ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡವು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಆರ್ಥಿಕ ಸಹಾಯವನ್ನು ಮಾಡುವ ಸಲುವಾಗಿ ಶುಕ್ರವಾರ ಫನ್ ಫಿಟ್ನೆಸ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ.
ರಾಷ್ಟ್ರವ್ಯಾಪಿಯಾಗಿ ಜಾರಿಯಾಗಿರುವ ಲಾಕ್ಡೌನ್ ಸಂದರ್ಭದಲ್ಲಿ ಆರೋಗ್ಯಯುತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಚಾಲೆಂಜ್ ಪ್ರೇರೇಪಿಸುತ್ತದೆ. ಈ ಚಾಲೆಂಜ್ ಮೂಲಕ ಹಾಕಿ ಆಟಗಾರ್ತಿಯರು ಸುಮಾರು 1000 ಬಡಕುಟುಂಬಗಳಿಗೆ ಆಹಾರವನ್ನು ಒದಗಿಸಲು ಕ್ರೌಡ್ ಫಂಡಿಂಗ್ ಮಾಡಲಿದ್ದಾರೆ.
“ಪ್ರತಿನಿತ್ಯ ನಾವು ಸುದ್ದಿ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಹಾರಕ್ಕಾಗಿ ಹೋರಾಡುತ್ತಿರುವ ಬಗ್ಗೆ ಓದುತ್ತಿದ್ದೇವೆ. ಹೀಗಾಗಿ ನಾವು ಒಂದು ತಂಡವಾಗಿ ಇಂತಹ ಜನರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ” ಎಂದು ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹೇಳಿದ್ದಾರೆ.
“ಇದಕ್ಕಾಗಿ ಆನ್ಲೈನ್ ಫಿಟ್ನೆಸ್ ಚಾಲೆಂಜ್ ಅತ್ಯುತ್ತಮ ಮಾರ್ಗ ಎಂದು ನಾವು ಭಾವಿಸಿದ್ದೇವೆ. ರಾಷ್ಟ್ರವ್ಯಾಪಿ ಲಾಕ್ ಡೌನ್ ಸಂದರ್ಭದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸುವಂತೆಯೂ ಜನರನ್ನು ಪ್ರೇರೇಪಿಸುತ್ತವೆ. ಈ ಕಾರ್ಯಕ್ರಮದ ಮೂಲಕ 11000 ಕುಟುಂಬಗಳಿಗೆ ಆಹಾರ ಪೂರೈಸಲು ಹಣ ಸಂಗ್ರಹಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದಿದ್ದಾರೆ.
ಸಂಗ್ರಹವಾದ ಹಣವನ್ನು ದೆಹಲಿ ಮೂಲದ NGO ಉದಯ್ ಫೌಂಡೇಶನ್ಗೆ ನೀಡಲಾಗುವುದು ಮತ್ತು ಹಣವನ್ನು ವಿವಿಧ ಭಾಗಗಳಲ್ಲಿರುವ ರೋಗಿಗಳಿಗೆ, ವಲಸೆ ಕಾರ್ಮಿಕರಿಗೆ ಮತ್ತು ಸ್ಲಂ ನಿವಾಸಿಗಳಿಗೆ ಅವಶ್ಯಕತೆಗಳನ್ನು ಪೂರೈಸಲು ಬಳಸಲಾಗುವುದು ಎಂದಿದ್ದಾರೆ.
ಆಹಾರ ಸಾಮಗ್ರಿಗಳು ಮಾತ್ರವಲ್ಲದೆ ಸ್ಯಾನಿಟರಿ ಕಿಟ್ಗಳನ್ನೂ ಪೂರೈಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ರಾಣಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.