ಕೊರೋನಾ ಸೋಂಕು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆಯಾಗಿಸಿದೆ. ಭಾರತದ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಕೊಂಚ ಮುಂದಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎನ್ನಬಹುದು. ಈ ಬಗೆಗಿನ ಪ್ರಪಂಚದ ಎಲ್ಲಾ ರಾಷ್ಟ್ರಗಳ ದತ್ತಾಂಶವನ್ನು ನೋಡಿ ಲೆಕ್ಕ ಹಾಕುವ ಸಂದರ್ಭ ಇದಲ್ಲ. ಎಲ್ಲಾ ರಾಷ್ಟ್ರಗಳೂ ಒಗ್ಗಟ್ಟಿನಿಂದ ಈ ಮಾರಣಾಂತಿಕ ಸೋಂಕಿನ ವಿರುದ್ಧ ಹೋರಾಟ ಮಾಡಬೇಕಾದ ಸಂದರ್ಭ ಇದು.
ಇನ್ನು ಕೊರೋನಾ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಸಮಯಪ್ರಜ್ಞೆಯ ನಿಲುವುಗಳ ಕಾರಣದಿಂದಲೇ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾದ ಭಾರತ ಸೋಂಕು ನಿಯಂತ್ರಣ ವಿಚಾರದಲ್ಲಿ ಕೊಂಚ ಮಟ್ಟಿಗೆ ಗೆದ್ದಿದೆ ಎಂದೇ ಹೇಳಬಹುದು. ದೇಶದ ಎಲ್ಲಾ ಜನರು ಸರ್ಕಾರದ ಸಮಯೋಚಿಯೋಚಿತ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿದ ಪಕ್ಷದಲ್ಲಿ ಕೊರೋನಾ ವಿರುದ್ಧ ಹೋರಾಟದಲ್ಲಿ ನಾವು ಶೀಘ್ರ ನಿರೀಕ್ಷಿತ ಜಯ ಸಾಧಿಸುವುದು ಸಾಧ್ಯ.
ಇನ್ನು ಸೋಂಕು ನಿಯಂತ್ರಣ ವಿಚಾರದಲ್ಲಿ ಭಾರತ ವಿಶ್ವಕ್ಕೆ ಗುರುವಿನಂತಾಗಿ ಬಿಟ್ಟಿದೆ. ಔಷಧೀಯ ಸಾಮಗ್ರಿಗಳನ್ನು ವಿದೇಶಗಳಿಗೆ ರವಾನಿಸುವ ಮೂಲಕ ಭಾರತದ ಬಗ್ಗೆ ವಿಶ್ವವೇ ಸಕಾರಾತ್ಮಕವಾಗಿ ಮಾತನಾಡುವಂತಾಗಿದೆ. ನಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಮತ್ತು ದೇಹಿ ಎಂದ ದೇಶಗಳಿಗೂ ನೆರವು ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಇಂತಹ ತುರ್ತು ಪರಿಸ್ಥಿತಿಯಲ್ಲಿಯೂ ಪ್ರಧಾನಿ ಮೋದಿ ಪ್ರದರ್ಶಿಸುತ್ತಿರುವುದು ಭಾರತ ಮಾತೃ ಹೃದಯಿ ರಾಷ್ಟ್ರ ಎಂಬುದಕ್ಕೆ ಸಾಕ್ಷಿಯಾಗಿದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ ಇಂತಹ ಸಾಂಕ್ರಾಮಿಕ ಸಮಸ್ಯೆಯನ್ನು ಪರಿಣಾಮವಾಗಿ ಹತೋಟಿಯಲ್ಲಿಡಲು ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಅದರ ಸಂಪೂರ್ಣ ಕ್ರೆಡಿಟ್ ಮೋದಿ ಅವರಿಗೇ ಸಲ್ಲಬೇಕು. ಆರ್ಥಿಕತೆಗಿಂತ ದೇಶದ ಜನರ ಆರೋಗ್ಯ ಹೆಚ್ಚು ಮುಖ್ಯ ಎಂಬುದನ್ನರಿತ ನಮೋ ದೇಶವನ್ನೇ ಲಾಕ್ಡೌನ್ ಮಾಡುವ ಮೂಲಕ ಪರಿಸ್ಥಿತಿ ನಿಯಂತ್ರಣ ಕ್ಕೆ ಪ್ರಯತ್ನಿಸಿದ್ದೇ ಇದಕ್ಕೆ ಸಾಕ್ಷಿ. ಭಾರತದ ಈ ಕ್ರಮವನ್ನು ಗಮನಿಸಿದ ಇತರ ರಾಷ್ಟ್ರಗಳೂ ನಂತರದ ದಿನಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಿವೆ. ಆದರೆ ಪಾಕಿಸ್ಥಾನ ಮಾತ್ರ ಈ ಯಾವ ಕ್ರಮಗಳಲ್ಲಿಯೂ ಉತ್ಸಾಹ ತೋರದೆ ಸೋಂಕು ನಿಯಂತ್ರಣ ವಿಚಾರದಲ್ಲಿ ತನ್ನ ಹತೋಟಿ ಕಳೆದುಕೊಂಡಿದೆ.
ಕೊರೋನಾ ವಿಚಾರದಲ್ಲಿ ಕೇವಲ ಭಾರತದ ಬಗ್ಗೆ ಮಾತ್ರವೇ ಹೇಳುವುದಾದರೆ, ಭಿನ್ನ ವಿಭಿನ್ನ ಮನಸ್ಥಿತಿ ಇರುವ ಜನರನ್ನು ಒಗ್ಗೂಡಿಸಿ ಏಕರೀತಿಯ ನಿಯಮಗಳನ್ನು ಅನುಸರಿಸುವಂತೆ ಮಾಡುವುದು ಸುಲಭದ ಮಾತಲ್ಲ. ಆದರೂ ಈ ಸಾಧನೆಗೆ ಕೈ ಹಾಕಿದ ಮೋದಿ ಜನತಾ ಕರ್ಪ್ಯೂ, ಲಾಕ್ಡೌನ್ ನಿಯಮಗಳನ್ನು ಜಾರಿಗೆ ತರುತ್ತಾರೆ. ಜೊತೆಗೆ ಅನೇಕ ನಿಯಂತ್ರಣ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೂ ಆದೇಶ ನೀಡುತ್ತಾರೆ. ದೇಶದ 90% ಜನ ಪ್ರಧಾನಿ ಮಾತನ್ನು ಅಕ್ಷರಶಃ ಪಾಲನೆ ಮಾಡುತ್ತಾರೆ. ಆ ಮೂಲಕ ಸೋಂಕಿನಿಂದ ತಮ್ಮನ್ನು, ತಮ್ಮ ಕುಟುಂಬವನ್ನು ಜೊತೆಗೆ ಸಮಾಜವನ್ನು ರಕ್ಷಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಪರಿಣಾಮ ಭಾರತ ಕೋವಿಡ್ ಅನ್ನು ಸಮರ್ಪಕ ರೀತಿಯಲ್ಲಿ ನಿಭಾಯಿಸುವಲ್ಲಿ ಕೊಂಚ ಮಟ್ಟಿಗೆ ಸಫಲವಾಗಿದೆ. ಇನ್ನು ನಿಯಂತ್ರಣ ನೀತಿಗಳನ್ನು ಅನುಸರಿಸದ ಕೆಲವು ಜನರಿಂದ ಭಾರತದಲ್ಲಿ ಸೋಂಕು ಹರಡುವ ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಸಂದರ್ಭದಲ್ಲಿ ಸೋಂಕು ದೇಶದಲ್ಲಿ ಹೆಚ್ಚಾಗಲು ಕಾರಣ ಎಂದೇ ನಂಬಲಾಗಿರುವ ದೆಹಲಿಯ ನಿಜಾಮುದ್ದೀನ್ ಮರ್ಕಜ್ನ ತಬ್ಲಿಘಿ ಸಭೆಯ ಬಗ್ಗೆ ಹೇಳಲೇ ಬೇಕು. ಸೋಂಕು ನಿಯಂತ್ರಣ ಮಾಡಲು ದೆಹಲಿ ಸರಕಾರ ಸಭೆ ಮಾಡದಂತೆ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘನೆ ಮಾಡಿ ತಬ್ಲಿಘಿ ಸಭೆ ನಡೆಸಲಾಗುತ್ತದೆ. ದೇಶ ವಿದೇಶದ ಜನರು ಇದರಲ್ಲಿ ಭಾಗಿಗಳಾಗುತ್ತಾರೆ. ಸಭೆಯಲ್ಲಿ ಸುಮಾರು 1,500 ಜನರು ಸೋಂಕು ತಗುಲಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ದೇಶವ್ಯಾಪಿ ಸಂಚಾರ ನಡೆಸಿ ಸೋಂಕನ್ನು ಹರಡಿಸುತ್ತಾರೆ. ಸರ್ಕಾರ ತಪಾಸಣೆ ನಡೆಸಿಕೊಳ್ಳುವಂತೆ ತಿಳಿಸಿದರೂ ಕ್ಯಾರೇ ಅನ್ನದೆ ದೇಶವನ್ನು ಇನ್ನಷ್ಟು ಅಪಾಯಕಾರಿ ಸನ್ನಿವೇಶಕ್ಕೆ ದೂಡುವ ಕೆಲಸ ಮಾಡುತ್ತಾರೆ. ಕ್ವಾರಂಟೈನ್ಗೆ ಒಳಪಟ್ಟವರು ಆರೋಗ್ಯ ರಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಮೂತ್ರ ತುಂಬಿ ಬಾಟಲಿಗಳನ್ನು ಎಸೆಯುವುದು, ಎಲ್ಲೆಂದರಲ್ಲಿ ಉಗುಳುವುದು, ಪೊಲೀಸರ ಮೇಲೆ ಹಲ್ಲೆ ಮೊದಲಾದ ಪುಂಡಾಟಿಕೆಗಳನ್ನು ಮೆರೆಯುತ್ತಾರೆ. ಆ ಮೂಲಕ ಸೋಂಕು ಹರಡಲೇ ಬೇಕೆನ್ನುವ ಶಪಥ ಮಾಡಿಕೊಂಡವರಂತೆ ವರ್ತಿಸುತ್ತಾರೆ. ಇದನ್ನು ಸೋಂಕು ಹರಡುವ ಹುನ್ನಾರವಾಗಿಯೇ ಪರಿಗಣಿಸಬೇಕಾಗಿದೆ. ಇನ್ನು ತಬ್ಲಿಘಿಗಳ ತಪ್ಪಿಗೆ ಇಡೀ ಸಮುದಾಯವೇ ಇಂದು ಮಾತು ಕೇಳಬೇಕಾಗಿದೆ ಎಂಬುದು ದುರಂತ. ಯಾವ ಧರ್ಮದಲ್ಲಿಯೂ ಇಂತಹ ಹರಾಮಿ ಕೆಲಸಗಳನ್ನು ಮಾಡಿದರೆ ಸ್ವರ್ಗ ಸಿಗುವುದಾಗಿ ಇಲ್ಲ. ಯಾವ ಧರ್ಮವೂ ಇಂತಹ ಅನ್ಯಾಯಕ್ಕೆ ಬೆಂಬಲ ನೀಡುವುದಿಲ್ಲ. ಆದರೂ ಜನ ಮಾತ್ರ ದೇಶದ್ರೋಹದಿಂದ ಸ್ವರ್ಗ ಸಿಗುವ ನಂಬಿಕೆಯಲ್ಲೇ ಇನ್ನೂ ಇರುವುದು ಶೋಚನೀಯವೇ ಸರಿ.
ಈ ಘಟನೆ ಸೋಂಕು ಹೆಚ್ಚಾಗಲು ಒಂದು ಕಾರಣವಾದರೆ, ಇನ್ನೊಂದು ಕಡೆ ವಲಸೆ ಕಾರ್ಮಿಕರು ಗುಂಪು ಸೇರಿ ಮಾಡಿದ ಅವಾಂತರಗಳು, ಮುಂಬೈನಲ್ಲಿ ಲಾಕ್ಡೌನ್ ಮುರಿದು ಜನರು ತೋರಿದ ಬೇಜವಾಬ್ದಾರಿ ತನದ ಕಾರಣದಿಂದಲೂ ಸೋಂಕು ಮತ್ತಷ್ಟು ವ್ಯಾಪಿಸಿತು. ಕೆಲವು ಮಂದಿ ಬೇಕು ಬೇಕೆಂದೇ ನಿಯಂತ್ರಣ ನಿಯಮಗಳನ್ನು ಉಲ್ಲಂಘನೆ ಮಾಡಿ ಸೋಂಕು ಎಂಬ ಉರಿಯುವ ಬೆಂಕಿಗೆ ತುಪ್ಪ ಸುರಿದು ಮತ್ತಷ್ಟು ವ್ಯಾಪಿಸುವಂತೆ ಮಾಡಿದರು. ಸರ್ಕಾರಗಳು ಕಠಿಣ ಕ್ರಮ ಕೈಗೊಂಡರೂ ಕೆಲವು ಖದೀಮರು ಮಾತ್ರ ಸೋಂಕು ಹರಡುವುದರಲ್ಲೇ ಖುಷಿ ಕಾಣುತ್ತಿದ್ದಾರೆ ಎಂಬುದು ನಮ್ಮ ದುರಂತ.
ದೇಶದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಜಾರಿ ತಂದ ಕ್ರಮಗಳನ್ನು ಪಾಲಿಸದಿರುವುದರ ಜೊತೆಗೆ, ದೇಶದ ಹಲವು ರಾಜ್ಯಗಳಲ್ಲಿ ಆರೋಗ್ಯ ರಕ್ಷಕರು, ಪೊಲೀಸರು, ಆಶಾ ಕಾರ್ಯಕರ್ತರ ಮೇಲೆಯೂ ಹಲ್ಲೆಗಳು ನಡೆದವು. ಇವೆಲ್ಲವನ್ನೂ ಗಮನಿಸಿದರೆ ಯಾವುದೋ ಒಂದು ದುಷ್ಟ ಶಕ್ತಿ ಇಂತಹ ಕುಕೃತ್ಯಗಳಿಗೆ ಬೆಂಬಲ ಕೊಡುತ್ತಿದೆಯೇನೋ ಎಂದೆನಿಸಿದರೂ ಅದು ತಪ್ಪಲ್ಲ.
ಕೊರೋನಾ ಸಂದರ್ಭದಲ್ಲಿ ನಾವು ಸೋಂಕನ್ನು ಇನ್ನಿಲ್ಲದಂತೆ ಮಾಡುವುದು ಸುಲಭವೇನಲ್ಲ. ಆದರೆ ಅದಕ್ಕಾಗಿ ಪ್ರಯತ್ನ ಪಡುವ ಸರ್ಕಾರ, ಆರೋಗ್ಯ ರಕ್ಷಕ ಸಿಬ್ಬಂದಿಗಳಿಗೆ ಸಹಕಾರವನ್ನಾದರೂ ನೀಡುವುದು ಸಾಧ್ಯವಿದೆ. ಇದೂ ಒಂದು ರೀತಿಯ ದೇಶಸೇವೆಯೇ. ನಿಯಂತ್ರಣ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ದೇಶದ ಪ್ರಧಾನ ಸೇವಕನ ಜೊತೆ ಕೈ ಜೋಡಿಸಿದರೆ ಸಾಕು, ನಾವೂ ಈ ಮಹಾ ಕೈಂಕರ್ಯದಲ್ಲಿ ಭಾಗಿಗಳಾದಂತೆಯೇ. ಒಗ್ಗಟ್ಟಾಗಿ ಹೋರಾಡುವ ಇಚ್ಛಾಶಕ್ತಿ ಬೆಳೆಸಿಕೊಂಡರಷ್ಟೇ ನಮ್ಮನ್ನು, ನಮ್ಮ ಕುಟುಂಬ ಮತ್ತು ದೇಶವನ್ನು ಕಾಪಾಡಲು ಸಾಧ್ಯ. ಆಗ ಭಾರತೀಯ ಮಣ್ಣಿನ ಮಕ್ಕಳಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.