ನವದೆಹಲಿ: ಅತ್ಯಂತ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ತನ್ನ ವಿಶೇಷವಾದ ಡೂಡಲ್ ಮೂಲಕ ಎಲ್ಲಾ ಕೊರೋನಾವೈರಸ್ ಯೋಧರಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆಗಳನ್ನು ಮಾಡುತ್ತಿರುವ ಕಾರ್ಯಕರ್ತರಿಗೆ ಗೌರವಾರ್ಪಣೆ ಮಾಡುವ ಸರಣಿಯನ್ನು ಗೂಗಲ್ ಆರಂಭಿಸಿದೆ.
ನಮ್ಮೆಲ್ಲರನ್ನು ಸಮುದಾಯವಾಗಿಡಲು ಅವಿರತವಾಗಿ ಪರಿಶ್ರಮ ಪಡುತ್ತಿರುವ ಜಗತ್ತಿನಾದ್ಯಂತದ ಕರೋನವೈರಸ್ ಸಹಾಯಕರಿಗೆ ಇಂದು ಗೂಗಲ್ ಡೂಡಲ್ ಗೌರವಾರ್ಪಣೆ ಮಾಡಿದೆ.
“ಮನೆಯಲ್ಲೇ ಇರುವುದು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುವವರಿಗೆ ಧನ್ಯವಾದ ಹೇಳುವ ಅತ್ಯುತ್ತಮ ಮಾರ್ಗವಾಗಿದೆ. ಒಗ್ಗಟ್ಟಾಗಿ ನಾವು ಇದನ್ನು ಹಿಂದೆ ಸರಿಸಬಹುದು”ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ.
The best way to say thank you to all those on the front lines is by staying at home.
Together, we will move past this. ❤️❤️❤️#GoogleDoodle pic.twitter.com/EXSihXojhf
— Google India (@GoogleIndia) April 17, 2020
ಆಹಾರ ಸೇವೆ, ಕೃಷಿ, ದಿನಸಿ ವಿಭಾಗ, ಆರೋಗ್ಯ ಸೇವೆ ಮತ್ತು ವಿವಿಧ ವಲಯಗಳ ಸಂಶೋಧಕರು ಸೇರಿದಂತೆ ವಿವಿಧ ವಲಯಗಳ ಜನರು ಸಂದರ್ಭದಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ. ಇವರಿಗೆ ಗೂಗಲ್ ತನ್ನ ವಿಶೇಷವಾದ ಡೂಡಲ್ ಮೂಲಕ ಧನ್ಯವಾದಗಳನ್ನು ಅರ್ಪಣೆ ಮಾಡಿದೆ.
ಮುಂದಿನ ವಾರದವರೆಗೂ ಧನ್ಯವಾದ ಸರಣಿಯನ್ನು ಮುಂದುವರೆಸುವುದಾಗಿ ಗೂಗಲ್ ಹೇಳಿಕೊಂಡಿದೆ.
ಎಪ್ರಿಲ್ 6ರಿಂದ ಅದು ಆರೋಗ್ಯ ಕಾರ್ಯಕರ್ತರಿಗೆ ಮತ್ತು ವಿಜ್ಜಾನಿಗಳ ಸಮುದಾಯಕ್ಕೆ ಧನ್ಯವಾದಗಳನ್ನು ಮನೆ ಮಾಡುವ ಮೂಲಕ ತನ್ನ ಸರಣಿಯನ್ನು ಪ್ರಾರಂಭಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.