ಲಕ್ನೋ: ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್ಗಳು ಸೇರಿದಂತೆ ಇನ್ನೂ ಅನೇಕ ಮಂದಿ ಆರೋಗ್ಯ ರಕ್ಷಕರು ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಅವರಿಗೆ ತಮಗೆ ಸೋಂಕು ತಗುಲದಂತೆ ಕಾಪಾಡಿಕೊಳ್ಳುವುದಕ್ಕೆ ಬೇಕಾದ ಅಗತ್ಯ ಪಿಪಿಇ ಸೌಲಭ್ಯಗಳ ಕೊರತೆಯೂ ಕಂಡು ಬರುತ್ತಿದೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಮುಂದಾಗಿದ್ದು, ಖೈದಿಗಳನ್ನು ಬಳಸಿ ಅಗತ್ಯ ಪಿಪಿಇ ರಕ್ಷಣಾ ಸಾಮಗ್ರಿಗಳನ್ನು ಸಿದ್ಧ ಮಾಡಲು ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಇಲಾಖೆಯ ಅಧಿಕಾರಿ ಆನಂದ್ ಕುಮಾರ್, ಈಗಾಗಲೇ 50 ರಷ್ಟು ಪಿಪಿಇ ಕಿಟ್ಗಳನ್ನು ಜೈಲಿನ ಕೈದಿಗಳು ತಯಾರಿಸಿದ್ದು, ಮತ್ತಷ್ಟು ಕಿಟ್ಗಳ ತಯಾರಿಯಲ್ಲಿ ತೊಡಗಿದ್ದಾರೆ. ಈ ವರೆಗೆ ಉತ್ತರ ಪ್ರದೇಶದ 67 ಜೈಲುಗಳಲ್ಲಿನ 80 ಸಾವಿರಕ್ಕೂ ಅಧಿಕ ಮಾಸ್ಕ್ಗಳನ್ನು ತಯಾರಿಸಿವೆ. ಸೋಂಕು ನಿವಾರಕ ಹ್ಯಾಂಡ್ವಾಶ್, ಸ್ಯಾನಿಟೈಸರ್ಗಳ ತಯಾರಿಯನ್ನೂ ಮಾಡಲಾಗುತ್ತಿದೆ. ಇನ್ನು ಇಲ್ಲಿ ತಯಾರಾದ ಪಿಪಿಇ ಗಳನ್ನು ಬಲರಾಂ ಪುರದ ಆಸ್ಪತ್ರೆಯ ಸಿಬ್ಬಂದಿಗಳಿಗೆ ನೀಡಲಾಗುವುದು ಎಂದೂ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಇವುಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಆಸ್ಪತ್ರೆಯೇ ಒದಗಿಸಿರುವುದಾಗಿಯೂ ಇಲಾಖೆ ಹೇಳಿದೆ.
ಒಂದು ಕಿಟ್ನ ತಯಾರಿಕೆಗೆ 600 ರೂ. ಗಳಷ್ಟು ಬೇಕಾಗಿದೆ. 150 ಕಿಟ್ಗಳನ್ನು ತಯಾರಿಸಿ ಕೊಡುವಂತೆ ಆಸ್ಪತ್ರೆಯ ಆಡಳಿತ ವರ್ಗ ತಿಳಿಸಿದೆ. ಹಜರತ್ಗಂಜ್ನ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಆಸ್ಪತ್ರೆಯ ಬೇಡಿಕೆಯಂತೆ ಇವುಗಳನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಿರುವ ಕುಮಾರ್, ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಕೈದಿಗಳನ್ನೂ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.