ನವದೆಹಲಿ: ಇಡೀ ಜಗತ್ತು ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿಹೋಗಿದೆ. ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಅತ್ಯಂತ ಪರಿಣಾಮಕಾರಿ ಔಷಧ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಔಷಧಕ್ಕಾಗಿ ಭಾರತಕ್ಕೆ ಮೊರೆ ಇಟ್ಟಿವೆ.
ಈ ಹಿನ್ನೆಲೆಯಲ್ಲಿ ಭಾರತವು ಔಷಧವನ್ನು ರಪ್ತು ಮಾಡಲು 13 ದೇಶಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದೆ. ಭಾರತವು ಹೈಡ್ರಾಕ್ಸಿಕ್ಲೋರುಕ್ವಿನ್ ಮತ್ತು ಇತರ ಔಷಧಗಳನ್ನು ಸುಮಾರು 25 ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. 14 ಮಿಲಿಯನ್ ಹೈಡ್ರಾಕ್ಸಿಕ್ಲೋರುಕ್ವಿನ್ ಔಷಧಿಗಳನ್ನು ರಪ್ತು ಮಾಡಲು ಭಾರತವು ಅನುಮೋದನೆಯನ್ನು ಪಡೆದುಕೊಂಡಿದೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಭಾರತದ ಈ ಔಷಧವು ಗೇಮ್ ಚೇಂಜರ್ ಆಗಲಿದೆ ಎಂದು ನಂಬಲಾಗಿದೆ. ಅಮೆರಿಕ, ಸ್ಪೇನ್ ಮತ್ತು ಜರ್ಮನಿ, ಬ್ರೆಜಿಲ್, ಬಹರೇನ್, ನೇಪಾಳ, ಅಫ್ಘಾನಿಸ್ಥಾನ, ಮಾಡಿಸ್ ಮತ್ತು ಬಾಂಗ್ಲಾದೇಶಗಳಿಗೆ ಔಷಧವನ್ನು ಭಾರತ ರಫ್ತು ಮಾಡಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೋವಿಡ್-19 ನೋಡಲ್ ಅಧಿಕಾರಿ ದಮ್ಮು ರವಿ ಅವರು, “ಹೈಡ್ರಾಕ್ಸಿಕ್ಲೋರುಕ್ವಿನ್ ಔಷಧಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಔಷಧಿ ಪೂರೈಕೆಗೆ ಮನವಿಗಳು ಬಂದಿದೆ. ಹೀಗಾಗಿ ಔಷಧವನ್ನು ರಫ್ತು ಮಾಡಲು ಭಾರತ ನಿರ್ಧರಿಸಿದೆ. ದೇಶಿಯ ಸಂಗ್ರಹದ ಲಭ್ಯತೆಯ ಆಧಾರದ ಮೇಲೆ ರಫ್ತು ಮಾಡಲಾಗುತ್ತದೆ. ರಫ್ತು ಮಾಡಲಾಗುವ ದೇಶಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ” ಎಂದಿದ್ದಾರೆ.
ಭಾರತವು ಸಾರ್ಕ್ ದೇಶಗಳಿಗೆ ಮತ್ತು ಮಾರಿಷಿಯಸ್ ಹಾಗೂ ಸೆಷಲ್ಸ್ನಂತಹ ಹಿಂದೂ ಮಹಾಸಾಗರದ ದೇಶಗಳಿಗೆ ಮಾನವೀಯ ಆಧಾರದ ಮೇಲೆ ಔಷಧಿಗಳನ್ನು ಪೂರೈಕೆ ಮಾಡುತ್ತಿದೆ. ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೂ ಮಾನವೀಯ ಸಹಾಯಗಳನ್ನು ನೀಡುತ್ತಿದೆ.
ಭಾರತವು ಪ್ರಸ್ತುತ ಲಭ್ಯತೆಯ ಆಧಾರದ ಮೇಲೆ ಎಲ್ಲಾ ದೇಶಗಳ ಮನವಿಗಳನ್ನು ಪುರಸ್ಕರಿಸುತ್ತಿದೆ ಮತ್ತು ವಾಣಿಜ್ಯ ಆಧಾರದ ಮೇಲೆ ಇವುಗಳನ್ನು ಪೂರೈಕೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.