ಕೊರೋನಾ ಹಾವಳಿಯಿಂದ ದೇಶದೆಲ್ಲೆಡೆ ಬಡ ಜನರ ಜೀವನ ಕಂಗೆಟ್ಟಿದೆ. ಬೇಕಾದ ಆಹಾರ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವುದಕ್ಕೂ ಕಷ್ಟ ಪಡುವ ಜನರು ಅದೆಷ್ಟೋ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ. ರಾಜ್ಯದ ಜನರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಿರುವ ಬಡವರ ಹೊಟ್ಟೆ ತುಂಬಿಸುವ ಮಹತ್ಕಾರ್ಯದಲ್ಲಿ ಮೈಸೂರಿನ ಬಿಜೆಪಿ ನಾಯಕ ಎಚ್. ವಿ. ರಾಜೀವ್ ಮತ್ತವರ ತಂಡ ಕೆಲಸ ಮಾಡುತ್ತಿದೆ. ಲಾಕ್ಡೌನ್ ಮುಗಿಯುವಲ್ಲಿಯವರೆಗೂ ಜನಸೇವೆ ಮಾಡುವ , ಬಡವರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿರುವ ಇವರು ಆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ರಾಜೀವ್ ಅವರು ಮೈಸೂರು ಸಿಟಿ ಕಾರ್ಪೊರೇಷನ್ ಜೊತೆಗೆ ಕೈ ಜೋಡಿಸಿ ಪ್ರತಿನಿತ್ಯ ಸುಮಾರು 6000 ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಎಚ್. ವಿ. ಸ್ನೇಹ ಬಳಗವನ್ನು ಕಟ್ಟಿಕೊಂಡಿರುವ ಇವರ ಬೆಂಬಲಿಗರೂ ಸಹ ಇವರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಈ ಸ್ವಯಂಸೇವಕರು ತಾವೇ ಅಡುಗೆ ತಯಾರಿಸಿ ರಾತ್ರಿ ಹಗಲೆನ್ನದೆ ಲಾಕ್ಡೌನ್ ಕ್ರಮಗಳನ್ನು ಅನುಸರಿಸಿಕೊಂಡೇ ಆಹಾರ ವಸ್ತುಗಳನ್ನು ಅಗತ್ಯವಿದ್ದವರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಾರೆ. ಇದಕ್ಕಾಗಿ ಚಾಮುಂಡಿಪುರದ ಶಂಕರನಾರಾಯಣ ದೇಗುಲದ ಪಕ್ಕದಲ್ಲಿ ಬೃಹತ್ ಅಡುಗೆ ಮನೆಯನ್ನು ನಿರ್ಮಿಸಲಾಗಿದ್ದು, ಎಲ್ಲಾ ಸ್ವಚ್ಛತಾ ಕ್ರಮಗಳನ್ನು ಅನುಸರಿಸಿಕೊಂಡು ಇಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಸಮರ್ಥ ತ್ಯಾಜ್ಯ ವಿಲೇವಾರಿ ಘಟಕಗಳನ್ನೂ ರಾಜೀವ್ ಅವರು ಸ್ಥಾಪಿಸಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಮೈಸೂರು ಸಿಟಿ ಕಾರ್ಪೊರೇಶನ್ ವತಿಯಿಂದ ತೆರೆಯಲಾದ ನಿರ್ಗತಿಕರ ಪುನರ್ವಸತಿ ಕೇಂದ್ರಗಳಿಗೆ ರಾಜೀವ್ ತಂಡ ಆಹಾರ ಒದಗಿಸುವ ಕೆಲಸ ಮಾಡುತ್ತಿದೆ. ಇನ್ನು ಇವರ ಕಾರ್ಯವನ್ನು ಮೈಸೂರು ಜಿಲ್ಲೆಯ ಸಚಿವ ಎಸ್. ಟಿ. ಸೋಮಶೇಖರ್ ಅವರೂ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ರಾಜೀವ್ ತಂಡದ ಕೆಲಸವನ್ನು ನೋಡಿ ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ರಾಜೀವ್, ಈ ವರೆಗೆ ಪ್ರತಿನಿತ್ಯ 6000 ಜನರಿಗೆ ಆಹಾರ ತಯಾರಿಸಲಾಗುತ್ತಿದೆ. ಅವಶ್ಯಕತೆ ಇದ್ದರೆ ಇನ್ನೂ 3000 ಸಾವಿನ ಜನರಿಗೆ ಆಹಾರ ಸಿದ್ಧ ಮಾಡಿ ನೀಡುವ ಭರವಸೆಯನ್ನು ನೀಡಿದ್ದಾರೆ.
ಬಾಯಲ್ಲಿ ಸಮಾಜ ಸೇವೆ ಎಂದು ತಿರುಗಾಡುವವರ ನಡುವೆ, ರಾಜೀವ್ ಮತ್ತವರ ತಂಡದ ಈ ಸೇವೆ ನಿಜಕ್ಕೂ ಗ್ರೇಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.