ನವದೆಹಲಿ: ಕೊರೋನಾ ಸೋಂಕು ನಿವಾರಣೆಗಾಗಿ ಎಪ್ರಿಲ್ 14 ರ ವರೆಗೆ ಜಾರಿಯಲ್ಲಿದ್ದ ಲಾಕ್ಡೌನ್ ಕ್ರಮವನ್ನು ಕೇಂದ್ರ ಸರ್ಕಾರ ಮೇ 3 ರ ವರೆಗೆ ಮುಂದುವರಿಸಿ ಆದೇಶ ಹೊರಡಿಸಿದೆ. ಈ 21 ದಿನಗಳಲ್ಲಿ ಸೋಂಕು ತಗುಲಿದ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಮುಂದಿನ 19 ದಿನಗಳ ವರೆಗೂ ಕೇಂದ್ರ ಸರ್ಕಾರ ಈ ಕ್ರಮವನ್ನು ಮುಂದುವರಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಯಾವುದಾದರೊಂದು ಪ್ರದೇಶದಲ್ಲಿ 28 ದಿನಗಳಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗದೆ ಇದ್ದಲ್ಲಿ ಮಾತ್ರವೇ ಆ ಪ್ರದೇಶವನ್ನು ಕೊರೋನಾ ಮುಕ್ತ ಪ್ರದೇಶ ಎಂದು ಘೋಷಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಅಲ್ಲದೆ 21 ದಿನಗಳ ಕಾಲದ ಲಾಕ್ಡೌನ್ ನಲ್ಲಿ ಸೋಂಕು ಕಡಿಮೆಯಾಗಿಲ್ಲ. ನಿನ್ನೆ ಒಂದೇ ದಿನ 34 ಮಂದಿ ಸೋಂಕಿನಿಂದ ಮೆತಪಟ್ಟಿದ್ದರೆ, 1211 ಹೊಸ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ದೇಶದಲ್ಲಿ 339 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು 28 ದಿನಗಳಲ್ಲಿ ಸೋಂಕು ಪತ್ತೆಯಾಗದ ಪ್ರದೇಶಗಳನ್ನಷ್ಟೇ ಸಂಪೂರ್ಣ ಸೋಂಕು ಮುಕ್ತ ಪ್ರದೇಶಗಳೆಂದು ತಿಳಿಯಲಾಗುವುದು. ಆಗ ಮಾತ್ರ ವೈರಸ್ ಹರಡುವಿಕೆಯಿಂದ ಆ ಪ್ರದೇಶ ಸಂಪೂರ್ಣ ಮುಕ್ತವಾಗಿದೆ ಎಂದು ಹೇಳಬಹುದು ಎಂಬುದಾಗಿಯೂ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.