಣದ ಮೊದಲ ಆರೋಪಿ ಜೈರಾಮ್ ಭಾವರ್ ಸಿಪಿಐ ಪಕ್ಷದ ಹಾಲಿ ಗ್ರಾಮ ಪಂಚಾಯತ್ ಸದಸ್ಯ. ಇದು ಪ್ರಕರಣದಲ್ಲಿ ವಾಮಪಂಥೀಯರ ಕೈವಾಡದ ಬಗ್ಗೆಯೂ ಶಂಕೆ ಮೂಡಿಸುತ್ತದೆ. ಈ ಬಗ್ಗೆ ಕೂಡ ತನಿಖೆ ಆಗಬೇಕು. ಬಂಧಿತರಲ್ಲಿ ವಾಮಪಂಥೀಯ ವಿಚಾರಧಾರೆಗೆ ಸೇರಿದವರೆಷ್ಟು ಜನ ಇದ್ದಾರೆ ಎಂಬುದು ಕೂಡ ತನಿಖೆ ಆಗಬೇಕು.
ಪ್ರಕರಣದಲ್ಲಿ ಈ ಭಾಗದಲ್ಲಿ ಬಡವರ ಹಾಗು ವನವಾಸಿಗಳ ಸೇವೆಯ ಸೋಗಿನಲ್ಲಿ ಸಕ್ರಿಯವಾಗಿರುವ ಕ್ರೈಸ್ತ ಮಿಷನರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು. ಮುಗ್ಧ ಜನರಲ್ಲಿ ಹಿಂದು ಶಬ್ದ ಮತ್ತು ಕೇಸರಿ ಬಣ್ಣದ ಬಗ್ಗೆ ದ್ವೇಷದ ಬೀಜ ಬಿತ್ತಿರುವ ಇವರು ದ್ವೇಷ ಬಿತ್ತುವುದನ್ನು ಸಾಂಸ್ಥೀಕರಣಗೊಳಿಸಿದ್ದಾರೆ. ಇತ್ತೀಚಿಗೆ ಇವರು ಈ ವನವಾಸಿ ಪ್ರದೇಶದಲ್ಲಿ ಅಪರೋಕ್ಷವಾಗಿ ಮಾವೋವಾದಿಗಳ ಜೊತೆಗೆ ಕೈಜೋಡಿಸಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.
ಹೀಗಾಗಿ ಪಾಲ್ಘರ ಘಟನೆಯನ್ನು ಈ ಎಲ್ಲಾ ದೃಷ್ಠಿಕೋನದಲ್ಲೂ ತನಿಖೆ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.