ನವದೆಹಲಿ: ಪ್ರಯಾಣಿಕರ ರೈಲು ದಟ್ಟಣೆಯಿಲ್ಲದ ಹಳಿಗಳು ಖಾಲಿ ಖಾಲಿ ಆಗಿರುವ ನಡುವೆಯೇ ಭಾರತೀಯ ರೈಲ್ವೆ (ಐಆರ್) ಅಗತ್ಯ ವಸ್ತುಗಳನ್ನು ಸಾಗಿಸುವ ಮೂಲಕ ಹಣವನ್ನು ಸಂಪಾದಿಸಿದೆ. ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸುವ ಮೂಲಕ 20,400 ಟನ್ ಸರಕುಗಳನ್ನು ಸಾಗಿಸಿದೆ ಮತ್ತು 21 ದಿನಗಳ ಲಾಕ್ ಡೌನ್ ಸಮಯದಲ್ಲಿ 7.54 ಕೋಟಿ ರೂ.ಆದಾಯ ಗಳಿಸಿದೆ.
ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಇ-ಕಾಮರ್ಸ್ ಘಟಕಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಂದ ಸಾಮೂಹಿಕ ಸಾಗಣೆಗೆ ವಿಶೇಷ ಪಾರ್ಸೆಲ್ ವ್ಯಾನ್ಗಳನ್ನು ಲಭ್ಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
“ರೈಲ್ವೆಯ ಆಯ್ದ ಮಾರ್ಗಗಳಲ್ಲಿ ಟೈಮ್ ಟೇಬಲ್ಡ್ ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿತ್ತು, ಅಗತ್ಯ ವಸ್ತುಗಳ ನಿರಂತರ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಅವರು ಹೇಳಿದರು. ಅಲ್ಲದೇ, ಈ ವಿಶೇಷ ಪಾರ್ಸೆಲ್ ರೈಲುಗಳನ್ನು 65 ಮಾರ್ಗಗಳಲ್ಲಿ ಚಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 14 ರಂದು ಸಂಜೆ 6 ಗಂಟೆಯ ಹೊತ್ತಿಗೆ 77 ರೈಲುಗಳಲ್ಲಿ 75 ಟೈಮ್ ಟೇಬಲ್ಡ್ ವಿಶೇಷ ಪಾರ್ಸೆಲ್ ರೈಲುಗಳ ಮೂಲಕ 1,835 ಟನ್ ಸಾಮಗ್ರಿಗಳನ್ನು ಲೋಡ್ ಮಾಡಲಾಗಿದ್ದು, ಒಂದು ದಿನದಲ್ಲಿ 63 ಲಕ್ಷ ರೂ.ಗಳಿಸಲಾಗಿದೆ ಎಂದಿದ್ದಾರೆ.
ಎಪ್ರಿಲ್ 14ರಂದು ಸಂಜೆ 6 ಗಂಟೆಯ ಹೊತ್ತಿಗೆ 522 ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸಲಾಗಿದೆ. 458 ಟೈಮ್ ಟೇಬಲ್ಡ್ ರೈಲುಗಳಾಗಿದ್ದು, ಅವುಗಳ ಮೂಲಕ 20,474 ಟನ್ ಸರಕು ರವಾನೆಯಾಗಿದೆ.
ಮಾರ್ಚ್ 24 ರಿಂದ ಏಪ್ರಿಲ್ 14 ರವರೆಗೆ ಪ್ರಯಾಣಿಕ, ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳನ್ನು ಅಮಾನತುಗೊಳಿಸುವುದಾಗಿ ರೈಲ್ವೇ ಘೋಷಿಸಿತ್ತು. ಆದರೆ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಣೆ ಮಾಡಿರುವುದರಿಂದ ಅಮಾನತನ್ನು ಇದು ವಿಸ್ತರಿಸಿದೆ ಮತ್ತು ಮುಂದಿನ ಸೂಚನೆ ಬರುವವರೆಗೂ ಟಿಕೆಟ್ ಕಾಯ್ದಿರಿಸುವಿಕೆಯನ್ನು ನಿಲ್ಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.