ನವದೆಹಲಿ : ದೇಶದಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 78000 ಸ್ವಸಹಾಯ ಗುಂಪಿನ ಸದಸ್ಯರು ಅಗತ್ಯ ಆರೋಗ್ಯ ರಕ್ಷಕ ಪಿಪಿಇ ಕಿಟ್ಗಳನ್ನು ತಯಾರಿಸುವ ಮೂಲಕ ಅಗತ್ಯವಿರುವವರಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ದೇಶದಲ್ಲಿ ಕೊರತೆ ಇರುವ ಅಗತ್ಯ ಪಿಪಿಇ ಕಿಟ್ಗಳನ್ನು ತಯಾರಿಸಿ ಕೊರೋನಾ ವಿರುದ್ಧ ದೇಶವನ್ನು ಸಂರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು ಈ ಗುಂಪುಗಳು ಈ ವರೆಗೆ 5000 ಪಿಪಿಇ ಕಿಟ್ಗಳನ್ನು ತಯಾರಿಸಿ ನೀಡಿರುವುದಾಗಿ ತಿಳಿಸಿದೆ.
ಮಧ್ಯ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಕರ್ನಾಟಕವೂ ಸೇರಿದಂತೆ 27 ರಾಜ್ಯಗಳ 78000 ಸ್ವಸಹಾಯ ಗುಂಪುಗಳು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆ ಮೂಲಕ ದೇಶಕ್ಕೆ ಅತ್ಯವಶ್ಯಕವಾದ ಪಿಪಿಇ ಕಿಟ್ಗಳನ್ನು ತಯಾರಿಸಿ ಕೊಡುವುದರ ಜೊತೆಗೆ ಸೇವೆ ನೀಡುತ್ತಿದ್ದಾರೆ.
ಈ ವರೆಗೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಸಹಾಯ ಸಂಘಗಳು ಸುಮಾರು 2 ಕೋಟಿಗಳಷ್ಟು ಮುಖಗವಸುಗಳು, 1 ಲಕ್ಷದ 15 ಸಾವಿರ ಲೀಟರ್ ಗಳಷ್ಟು ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಪಿಪಿಇ ಸಾಧನಗಳನ್ನು ತಯಾರಿಸಿ ನೀಡಿವೆ. ಈ ವಸ್ತುಗಳನ್ನು ಆರೋಗ್ಯ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು, ಪೊಲೀಸರು ಸೇರಿದಂತೆ ಇನ್ನಿತರ ತೀರಾ ಅಗತ್ಯವುಳ್ಳವರಿಗೆ ನೀಡುವ ಕೆಲಸವನ್ನು ಮಾಡುತ್ತಿವೆ.
ಅನಿವಾರ್ಯ ಪರಿಸ್ಥಿತಿಗಳು ಯಾವಾಗ ನಿರ್ಮಾಣವಾಗುವುದೋ ಹೇಳುವುದು ಅಸಾಧ್ಯ. ಆದರೆ ಅಂತಹ ಸಂದರ್ಭದಲ್ಲಿಯೂ ಧೃತಿಗೆಡದೆ ಪರಿಸ್ಥಿತಿ ಎದುರಿಸಿ ಇತರರಿಗೂ ಮಾದರಿಯಾಗುವುದು ಸಾಮಾನ್ಯ ವಿಚಾರವಲ್ಲ. ಇದೀಗ ಸ್ವಸಹಾಯ ಗುಂಪುಗಳ ಈ ಮಾದರಿ ಕಾರ್ಯ ಎಲ್ಲರಿಗೂ ದಾರಿದೀಪ ಎಂದರೂ ತಪ್ಪಾಗದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.