ನವದೆಹಲಿ: ವಿಶ್ವವೇ ಕೊರೋನಾ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ದೆಹಲಿಯ ಸಾಕೇತ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿಗೆ ಪಾಸ್ಮಾ ಚಿಕಿತ್ಸೆ ನೀಡಲು ಮುಂದಾಗಿದೆ. ಆ ಮೂಲಕ ಕೊರೋನಾಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಈಗಾಗಲೇ ಸರ್ಕಾರದ ಅನುಮತಿಯನ್ನು ಪಡೆದುಕೊಂಡಿದೆ.
ಇಲ್ಲಿನ ಡಿಫೆನ್ಸ್ ಕಾಲೋನಿಯ ನಾಲ್ವರಲ್ಲಿ ಕೊರೋನಾ ಸೋಂಕು ಕಾಣಿಸಿದ್ದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುಟುಂಬದ ತಂದೆ, ತಾಯಿ, ಮಗ ಮತ್ತು ಮಗಳಿಗೆ ಈ ಸೋಂಕು ಕಾಣಿಸಿಕೊಂಡಿದ್ದು ತಾಯಿ ಮತ್ತು ಮಗಳು ಚೇತರಿಸಿಕೊಂಡಿದ್ದಾರೆ. ತಂದೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದೀಗ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿರುವ ಮಗನಿಗೆ ಪ್ಲಾಸ್ಮಾ ಥೆರಪಿ ನಡೆಸುವ ಮೂಲಕ ಮೊದಲ ಪ್ರಯತ್ನಕ್ಕೆ ಆಸ್ಪತ್ರೆ ಮುಂದಾಗಿದೆ.
ಕೋವಿಡ್-19 ಗೆ ಈವರೆಗೆ ಯಾವುದೇ ಔಷಧ ಅಥವಾ ಲಸಿಕೆ ಕಂಡು ಹಿಡಿಯಲಾಗಿಲ್ಲ. ಆದರೆ ಪ್ಲಾಸ್ಮಾ ಚಿಕಿತ್ಸೆಯ ಮೂಲಕ ಪರಿಣಾಮಕಾರಿಯಾಗಿ ಸೋಂಕಿತನನ್ನು ಗುಣಪಡಿಸುವ ವಿಶ್ವಾಸ ವೈದ್ಯರದ್ದು. ಈ ಹಿಂದೆ ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಕೊರೋನಾ ವಿರುದ್ಧ ಪ್ಲಾಸ್ಮಾ ಚಿಕಿತ್ಸೆ ಅನುಸರಿಸಿರುವ ಬಗ್ಗೆಯೂ ವರದಿಗಳು ತಿಳಿಸಿವೆ.
ಇನ್ನು ಈ ಕೊರೋನಾ ಕುಟುಂಬ ದೆಹಲಿಯ ತಬ್ಲಿಘಿ ಜಮಾತ್ ನಂಟನ್ನು ಹೊಂದಿದ್ದು, ಇತರರಿಗೂ ಸೋಂಕು ಹಬ್ಬಿಸಿರುವ ಬಗ್ಗೆ ಅನುಮಾನಗಳಿಗೆ. ಆ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.