ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ಪತ್ತೆ ಹಚ್ಚುವ 176 ಸರ್ಕಾರಿ ಮತ್ತು 78 ಖಾಸಗಿ ಲ್ಯಾಬ್ಗಳ ಪಟ್ಟಿಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿದೆ.
ದೇಶದ ವಿವಿಧ ರಾಜ್ಯಗಳಿಗೆ ಸಂಬಂಧಿಸಿದಂತೆ ಗಮನ ಹರಿಸಿ ಈ ಪಟ್ಟಿ ಸಿದ್ಧ ಮಾಡಲಾಗಿದೆ. ಸರ್ಕಾರಿ ಲ್ಯಾಬ್ಗಳ ಪಟ್ಟಿಯಲ್ಲಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜ್, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಇನ್ಸ್ಟಿಟ್ಯೂಟ್ ಆಫ್ ಲಿವರ್ & ಬಿಲಿಯರಿ ಸೈನ್ಸಸ್, ಆರ್ಮಿ ಹಾಸ್ಪಿಟಲ್ ರಿಸರ್ಚ್ & ರೆಫರಲ್, ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು, ವರ್ಧಮಾನ ಮಹಾವೀರ ಮೆಡಿಕಲ್ ಕಾಲೇಜು, ಸಫ್ದರ್ಜಂಗ್ ಆಸ್ಪತ್ರೆ ಸೇರಿದಂತೆ ದೆಹಲಿಯ 8 ಲ್ಯಾಬ್ಗಳು ಸೇರಿವೆ.
ಅಲ್ಲದೆ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 17, ಉತ್ತರಪ್ರದೇಶದಲ್ಲಿ 15, ಕರ್ನಾಟಕದಲ್ಲಿ 12, ಕೇರಳದಲ್ಲಿ 10, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಒಂಬತ್ತು, ರಾಜಸ್ಥಾನದಲ್ಲಿ ಎಂಟು, ಆಂಧ್ರಪ್ರದೇಶದಲ್ಲಿ ಏಳು, ಅಸ್ಸಾಂ ಮತ್ತು ಬಿಹಾರದ ಐದು ಲ್ಯಾಬ್ಗಳನ್ನೂ ಈ ಪಟ್ಟಿಯಲ್ಲಿ ಗುರುತಿಸಲಾಗಿದೆ.
ಇನ್ನು ಖಾಸಗಿ ಲ್ಯಾಬ್ಗಳ ಪಟ್ಟಿಯಲ್ಲಿ ದೆಹಲಿಯ 9 ಲ್ಯಾಬ್ಗಳು, ಹರಿಯಾಣದ 6, ಮಹಾರಾಷ್ಟ್ರದಲ್ಲಿ ಅಂತಹ 17 , ತೆಲಂಗಾಣದಲ್ಲಿ 12 , ತಮಿಳುನಾಡು 10, ಪಶ್ಚಿಮ ಬಂಗಾಳ 6, ಉತ್ತರ ಪ್ರದೇಶ 2, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶದಲ್ಲಿ ತಲಾ 1 ಲ್ಯಾಬ್ಗಳನ್ನು ಪಟ್ಟಿಯಲ್ಲಿ ಗುರುತಿಸಲಾಗಿದೆ.
ಎಪ್ರಿಲ್ 15 ರಂದು 28,941 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 953 ಕೊರೋನಾ ಪಾಸಿಟಿವ್ ಕೇಸ್ಗಳು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.