ಉಡುಪಿ: ದೇಶದ ಯಾವುದೇ ಸಂಕಷ್ಟದ ಸಂದರ್ಭದಲ್ಲಿಯೂ ಕೈಜೋಡಿಸುವ ಆರ್ ಎಸ್ ಎಸ್, ಕೊರೋನಾದ ಕಠಿಣ ಪರಿಸ್ಥಿತಿಯಲ್ಲಿಯೂ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಉಡುಪಿಯಲ್ಲಿಯೂ ಸಂತ್ರಸ್ಥರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಮಲ್ಪೆಯಲ್ಲಿ ಸುಮಾರು 268 ಬಡ ಕುಟುಂಬಗಳಿಗೆ ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ.
ಕೂಲಿ ಕಾರ್ಮಿಕರು, ವಲಸಿಗರು, ಬಡವರು, ನಿರ್ಗತಿಕರು, ವೃದ್ಧರು ಮೊದಲಾದ ಅಶಕ್ತ ಕುಟುಂಬಗಳನ್ನು ಗುರುತಿಸಿ ಆಹಾರ ವಸ್ತುಗಳನ್ನು, ಔಷಧೀಯ ವಸ್ತುಗಳನ್ನು, 200 ರಷ್ಟು ಸ್ಯಾನಿಟೈಸರ್, 300 ಮಾಸ್ಕ್ ಗಳನ್ನು ವಿತರಿಸುವ ಮೂಲಕ ಸೇವೆ ನೀಡಿದೆ. ಜೊತೆಗೆ ಜನರಲ್ಲಿ ಸಾಮಾಜಿಕ ಅಂತರ, ನಿಯಂತ್ರಣ ಕ್ರಮಗಳ ಕುರಿತಾದಂತೆಯೂ ಜಾಗೃತಿ ಮೂಡಿಸುವ ಮೂಲಕ ಕೋವಿಡ್ನಿಂದ ಸಂರಕ್ಷಣೆ ಮಾಡಿಕೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.
ಜೊತೆಗೆ ಆರೋಗ್ಯ ಸೇವೆ, ಆರೋಗ್ಯ ಸೇತು ಆಪ್ ಗಳನ್ನು ಬಳಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜನರಲ್ಲಿ ತಿಳಿವಳಿಕೆ ಮೂಡಿಸಲಾಯಿತು. 28 ರೋಗಿಗಳನ್ನು ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೊತೆಗೆ ಅಶಕ್ತರ ಆಸ್ಪತ್ರೆಯ ಬಿಲ್ ಪಾವತಿಯನ್ನೂ ಮಾಡುವ ಮೂಲಕ ಆರ್ ಎಸ್ ಎಸ್ ಸ್ವಯಂಸೇವಕರು ಮಾನವೀಯತೆ ಮೆರೆದರು.
ಇನ್ನು ಸಮಾಜದ ಆರೋಗ್ಯ ರಕ್ಷಣೆ ಮಾಡುತ್ತಿರುವ ಪೊಲೀಸರಿಗೆ ತಂಪು ಪಾನೀಯ ವಿತರಣೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು. ಜೊತೆಗೆ ಕೊರೋನಾ ಸಂಕಷ್ಟ ಪರಿಹಾರಾರ್ಥ ಪ್ರಾರ್ಥನೆ ಸಲ್ಲಿಸುವಂತೆಯೂ ಮಲ್ಪೆ ಪರಿಸರದ 360 ಕ್ಕೂ ಹೆಚ್ಚು ಕುಟುಂಬಗಳಲ್ಲಿ ಸಂಘ ಮನವಿ ಮಾಡಿಕೊಂಡಿದೆ.
ದೇಶದ ಮೂಲೆ ಮೂಲೆಯಲ್ಲೀಯೂ ಕೊರೋನಾ ವಿರುದ್ಧ ಸಂಘ ಜನ ಸೇವೆಯಲ್ಲಿ ತೊಡಗಿಕೊಂಡಿದೆ. ಆ ಮೂಲಕ ರಾಷ್ಟ್ರ ಸೇವೆಗೆ ಸಂಘ ಸದಾ ಸಿದ್ಧ ಎಂಬುದನ್ನು ಮತ್ತೊಮ್ಮೆ ತನ್ನ ಕಾರ್ಯ ವೈಖರಿಯ ಮೂಲಕವೇ ಜಗತ್ತಿಗೆ ಸಾರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.